ರಾತ್ರಿ 8ರ ನಂತರ ಪೆಟ್ರೋಲ್ ಬಂಕ್‍ಗಳು ಬಂದ್
ಮೈಸೂರು

ರಾತ್ರಿ 8ರ ನಂತರ ಪೆಟ್ರೋಲ್ ಬಂಕ್‍ಗಳು ಬಂದ್

December 20, 2018

ಮೈಸೂರು: ಸಮಾಜಘಾತುಕ ಕಿಡಿಗೇಡಿಗಳಿಂದ ಪೆಟ್ರೋಲ್ ಬಂಕ್‍ಗಳ ಸಿಬ್ಬಂದಿ ಮೇಲೆ ಪದೇ ಪದೆ ಹಲ್ಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಜೀವನಕ್ಕೆ ಭದ್ರತೆ ಇಲ್ಲದ ಕಾರಣ ಇನ್ನು ಮುಂದೆ ರಾತ್ರಿ 8ರ ನಂತರ ಪೆಟ್ರೋಲ್ ಬಂಕ್‍ಗಳನ್ನು ಮುಚ್ಚಲಾಗು ವುದು ಎಂದು ಫೆಡರೇಷನ್ ಆಫ್ ಮೈಸೂರು ಪೆಟ್ರೋಲಿಯಂ ಟ್ರೇಡರ್ಸ್ ಎಚ್ಚರಿಕೆ ನೀಡಿದೆ.

ಫೆಡರೇಷನ್ ಆಫ್ ಮೈಸೂರು ಪೆಟ್ರೋ ಲಿಯಂ ಟ್ರೇಡರ್ಸ್‍ನ ಅಧ್ಯಕ್ಷ ಬಸವೇಗೌಡ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಡಿ.15ರಂದು ಮಧ್ಯರಾತ್ರಿ 12.45ರ ಸಮಯದಲ್ಲಿ ಹಿನಕಲ್ ಬಳಿ ಅನ್ನಪೂರ್ಣ ಸರ್ವಿಸ್ ಸ್ಟೇಷನ್‍ನ ಸಿಬ್ಬಂದಿ ಮತ್ತು ಮಾಲೀ ಕರ ಮೇಲೆ ಕಿಡಿಗೇಡಿಗಳ ತಂಡ ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಸಿಸಿ ಟಿವಿಯನ್ನೂ ಧ್ವಂಸಗೊಳಿಸಿದೆ. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಬಂಕ್ ಮಾಲೀಕ ವಿನೋದ್ ಅವರ ಜೀವ ಉಳಿ ದಿದ್ದೇ ಹೆಚ್ಚು ಎಂದು ಹೇಳಿದರು.

ಅಂದು ರಾತ್ರಿ ಪೆಟ್ರೋಲ್ ಭರಿಸಲು ಆಗಮಿಸಿದ್ದ ವ್ಯಕ್ತಿಯೊಬ್ಬ ಬಂಕ್ ವ್ಯಾಪ್ತಿಯಲ್ಲಿ ಸಿಗರೇಟು ಸೇದಲು ಮುಂದಾದರು. (ಅದೇ ಸಮಯದಲ್ಲಿ 1200 ಲೀಟರ್ ಪೆಟ್ರೋಲ್ ಅನ್‍ಲೋಡ್ ಆಗುತ್ತಿತ್ತು) ಅವ ರನ್ನು ತಡೆದು ಹೊರ ಕಳಿಸಿದ್ದರಿಂದ ಕುಪಿತ ರಾದ ಆತ, ತಂಡ ಕಟ್ಟಿಕೊಂಡು ಬಂದು ತಮ್ಮ ಮೇಲೆ ಏಕಾಏಕಿ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಯಿಂದ ಕಣ್ಣು, ತಲೆ ಇನ್ನಿತರ ದೇಹದ ಭಾಗಗಳಿಗೆ ಗಾಯವಾಗಿದೆ. ಘಟನೆ ಯಿಂದ ತೀರಾ ಭಯಭೀತರಾಗಿರುವುದಾಗಿ ಹಲ್ಲೆಗೊಳಗಾದ ವಿನೋದ್ ಘಟನೆ ಯನ್ನು ವಿವರಿಸಿದರು.

ಉಪಾಧ್ಯಕ್ಷ ನಾರಾಯಣಸ್ವಾ,ಮಿ ಮಾತ ನಾಡಿ, ಆರೋಪಿಗಳಿಗೆ ಪ್ರಭಾವಿಗಳ ಶ್ರೀರಕ್ಷೆ ಇದೆ. ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದರೂ ಪ್ರಭಾವಿಗಳ ಕೃಪಾ ಕಟಾಕ್ಷದಿಂದ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದರಿಂದ ಭಯದ ವಾತಾವರಣದಲ್ಲಿ ಪೆಟ್ರೋಲ್ ಬಂಕ್‍ಗಳನ್ನು ನಿರ್ವಹಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗ ಬೇಕು. ಉದ್ಯಮಕ್ಕೆ ಹಾಗೂ ತಮಗೆ ಸೂಕ್ತ ಭದ್ರತೆ ಒದಗಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಸಂಘದಿಂದ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಆರ್. ಪಾಟೀಲ್, ಹಲ್ಲೆಗೊಳಗಾದ ವಿನೋದ್ ಅವರ ತಂದೆ ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.

Translate »