ವಿಜಯ ವಿಠಲ ಕಾಲೇಜಿನಲ್ಲಿ ಕುವೆಂಪು ಸ್ಮರಣೆ
ಮೈಸೂರು

ವಿಜಯ ವಿಠಲ ಕಾಲೇಜಿನಲ್ಲಿ ಕುವೆಂಪು ಸ್ಮರಣೆ

December 30, 2018

ಮೈಸೂರು: ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ‘ವಿಶ್ವಮಾನವ ದಿನ’ ಎಂದು ಆಚರಿಸಲಾಯಿತು.
ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯ ಪ್ರಸಾದ್, ಕುವೆಂಪು ಒಬ್ಬ ಸಾಮಾಜಿಕ ಜವಾ ಬ್ದಾರಿ ಇರುವ ಸಾಹಿತಿಯಾಗಿ, ವಿಶ್ವಮಾನವ ಕವಿಯಾಗಿ ಸಾಹಿತ್ಯ ಚರಿತ್ರೆಯಲ್ಲಿಯೇ ಅಚ್ಚಳಿ ಯದೇ ಉಳಿದವರಾಗಿದ್ದಾರೆ. ಅವರೊಬ್ಬ ಮೇರು ವ್ಯಕ್ತಿತ್ವದ ಜಗದ ಕವಿ ಹಾಗೂ ಯುಗದ ಕವಿ. ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾ ಗಿದ್ದು, ಚೈತನ್ಯಶೀಲರಾಗಿ ಬೇರೆಯವರೂ ಬೆಳೆಯಬೇಕೆಂದು ಬಯಸಿದವರು ಎಂದರು.

ಕುವೆಂಪು ಅವರು ಹಲವಾರು ಮೇರು ಕೃತಿಗಳನ್ನು ರಚಿಸಿ, ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆ ಅವಿಸ್ಮರಣೀಯ. ಅವರದು ಪ್ರಧಾನತಃ ವಿಚಾರ ಶೀಲ ವ್ಯಕ್ತಿತ್ವ, ಕ್ರಾಂತಿಕಾರಕ ಮನೋ ಭಾವ. ಸಮಾಜದಲ್ಲಿನ ಎಲ್ಲಾ ವಿಧವಾದ ಅಸಮಾನತೆಗಳು ಹೋಗಬೇಕು ಎಂದು ನೇರವಾಗಿ ಗದ್ಯದಲ್ಲಿ, ಪದ್ಯದಲ್ಲಿ ವಾದಿಸಿ ದ್ದಾರೆ. ಅವರು ಮೌಢ್ಯಕ್ಕೆ ಪರಮಶತ್ರು. ಮಾನವತೆಯೇ ಜೀವನದ ಧರ್ಮ ವಾಗಲಿ ಎಂದು ಸಾರಿದವರು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕನ್ನಡ ಉಪನ್ಯಾಸಕರಾದ ಎಸ್.ಎಸ್. ರಮೇಶ್, ಶ್ರೀಮತಿ ಎನ್. ಅನಿತಾ ಮತ್ತು ಸಂಸ್ಕøತ ಉಪನ್ಯಾಸಕರಾದ ಕೆ.ವಿ. ಸಂಜಯ ಉಪಸ್ಥಿತರಿದ್ದರು.

Translate »