ಕಾಳಮ್ಮ ಕೆಂಪರಾಮಯ್ಯಗೆ `ಬಯಸದೇ ಬಂದ ಭಾಗ್ಯ’!
ಮೈಸೂರು

ಕಾಳಮ್ಮ ಕೆಂಪರಾಮಯ್ಯಗೆ `ಬಯಸದೇ ಬಂದ ಭಾಗ್ಯ’!

December 20, 2018

ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿ ಸಿದ್ದ ಜೆಡಿಎಸ್‍ಗೆ ತೀವ್ರ ಮುಖಭಂಗ ಉಂಟಾಗಿದ್ದು, ಸ್ವಪಕ್ಷ ಜೆಡಿಎಸ್ ವಿರುದ್ಧವೇ ಸೆಟೆದು ನಿಂತಿದ್ದ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ಮುಂದಿನ ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.

ಮೈಸೂರು ತಾಲೂಕು ಪಂಚಾಯಿತಿ ಗದ್ದುಗೆ ಹಿಡಿ ದಿದ್ದ ಜೆಡಿಎಸ್ ಮೊದಲ ಅವಧಿಗೆ ಕಾಳಮ್ಮ ಕೆಂಪರಾಮಯ್ಯ ಅವರನ್ನು ಅಧ್ಯಕ್ಷೆಯಾಗಿ ಹಾಗೂ ಎನ್.ಬಿ.ಮಂಜು ಅವ ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. ಒಪ್ಪಂದ ಪ್ರಕಾರ 2016ರ ಮೇ 21ರಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಳಮ್ಮ 2018ರ ಮೇ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರ ಅಧಿಕಾರಾವಧಿಯಲ್ಲಿ ಒಂದು ವರ್ಷ ವಾದರೂ ತಾಪಂ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಬಯಸಿದ್ದ ಕಾಳಮ್ಮ ಅವರಿಗೆ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಮೂರು ಬಾರಿ ಸಾಮಾನ್ಯ ಸಭೆ ಕರೆದಿದ್ದರು. ಇದಕ್ಕೆ ಸ್ವಪಕ್ಷ ಜೆಡಿಎಸ್ ಸದಸ್ಯರೇ ಗೈರು ಹಾಜರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದರು.

ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿ, ಗೈರಾದರು: ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರ ವಿರುದ್ಧ ಜೆಡಿಎಸ್ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದಕ್ಕಾಗಿ ಜೆಡಿಎಸ್ ಸದಸ್ಯರು ಸಹಿ ಮಾಡಿದ್ದ ಅವಿಶ್ವಾಸ ಗೊತ್ತುವಳಿ ಪತ್ರವನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಸಾಬೀತು ಪಡಿಸುವುದಕ್ಕಾಗಿ ಮಧ್ಯಾಹ್ನ 12ಕ್ಕೆ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಇದಕ್ಕಾಗಿ ಕಾಂಗ್ರೆಸ್‍ನ ಎಲ್ಲಾ 13 ಸದಸ್ಯರು ಪಾಲ್ಗೊಂಡಿದ್ದರು. ಆದರೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಮಾತ್ರ ಸಭೆಯಿಂದ ದೂರವುಳಿದರು. ಆಡಳಿತ ಪಕ್ಷದ ಸದಸ್ಯರು ಸಭೆಗೆ ಆಗಮಿಸದೆ ಇದ್ದುದರಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ತಾ.ಪಂ ಇಒ ಲಿಂಗರಾಜಯ್ಯ ಅವರು 30 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಸಮಯ ನೀಡಿದರು. ಆದರೂ ಆಡಳಿತ ಪಕ್ಷದ ಸದಸ್ಯರು ಬಾರದೆ ಇದ್ದುದರಿಂದ ಅವಿಶ್ವಾಸ ಗೊತ್ತುವಳಿ ಸಭೆ ವಿಫಲವಾಗಿ ಅಧ್ಯಕ್ಷೆ ಕಾಳಮ್ಮ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಮೇಲುಗೈ ಸಾಧಿಸಿದರು.

ಇದೇ ವೇಳೆ ತಾಪಂ ಇಒ ಲಿಂಗರಾಜಯ್ಯ ಮಾತ ನಾಡಿ, ಗೊತ್ತುವಳಿ ಮಂಡಿಸಿದ್ದ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದಾರೆ. ಇದರಿಂದ ಸಭೆ ರದ್ದಾಗಿದೆ. ಪಂಚಾ ಯತ್ ರಾಜ್ ಆಕ್ಟ್ ಪ್ರಕಾರ 140/3ರ ಪ್ರಕಾರ ಒಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಿ, ವಿಫಲವಾದರೆ ಮತ್ತೆ ಎರಡು ವರ್ಷಗಳವರೆಗೂ ಗೊತ್ತುವಳಿ ಮಂಡಿಸಲು ಸಾಧ್ಯ ವಿಲ್ಲ. ಮುಂದಿನ ಎರಡು ವರ್ಷಗಳವರೆಗೂ ಕಾಳಮ್ಮ ಅವರು ಅಧ್ಯಕ್ಷೆಯಾಗಿ ಮುಂದುವರೆಯಬಹುದು ಎಂದರು.
ದಲಿತ ಮಹಿಳೆ ಎಂಬ ಕಾರಣಕ್ಕೆ: ಅವಿಶ್ವಾಸ ಗೊತ್ತುವಳಿ ಸಭೆ ರದ್ದಾಗಿ, ಎರಡು ವರ್ಷಗಳ ಕಾಲ ನಿರಾತಂಕವಾಗಿ ಅಧಿಕಾರದಲ್ಲಿ ಮುಂದುವರೆಯಬಹುದಾದ ವಿಷಯ ತಿಳಿದು, ನೆರವು ನೀಡಿದ ಕಾಂಗ್ರೆಸ್ ಸದಸ್ಯರೊಂದಿಗೆ ವಿಜಯದ ಸಂಕೇತ ಪ್ರದರ್ಶಿಸಿ ಸಂಭ್ರಮಿಸಿದ ಕಾಳಮ್ಮ ಪತ್ರಕರ್ತರೊಂದಿಗೆ ಮಾತನಾಡಿ, ನಾನು ದಲಿತ ಮಹಿಳೆ ಎಂಬ ಏಕೈಕ ಕಾರಣದಿಂದಾಗಿ ನನ್ನ ವಿರುದ್ಧ ಉಪಾಧ್ಯಕ್ಷ ಎನ್.ಬಿ.ಮಂಜು ಸಂಚು ನಡೆಸಿದ್ದಾರೆ. ಸ್ವಜಾತಿ ರಾಜಕಾರಣ ದಿಂದ ನನಗೆ ಆಡಳಿತ ನಡೆಸಲು ಅವಕಾಶ ನೀಡದೆ ಕಿರು ಕುಳ ನೀಡುತ್ತಾ ಬಂದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರಲ್ಲಿ ಕೇಳಿಕೊಂಡರೂ ಯಾವುದೇ ಪ್ರಯೋ ಜನವಾಗಲಿಲ್ಲ. ಉಪಾಧ್ಯಕ್ಷರ ಮಾತನ್ನು ಕೇಳಿ ರಾಜೀನಾಮೆ ನೀಡುವಂತೆ ಸೂಚಿಸಿದರು. ಬಾಬಾ ಸಾಹೇಬ್ ಅಂಬೇ ಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಂತೆ ಅಧಿ ಕಾರ ನಡೆಸುತ್ತೇನೆ. ತಾಪಂ ಸದಸ್ಯ ಹನುಮಂತು ಎಂಬು ವರು ನನ್ನ ಮೇಲೆ ಹಲ್ಲೆ ನಡೆಸಲು ಚೇರ್ ಎತ್ತಿಕೊಂಡು ಬಂದರು. ಉಪಾಧ್ಯಕ್ಷ ಸ್ಥಾನ ಒಂದು ವರ್ಷಕ್ಕೆ ಸೀಮಿತವಾಗಿದ್ದರೂ ಅವರಿಂದ ರಾಜೀನಾಮೆ ಕೇಳಲಿಲ್ಲ. ದಲಿತರಿಗೆ ಒಂದು, ಮೇಲ್ವರ್ಗಕ್ಕೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿ ಗದ್ಗದಿತರಾದರು.

ನಾವೇ ಬಿಟ್ಟು ಕೊಟ್ಟೋ: ತಾಪಂ ಉಪಾಧ್ಯಕ್ಷ ಎನ್.ಬಿ. ಮಂಜು ಮಾತನಾಡಿ, ನಮ್ಮ ಒಳ ಒಪ್ಪಂದದಂತೆ ಅಧ್ಯಕ್ಷರು ತಮ್ಮ ಅವಧಿ ಮುಗಿದಿದ್ದರಿಂದ ಅಧಿಕಾರ ಬಿಟ್ಟು ಕೊಡಬೇಕಾ ಗಿತ್ತು. ಅವರು ಅದಕ್ಕೆ ಒಪ್ಪದಿದ್ದರಿಂದ ಜೆಡಿಎಸ್ ಸದಸ್ಯರೆಲ್ಲ ಸೇರಿ ಅವಿಶ್ವಾಸ ಗೊತ್ತುವಳಿ ಮೂಲಕ ಕೆಳಗಿಳಿಸಲು ನಿರ್ಧ ರಿಸಿz್ದÉವು. ಇಂದು ಬೆಳಿಗ್ಗೆ ಜೆಡಿಎಸ್ ವರಿಷ್ಠರು ಹಾಗೂ ಸಚಿವ ಜಿ.ಟಿ.ದೇವೇಗೌಡ ಅವರು ಯಾವುದೇ ಕಾರಣಕ್ಕೂ ಅವಿಶ್ವಾಸ ನಿರ್ಣಯ ಆಗುವುದು ಬೇಡ. ಕಾಳಮ್ಮ ಅವರು ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲು ಸೂಚನೆ ನೀಡಿದ್ದಾರೆ. ಅದರಂತೆ ನಾವು ಸಭೆಗೆ ಗೈರಾಗಿ, ಅವಿಶ್ವಾಸ ಗೊತ್ತುವಳಿ ಮಂಡನೆ ಕೈಬಿಟ್ಟಿz್ದÉೀವೆ ಎಂದು ತಿಳಿಸಿದರು.

ಮಾಜಿ ಸಿಎಂ ಕಡೆಗಣಿಸಿದ್ದರು: ತಾಪಂ ಅಧ್ಯಕ್ಷರ ಬದ ಲಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದ ರಾಮಯ್ಯ ಅವರೊಂದಿಗೆ ಚರ್ಚಿಸದೆ ಕಡೆಗಣಿಸಿದ್ದರಿಂದ ಅಧ್ಯಕ್ಷೆಯ ಪರ ಕಾಂಗ್ರೆಸ್ ಬೆಂಬಲ ನೀಡಲು ಕಾರಣವಾ ಯಿತು ಎಂದು ಕಾಂಗ್ರೆಸ್ ಸದಸ್ಯರು ತಿಳಿಸಿದ್ದಾರೆ. ಮತ್ತೊಂ ದೆಡೆ ಜೆಡಿಎಸ್‍ನ ಕೆಲ ಸದಸ್ಯರೂ ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಏಕಾಏಕಿ ಕೆಲವು ಸದಸ್ಯರು ಮುಂದಾಲೋಚನೆ ಯಿಲ್ಲದೆ ಅವಿಶ್ವಾಸ ಮಂಡಿಸಿ ಮುಖಭಂಗಕ್ಕೀಡಾಗಿದ್ದಾರೆ.

Translate »