`ಚಾಮುಂಡಿ’ ವೇಳೆಗೇ ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ ರೈಲು ಸಂಚಾರ
ಮೈಸೂರು

`ಚಾಮುಂಡಿ’ ವೇಳೆಗೇ ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ ರೈಲು ಸಂಚಾರ

June 20, 2020

ಮೈಸೂರು,ಜೂ.19(ವೈಡಿಎಸ್)-ಮೈಸೂರು-ಬೆಂಗಳೂರು ನಡುವಿನ `ಕೆಎಸ್‍ಆರ್ ಬೆಂಗ ಳೂರು ಎಕ್ಸ್‍ಪ್ರೆಸ್’ ವಿಶೇಷ ರೈಲಿನ ವೇಳಾಪಟ್ಟಿ ಬದಲಾಗಿದ್ದು, ಹೊಸ (ತಾತ್ಕಾಲಿಕ) ವೇಳಾಪಟ್ಟಿ ಜೂ.21ರಿಂದ ಜಾರಿಗೆ ಬರಲಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಸಂಚರಿ ಸುತ್ತಿದ್ದ ರೈಲು ಇನ್ನು ಮುಂದೆ ವಾರದ 7 ದಿನವೂ ಸಂಚರಿಸಲಿದೆ.

ಈ ವಿಶೇಷ ರೈಲು ಈವರೆಗೆ ಮಧ್ಯಾಹ್ನ 1.45ಕ್ಕೆ ಮೈಸೂರಿಂದ ಹೊರಡುತ್ತಿತ್ತು. ಇದರಿಂದ ಬೆಂಗಳೂರಿಗೆ ಕಚೇರಿ ಕೆಲಸಕ್ಕೆ ಹೋಗುವ ನೌಕರರು, ಕೂಲಿ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗದು. ಹಾಗಾಗಿ, ರೈಲಿನ ಸಂಚಾರದ ವೇಳಾ ಪಟ್ಟಿಯನ್ನು ಚಾಮುಂಡಿ ಎಕ್ಸ್‍ಪ್ರೆಸ್ ರೈಲಿನ ಸಮಯಕ್ಕೆ ಬದಲಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ `ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್’ (ಸಂಖ್ಯೆ 06503) ಜೂ.21ರ ಸಂಜೆ 6.15ಕ್ಕೆ ಬೆಂಗಳೂರಿ ನಿಂದ ಹೊರಟು 6.34ಕ್ಕೆ ಕೆಂಗೇರಿ, 6.49ಕ್ಕೆ ಬಿಡದಿ, 7.04ಕ್ಕೆ ರಾಮನಗರ, 7.14ಕ್ಕೆ ಚನ್ನಪಟ್ಟಣ, 7.34ಕ್ಕೆ ಮದ್ದೂರು, 7.48ಕ್ಕೆ ಮಂಡ್ಯ, 8.19ಕ್ಕೆ ಪಾಂಡವಪುರ, 8.26ಕ್ಕೆ ಶ್ರೀರಂಗಪಟ್ಟಣ, 9.05ಕ್ಕೆ ಮೈಸೂರು ತಲುಪಲಿದೆ. ಈ ವಿಶೇಷ ರೈಲು (06504) ಜೂ.22ರಿಂದ ಚಾಮುಂಡಿ ಎಕ್ಸ್‍ಪ್ರೆಸ್ ವೇಳಾಪಟ್ಟಿಯಂತೆ ಬೆಳಿಗ್ಗೆ 6.45ಕ್ಕೆ ಮೈಸೂರಿಂದ ಹೊರಟು 6.59ಕ್ಕೆ ಶ್ರೀರಂಗ ಪಟ್ಟಣ, 7.04ಕ್ಕೆ ಪಾಂಡವಪುರ, 7.28ಕ್ಕೆ ಮಂಡ್ಯ, 7.49ಕ್ಕೆ ಮದ್ದೂರು, 8.09ಕ್ಕೆ ಚನ್ನಪಟ್ಟಣ, 8.24ಕ್ಕೆ ರಾಮನಗರ, 8.39ಕ್ಕೆ ಬಿಡದಿ, 8.59ಕ್ಕೆ ಕೆಂಗೇರಿ, 9.35ಕ್ಕೆ ಬೆಂಗಳೂರು ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Translate »