ಅನಧಿಕೃತ ತಂಬಾಕು ಬೆಳೆಗಾರರಿಗೂ ಲೈಸೆನ್ಸ್ ಕಲ್ಪಿಸಿ
ಮೈಸೂರು

ಅನಧಿಕೃತ ತಂಬಾಕು ಬೆಳೆಗಾರರಿಗೂ ಲೈಸೆನ್ಸ್ ಕಲ್ಪಿಸಿ

December 20, 2018

ಮೈಸೂರು:  ಕರ್ನಾಟಕ ದಲ್ಲಿ ಅನಧಿಕೃತವಾಗಿ ವಿಎಫ್‍ಸಿ ತಂಬಾಕು ಬೆಳೆಯುತ್ತಿರುವ ಕೃಷಿಕರೆಲ್ಲರಿಗೂ ಅಧಿಕೃತ ಲೈಸೆನ್ಸ್ ನೀಡುವಂತೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಇದೇ ಡಿ.17ರಂದು ಕೇಂದ್ರ ವಾಣಿಜ್ಯ ಸಚಿವರನ್ನು ದೆಹಲಿಯ ಅವರ ಕಚೇರಿ ಯಲ್ಲಿ ಭೇಟಿ ಮಾಡಿದ ಸಂಸದರು, ನಾನು ಒಬ್ಬ ಸಂಸದನಾಗಿ `ಅಧಿಕೃತ’ ತಂಬಾಕು ಬೆಳೆಗಾರರನ್ನಷ್ಟೇ ಅಲ್ಲ, `ಅನಧಿಕೃತ’ ತಂಬಾಕು ಬೆಳೆಗಾರರನ್ನೂ ಪ್ರತಿನಿಧಿಸುತ್ತೇನೆ. ನನ್ನ ಕ್ಷೇತ್ರ ಸೇರಿದಂತೆ ಕರ್ನಾಟಕದಲ್ಲಿನ ಅನಧಿಕೃತ ತಂಬಾಕು ಬೆಳೆಗಾರರ ಸಂಖ್ಯೆ 26,019ರಷ್ಟಿದೆ. ಇವರೆಲ್ಲರೂ ಕಳೆದ 25 ವರ್ಷಗಳಿಂದ ವಿಎಫ್‍ಸಿ ತಂಬಾಕು ಬೆಳೆಯುತ್ತಿದ್ದಾರೆ. ಲೈಸೆನ್ಸ್ ಇಲ್ಲದ ಕಾರಣದಿಂದಾಗಿ ಇವ ರಿಗೆ ಬ್ಯಾಂಕ್‍ನಿಂದ ಬೆಳೆ ಸಾಲವಾಗಲಿ, ತಂಬಾಕು ಮಂಡಳಿಯಿಂದ ರಸ ಗೊಬ್ಬರ ಮೊದಲಾದ ನೆರವಾಗಲಿ ಲಭಿ ಸುತ್ತಿಲ್ಲ. ಅದಕ್ಕೆ ಬದಲಾಗಿ ಈ ಬೆಳೆ ಗಾರರಿಗೆ ತಂಬಾಕು ಮಂಡಳಿಯಿಂದ ದಂಡ ವಿಧಿಸಲಾಗುತ್ತಿದೆ. ಇವರು ಬೆಳೆ ಯುವ ತಂಬಾಕನ್ನು ಮಂಡಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡು ವಾಗ ಶೇ.15ರಷ್ಟು ತೆರಿಗೆ ಮತ್ತು ಪ್ರತಿ ಕೆ.ಜಿ.ಗೆ 2 ರೂ. ದಂಡ ವಿಧಿಸಲಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ಈ ಅನಧಿಕೃತ ತಂಬಾಕು ಬೆಳೆಗಾರರು ಮೈಸೂರು, ಹಾಸನ ಜಿಲ್ಲೆಯ ಕೆಲವು ತಾಲೂಕುಗಳು ಸೇರಿದಂತೆ ಒಟ್ಟು 33,856 ಬ್ಯಾರನ್‍ಗಳನ್ನು (ತಂಬಾಕು ಹದ ಮಾಡುವ ಕಟ್ಟಡ) ಸ್ವಂತ ಹಣದಿಂದಲೇ ನಿರ್ಮಿಸಿ ಕೊಂಡಿದ್ದಾರೆ. ಈ ತಂಬಾಕು ಕೃಷಿಗೆ ಅಗತ್ಯ ವಾದ ಇತರೆ ಹಲವು ಪರಿಕರಗಳನ್ನು ಬ್ಯಾಂಕ್ ಮತ್ತು ಮಂಡಳಿಯ ಯಾವುದೇ ನೆರವಿಲ್ಲದೇ ಖರೀದಿಸಿದ್ದಾರೆ. ತಂಬಾಕು ಬೆಳೆಗಾಗಿ ಭಾರೀ ಹಣ ವಿನಿಯೋಗಿ ಸುತ್ತಾರೆ. ಅಲ್ಲದೇ ಈ ಬೆಳೆ ಪ್ರದೇಶದಲ್ಲಿನ ಹವಾಗುಣವು ತಂಬಾಕು ಬೆಳೆಯಿಂದ ಬರುವಷ್ಟೇ ಗಳಿಕೆಯನ್ನು ತಂದುಕೊಡು ವಂತಹ ಬೇರ್ಯಾವುದೇ ಬೆಳೆಗಳಿಗೂ ಸೂಕ್ತವಾಗಿಲ್ಲ. ಹಾಗಾಗಿಯೇ ಈ ಭಾಗದ ರೈತರು ಅನಿವಾರ್ಯವಾಗಿ ತಂಬಾಕನ್ನೇ ಬೆಳೆಯುತ್ತಿದ್ದಾರೆ. ಬೇರ್ಯಾವುದಾದರೂ ಪರ್ಯಾಯವಾದ, ಉತ್ತಮ ಲಾಭ ತರುವ ಬೆಳೆ ಸಿಗುವವರೆಗೂ ಅವರು ತಂಬಾಕು ಕೃಷಿಯನ್ನೇ ಮಾಡಬೇಕಿದೆ. ಹಾಗಾಗಿ ಈ ಬೆಳೆಗಾರರಿಗೆ ಅಧಿಕೃತ ಲೈಸೆನ್ಸ್ ನೀಡು ವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವರಲ್ಲಿ ಸಂಸದರು ಮನವಿ ಮಾಡಿದ್ದಾರೆ.

ಈ ಸಣ್ಣ ಪ್ರಮಾಣದ ರೈತರಿಗೆ ವಿಎಫ್‍ಸಿ ತಂಬಾಕು ಬೆಳೆಗೆ ಭಾರತ ಸರ್ಕಾರ ಲೈಸೆನ್ಸ್ ನೀಡದೇ ಇದ್ದರೆ ಅವರು ನಷ್ಟ ಅನುಭವಿಸುವುದು ಮುಂದು ವರಿಯುತ್ತದೆ. ಅಲ್ಲದೆ ಇವರಿಗೆ ಲೈಸೆನ್ಸ್ ನೀಡುವುದರಿಂದ ಅಧಿಕೃತ ತಂಬಾಕು ಬೆಳೆಗಾರರಿಗೆ ಯಾವುದೇ ಪ್ರತಿಕೂಲ ಪರಿಣಾಮವಾಗುವುದಿಲ್ಲ ಅಥವಾ ತಂಬಾಕು ಬೆಳೆ ಪ್ರಮಾಣದಲ್ಲೂ ತೀವ್ರ ಹೆಚ್ಚಳವೂ ಆಗುವುದಿಲ್ಲ. ಹಾಗಾಗಿ ತಾವು ಕರ್ನಾಟಕದ ಈ 26,019 ವಿಎಫ್‍ಸಿ ತಂಬಾಕು ಅನಧಿಕೃತ ಬೆಳೆಗಾರರಿಗೆ ಲೈಸೆನ್ಸ್ ವಿತರಿಸಬೇಕಾಗಿ ಮನವಿ ಮಾಡುತ್ತೇನೆ ಎಂದಿದ್ದಾರೆ.ಪೂರಕ ಸ್ಪಂದನೆ: ತಮ್ಮ ಮನವಿಗೆ ಸಚಿವ ಸುರೇಶ್ ಪ್ರಭು ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು `ಮೈಸೂರು ಮಿತ್ರ’ನಿಗೆ ಬುಧವಾರ ತಿಳಿಸಿದ್ದಾರೆ.

Translate »