ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಲ್ಲಿ ಯಾರೂ ಕ್ವಾರಂಟೈನ್ ಆಗಿಲ್ಲ: ಡಿಡಿಪಿಐ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಲ್ಲಿ ಯಾರೂ ಕ್ವಾರಂಟೈನ್ ಆಗಿಲ್ಲ: ಡಿಡಿಪಿಐ

June 20, 2020

ಮೈಸೂರು, ಜೂ.19(ಎಸ್‍ಪಿಎನ್)- ಜೂ.25ರಿಂದ ಜು.4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮೈಸೂರು ಜಿಲ್ಲೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಯಾರನ್ನೂ ಈವರೆಗೆ ಕೊರೊನಾ ಸೋಂಕಿಗೆ ಸಂಬಂಧಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಿಲ್ಲ. ಕ್ವಾರಂಟೈನ್ ಸಹ ಮಾಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕ (ಆಡಳಿತ) ಪಾಂಡುರಂಗ ಹೇಳಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈ ಬಾರಿ ಮೈಸೂರು ಜಿಲ್ಲೆಯಲ್ಲಿ 139 ಕೇಂದ್ರಗಳಲ್ಲಿ 39,822 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿದಿನ ಎಲ್ಲಾ ವಿದ್ಯಾರ್ಥಿ ಗಳನ್ನು ಸಂಪರ್ಕಿಸಿ, ಪರೀಕ್ಷಾ ಸಿದ್ಧತೆ ಬಗ್ಗೆ ನಿಗಾವಹಿಸಲಾಗಿದೆ ಎಂದರು.

ಸಹಾಯವಾಣಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿ ಇತರೆ ಮಾಹಿತಿಗಾಗಿ ವಿದ್ಯಾರ್ಥಿಗಳು, ಪೋಷಕರು ಬಿಇಓಗಳನ್ನು ಅಥವಾ ಜಿಲ್ಲಾ ಹಂತದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹು ದಾಗಿದೆ ಎಂದರು. ಅಗತ್ಯ ಮಾಹಿತಿಗಾಗಿ ಮೈಸೂರು ತಾಲೂಕು- ಚೇತನ್‍ಕುಮಾರ್- 0821-2490025. ಹೆಚ್.ಡಿ.ಕೋಟೆ ತಾಲೂಕು- ಕೃಷ್ಣಮೂರ್ತಿ- 70198 66895, ಜೈರಾಮ್- 94818 13909, ಹುಣ ಸೂರು ತಾಲೂಕು- ಕುಮಾರಸ್ವಾಮಿ- 80736 87805, ಹೇಮಂತ್ ಕುಮಾರ್- 97409 27585, ಕೆ.ಆರ್.ನಗರ ತಾಲೂಕು, ಭರತೇಶ್- 08223-263504, ಉತ್ತರ ವಲಯ ಮೈಸೂರು- ಬಿ.ಆರ್.ಪಿ. ಮತ್ತು ಸಿ.ಆರ್.ಪಿ- 0821-2496323, ದಕ್ಷಿಣ ವಲಯ ಮೈಸೂರು- ಮನೋಹರ್- 99649 67554, ಮೈಸೂರು- ಕುಮಾರಸ್ವಾಮಿ- 80733 89743, ಶಿವರಾಜ್- 89715 44137, ನಂಜನಗೂಡು ತಾಲೂಕು- ಮಧು- 08221-225404, ಪಿರಿಯಾಪಟ್ಟಣ ತಾಲೂಕು- ಗಣೇಶ್- 08223-274246, ಟಿ.ನರಸೀಪುರ ತಾಲೂಕು-ವಿಶ್ವನಾಥರೆಡ್ಡಿ-63612 91076 ಸಂಪರ್ಕಿಸಬಹುದು ಎಂದು ಪಾಂಡುರಂಗ ತಿಳಿಸಿದ್ದಾರೆ.

Translate »