ಮೈಸೂರು,ಜೂ.19(ಎಂಟಿವೈ)- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೂ.21 ರಂದು `ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಮನೆಯಲ್ಲಿಯೇ ಆಚರಿಸುವಂತೆ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ.
ಮೈಸೂರು ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿವರ್ಷ `ಅಂತಾ ರಾಷ್ಟ್ರೀಯ ಯೋಗದಿನ’ವನ್ನು ಮೈಸೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರದೆ ಯೋಗಪಟುಗಳು ತಮ್ಮ ಮನೆ ಯಲ್ಲೇ ಯೋಗಾಸನ ಮಾಡುವ ಮೂಲಕ `ಅಂತಾ ರಾಷ್ಟ್ರೀಯ ಯೋಗದಿನ’ವನ್ನು ಆಚರಿಸುವಂತೆ ಕೋರಿದರು.
ಬೆಳಿಗ್ಗೆ 7ರಿಂದ 7.45: ಈ ಬಾರಿ `ಮನೆಯಲ್ಲೇ ಯೋಗ’ ಘೋಷವಾಕ್ಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಸರಳವಾಗಿ ಆಚರಿಸಲು ಜಿಲ್ಲಾಡ ಳಿತ ತೀರ್ಮಾನಿಸಿದೆ. ಕೊರೊನಾ ವೈರಸ್ ಕರಿನೆರಳು ಆವರಿಸಿರುವುದರಿಂದ ಸಾಮೂಹಿಕ ಯೋಗ ಕಾರ್ಯ ಕ್ರಮಕ್ಕೆ ಕಡಿವಾಣ ಹಾಕಲಾಗಿದೆ. ಯೋಗಾಸಕ್ತರು ಭಾನುವಾರ(ಜೂನ್ 21) ಬೆಳಿಗ್ಗೆ 7ರಿಂದ 7.45ರವರೆಗೆ ವೃದ್ಧರು, ಮಕ್ಕಳು, ಗರ್ಭಿಣಿ, ಬಾಣಂತಿಯರು ಮನೆ ಯೊಳಗೇ ಯೋಗ ಮಾಡಬೇಕು. ಉಳಿದವರು ಮನೆ ಹೊರಾಂಗಣ ಅಥವಾ ತಾರಸಿಯಲ್ಲಿ ಯೋಗ ಪ್ರದರ್ಶನ ಮಾಡಬಹುದು. ಆದರೆ ಹೆಚ್ಚು ಮಂದಿ ಒಂದೇ ಸ್ಥಳ ದಲ್ಲಿ ಯೋಗ ಮಾಡಲು ಅವಕಾಶವಿಲ್ಲ ಎಂದರು.
1 ಲಕ್ಷ ಮಂದಿ ನಿರೀಕ್ಷೆ: ಕಳೆದ ವರ್ಷ ಮೈಸೂರಲ್ಲಿ `ಅಂತಾರಾಷ್ಟ್ರೀಯ ಯೋಗ ದಿನ’ ಆಚರಣೆಗೆ 80 ಸಾವಿರ ಮಂದಿ ಒಂದೆಡೆ ಸೇರಿ ಯೋಗಾಸನ ಪ್ರದ ರ್ಶಿಸಿದ್ದರು. ಈ ಬಾರಿ ಮನೆಯಲ್ಲೇ ಯೋಗ ಮಾಡಲು ಸೂಚಿಸಿರುವುದರಿಂದ, ಅಲ್ಲದೇ ಅಂದು ಭಾನುವಾರವಾಗಿರುವುದರಿಂದ 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಡ್ರೋಣ್ ಚಿತ್ರೀಕರಣ: ಜನರು ತಾರಸಿ ಮೇಲೆ ಅಥವಾ ಮನೆ ಅಂಗಳದಲ್ಲಿ ಯೋಗ ಮಾಡುವುದನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗುವುದು. ಹೆಲಿಕಾಪ್ಟರ್ ಬಳಸು ವಂತೆ ಸಲಹೆ ಬಂದಿತ್ತು. ಆದರೆ ದುಂದುವೆಚ್ಚ ಬೇಡ ಎಂದು ಡ್ರೋನ್ ಬಳಸಲಾಗುತ್ತಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಪಿ. ಜನಾರ್ಧನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಸರ್ಕಾರಿ ಯೋಗ ಮಹಾವಿದ್ಯಾಲಯದ ಪ್ರಾಂಶುಪಾಲ ರಾಧಾಕೃಷ್ಣ, ಜಿಎಸ್‍ಎಸ್ ಯೋಗ ಫೌಂಡೇ ಷನ್ ಮುಖ್ಯಸ್ಥ ಶ್ರೀಹರಿ ಇನ್ನಿತರರು ಗೋಷ್ಠಿಯಲ್ಲಿದ್ದರು.
ಸಾಮಾನ್ಯ ಯೋಗ ಶಿಷ್ಟಾಚಾರ ಪ್ರದರ್ಶನದ ಸಿಡಿ ಬಿಡುಗಡೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಕುಟುಂಬದೊಂದಿಗೆ ತಮ್ಮ ಮನೆಯಲ್ಲಿಯೇ ಯೋಗ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆಯ ವಿದ್ಯಾರ್ಥಿಗಳಿಂದ ಸಾಮಾನ್ಯ ಯೋಗ ಶಿಷ್ಟಾಚಾರ ಪ್ರದರ್ಶನದ ಸಿಡಿಯನ್ನು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಕೋವಿಡ್-19 ತಡೆಗಟ್ಟುವ ಹಿನ್ನೆಲೆ ಭಾರತ ಸರ್ಕಾರದ ಆಯುಷ್ ಮಂತ್ರಾ ಲಯದ ಮಾರ್ಗಸೂಚಿಯಂತೆ ಈ ವರ್ಷ “ಮನೆ ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗ” ಎಂಬ ಧ್ಯೇಯ ವಾಕ್ಯದಡಿ ವಿನೂತನ ಕಾರ್ಯ ಕ್ರಮದೊಂದಿಗೆ ಸಂಯೋಜಿಸಿದ್ದು, ಮನೆಯಲ್ಲಿ ಕುಟುಂಬ ದೊಂದಿಗೆ ಯೋಗ ಮಾಡಲು ಅನುಕೂಲವಾಗು ವಂತೆ ಭಾರತ ಸರ್ಕಾರವು ಯೋಗ ಶಿಷ್ಟಾಚಾರದ 45 ನಿಮಿಷಗಳ ಯೋಗದ ಗುಚ್ಛವನ್ನು ಪ್ರಸ್ತುತಪಡಿ ಸಿದೆ. ಯೋಗ ಗುಚ್ಛದಲ್ಲಿ ಧ್ಯಾನ, ಪ್ರಾಣಯಾಮ, ಆಸನಗಳಂತಹ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಕೊರೊನಾ ರೋಗದ ಸಾಂಕ್ರಾಮಿ ಕತೆಯನ್ನು ತಡೆಗಟ್ಟುವ ಮತ್ತು ಮನಷ್ಯನ ವ್ಯಾಧಿ ಕ್ಷಮತೆಯನ್ನು ಹೆಚ್ಚಿಸುವ ಎಲ್ಲಾ ವಿಷಯಗಳನ್ನು ಒಳಗೊಂಡಿದೆ. ಈ ಯೋಗ ಗುಚ್ಛವನ್ನು ಮನೆ ಯಲ್ಲಿಯೇ ಮಾಡಲು ಹಾಗೂ ಯೋಗ ಗುಚ್ಛವು ಏಕರೂಪದಲ್ಲಿ ಸರಿಯಾದ ರೀತಿಯನ್ನು ಮಾಡಲು ಅನುಕೂಲವಾಗುವಂತೆ ಈ ಯೋಗ ಗುಚ್ಛದ ಪ್ರಾತ್ಯ ಕ್ಷಿಕೆಯಲ್ಲಿ ತಿಳಿಸಲಾಗಿದೆ. ಈ ವೇಳೆ ಪ್ರಾಚಾರ್ಯ ರಾದ ಡಾ.ಕೆ.ಎಸ್. ರಾಧಾಕೃಷ್ಣರಾಮರಾವ್, ನಿವಾಸಿ ವೈದ್ಯಾಧಿಕಾರಿ ಡಾ.ಹರಿಗಣೇಶ್ ಎಸ್., ವೈದ್ಯಾಧಿಕಾರಿ ಮತ್ತು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಭಾರತೀಶ್ ಡಿ.ಎಸ್ ಹಾಗೂ ಸಹಾಯಕ ನಿರ್ದೇ ಶಕರಾದ ಡಾ.ಎಲ್.ಎನ್.ಶೆಣೈ ಉಪಸ್ಥಿತರಿದ್ದರು.