ಚಾಮರಾಜನಗರ ಪ್ಯಾಸೆಂಜರ್ ರೈಲಿಲ್ಲದೇ ಮೈಸೂರಿಗೆ ಕಟ್ಟಡ ಕಾರ್ಮಿಕರ ಕೊರತೆ
ಮೈಸೂರು

ಚಾಮರಾಜನಗರ ಪ್ಯಾಸೆಂಜರ್ ರೈಲಿಲ್ಲದೇ ಮೈಸೂರಿಗೆ ಕಟ್ಟಡ ಕಾರ್ಮಿಕರ ಕೊರತೆ

May 25, 2020

ಮೈಸೂರು, ಮೇ 24(ಎಸ್‍ಪಿಎನ್)- ಚಾಮರಾಜನಗರ-ಮೈಸೂರು-ಬೆಂಗ ಳೂರು ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭ ವಾದರೆ ಮೈಸೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಚುರುಕು ಗೊಳ್ಳಲು ಅನುಕೂಲವಾಗುತ್ತದೆ ಎಂಬ ಮಾತು ಗಳು ಕಾರ್ಮಿಕ ವಲಯದಿಂದ ಕೇಳಿ ಬರುತ್ತಿವೆ.

ಚಾಮರಾಜನಗರದಿಂದ ರೈಲಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ತಂಡೋಪ ತಂಡವಾಗಿ ಮೈಸೂರಿಗೆ ಬುತ್ತಿ ಕಟ್ಟಿ ಕೊಂಡು ಬರುತ್ತಿದ್ದರು. ಲಾಕ್‍ಡೌನ್ ನಿಂದಾಗಿ ಬಸ್, ರೈಲು ಸಂಚಾರ ನಿರ್ಬಂಧ ವಿಧಿಸಿ ದ್ದರಿಂದ ಕಾರ್ಮಿಕರು ಮೈಸೂರಿಗೆ ಬರ ಲಾಗುತ್ತಿಲ್ಲ. ಈ ಕಾರ್ಮಿಕ ಸಮೂಹ ಬಾರ ದಿರುವುದರಿಂದ ಮೈಸೂರು ನಗರದಲ್ಲಿನ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾರ್ಮಿಕರ ಕೊರತೆಯಾಗಿದೆ.

ಲಾಕ್‍ಡೌನ್‍ನಿಂದಾಗಿ ಮೈಸೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಸ್ಥಗಿತಗೊಂ ಡಿತ್ತು. ಈಗೊಂದು ವಾರದಿಂದ ಪುನಾರಂಭ ಗೊಂಡಿದೆ. ಆದರೆ, ರೈಲು ಸಂಚಾರ ಇಲ್ಲದೇ ಚಾಮರಾಜನಗರದಿಂದ ಕಾರ್ಮಿಕರು ಮೈಸೂ ರಿಗೆ ಬರುತ್ತಿಲ್ಲ. ಸದ್ಯ ಮೈಸೂರು ತಾಲೂ ಕಿನ ಬೆರಳೆಣಿಕೆಯಷ್ಟು ಕಾರ್ಮಿಕರು ಮೈಸೂರಿಗೆ ಬಂದು ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರ ಕೊರತೆ ಯಿಂದಾಗಿ ಬೃಹತ್ ಕಟ್ಟಡಗಳ ನಿರ್ಮಾಣ ಚಟುವಟಿಕೆ ಮಂದಗತಿಯಲ್ಲಿದೆ ಎಂದು ಕಟ್ಟಡ ಕಾರ್ಮಿಕರೂ ಆಗಿರುವ ಡಿ.ಸಾಲುಂ ಡಿಯ ಕಾರ್ಮಿಕ ಬಸವರಾಜ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸೋದು ಗೊತ್ತಿಲ್ಲ: ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ಘೋಷಿಸಿದ್ದರೂ ನಮ್ಮ ಗ್ರಾಮದಲ್ಲಿ 150 ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದಾರೆ. ನನಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದೇ ತಿಳಿದಿಲ್ಲ ಎಂದು ಅಲವತ್ತುಕೊಂಡರು.

ಲಾಕ್‍ಡೌನ್ ವೇಳೆ ವ್ಯವಸಾಯ: ಊರಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವ ಬದಲು ಹೊಲದಲ್ಲಿ ಬೇಸಾಯ, ಮನೆಯಲ್ಲಿರುವ 4 ಮೇಕೆಗಳನ್ನು ಮೇಯಿ ಸೋದು ಅಂತಾ ಕಾಲ ಕಳೆಯುತ್ತಿದ್ದೇನೆ. ಡಿ.ಸಾಲುಂಡಿ ಬಳಿ ನಮ್ಮ ಪೂರ್ವಜ ರಿಂದ ಬಂದ 20 ಗುಂಟೆ ಜಮೀನಿದೆ. ಮುಂಗಾರು ಮಳೆಗೆ ಅಲ್ಲಿ ಹಲಸಂದೆ ಕಾಳು ಹಾಕಿದ್ದೇವೆ. 3 ದಿನಗಳ ಹಿಂದೆ ಮಳೆ ಬಂದಿದ್ದರಿಂದ ಹಲಸಂದೆ ಹಸಿರಾ ಗಿದೆ. ಇನ್ನೊಂದು ಮಳೆ ಬಂದರೆ ಫಸಲು ಬರುತ್ತದೆ ಎಂದರು.

ಮಳೆ ಆಧರಿಸಿ ಬೇರೆಯವರೂ ಹೆಸರು, ಹಲಸಂದೆ, ಅವರೆಕಾಳು, ತೊಗರಿ ಬೇಸಾಯ ಮಾಡಿದ್ದಾರೆ. ಪಂಪ್‍ಸೆಟ್ ಇರುವವರು, ಟೊಮೆಟೋ, ಹಾಗಲಕಾಯಿ, ಎಲೆಕೋಸು, ಬಿಟ್ರೂಟ್, ಬೀನ್ಸ್ ಸೇರಿದಂತೆ ತರಕಾರಿ ಗಳನ್ನು ಬೆಳೆದು ಎಪಿಎಂಸಿಗೆ ತಲುಪಿಸು ತ್ತಾರೆ. ಜುಲೈ ನಂತರ ರಾಗಿ, ಜೋಳ ಬೆಳೆಯುವುದು ವಾಡಿಕೆ ಎಂದು ವಿವರಿಸಿದರು.

ಮೈಸೂರಿಗೆ ಬರಲು ಹೆದರುತ್ತಾರೆ: ಡಿ.ಸಾಲುಂಡಿ, ಕೆರೆಹುಂಡಿ, ದೊಡ್ಡಹುಂಡಿ, ಧನುಗಳ್ಳಿ, ದೇವಗಳ್ಳಿ ಸುತ್ತಲ ಜನರು ಲಾಕ್ ಡೌನ್‍ಗೆ ಮೊದಲು ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಮತ್ತಿತರೆ ಕೆಲಸಗಳಿಗೆ ಮೈಸೂರಿಗೆ ಹೋಗುತ್ತಿದ್ದರು. ಲಾಕ್ ಡೌನ್ ವೇಳೆ, ಪತ್ರಿಕೆ ಮತ್ತು ಟಿವಿಗಳಲ್ಲಿ ಮೈಸೂರಿನ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಹೆಚ್ಚು ಮೂಡಿಸಿದ್ದರಿಂದ ಮೈಸೂ ರಿಗೆ ಹೋಗಲು ಯುವಕರು, ವೃದ್ಧರು ಇಂದಿಗೂ ಹೆದರುತ್ತಿದ್ದಾರೆ. ಅದರಲ್ಲೂ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಕಂಟೈನ್‍ಮೆಂಟ್ ವಲಯ ಘೋಷಿಸಿದ್ದ ರಿಂದ ಆ ಸ್ಥಳಗಳಿಗೆ ಹೋಗಲು ನಮ್ಮ ಹಳ್ಳಿ ಜನರಿಗೆ ಭಯ ಎಂದರು.

ಮೇಕೆ ಮೇಯಿಸಿದ ವಿದ್ಯಾರ್ಥಿ: ನನ್ನ ತಮ್ಮನ ಮಗ ಭಾಸ್ಕರ್, ಶ್ರೀ ಅನ್ನಪೂರ್ಣೇ ಶ್ವರಿ ವಿದ್ಯಾಸಂಸ್ಥೆಯಲ್ಲಿ 7 ನೇ ತರಗತಿ ಓದುತ್ತಿದ್ದಾನೆ. ಲಾಕ್‍ಡೌನ್ ವೇಳೆ ಹಠ ಮಾಡಿ ಅಪ್ಪನಿಗೆ ಹೇಳಿ 2 ಮೇಕೆ ಮರಿಗಳನ್ನು ಖರೀ ದಿಸಿದ್ದಾನೆ. ಅಂದಿನಿಂದ ನಿತ್ಯವೂ ನನ್ನ ಜೊತೆ ಮೇಕೆ ಮೇಯಿಸುತ್ತಿದ್ದಾನೆ. ಅವನ ಆಲೋಚನೆ ನನಗೆ ಮೆಚ್ಚುಗೆಯಾಯಿತು ಎಂದು ಬಸವರಾಜು ನುಡಿದರು.

Translate »