ಬಸ್, ರೈಲುಗಳಿಗೆ ಪ್ರಯಾಣಿಕರ ಕೊರತೆ
ಮೈಸೂರು

ಬಸ್, ರೈಲುಗಳಿಗೆ ಪ್ರಯಾಣಿಕರ ಕೊರತೆ

January 9, 2022

ಮೈಸೂರು, ಜ.8(ಎಂಟಿವೈ)- ರೂಪಾಂ ತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಾದ್ಯಂತ ಜಾರಿ ಗೊಳಿಸಿರುವ ವೀಕೆಂಡ್ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ರೈಲುಗಳಿಗೆ ಪ್ರಯಾಣಿಕರ ಕೊರತೆ ಕಂಡು ಬಂದಿತು.

ಮೈಸೂರು ನಗರ ಹಾಗೂ ಗ್ರಾಮಾಂ ತರ ಬಸ್ ನಿಲ್ದಾಣದಲ್ಲಿ ಶನಿವಾರ ಮುಂಜಾನೆಯಿಂದಲೇ ಹಲವು ಮಾರ್ಗ ಗಳ ಬಸ್‍ಗಳು ಬಂದು ನಿಂತಿದ್ದರೂ ಪ್ರಯಾಣಿಕರೇ ಇಲ್ಲ. ನಿಗದಿತ ಸಮಯಕ್ಕೆ ಪ್ರಯಾಣಿಸದೆ ನಿಲ್ದಾಣದಲ್ಲಿಯೇ ನಿಲ್ಲು ವಂತಾಗಿತ್ತು. ಅದರಲ್ಲೂ ಪ್ರತಿದಿನ ಸಾವಿ ರಾರು ಪ್ರಯಾಣಿಕರು ಬಂದು ಹೋಗು ತ್ತಿದ್ದ ಸಬರ್ಬನ್ ಬಸ್ ನಿಲ್ದಾಣವಂತೂ ಬೆರಳೆಣಿಕೆ ಸಂಖ್ಯೆಯ ಪ್ರಯಾಣಿಕರಿಂದ ಭಣಗುಡುತ್ತಿತ್ತು. ಜನರಿಗಿಂತ ಬಸ್‍ಗಳೇ ಹೆಚ್ಚಾಗಿರುವುದು ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.

ಗ್ರಾಮಾಂತರ ಬಸ್ ನಿಲ್ದಾಣ: ಮೈಸೂರು ಗ್ರಾಮಾಂತರ ವಿಭಾಗದಲ್ಲಿ 700 ಬಸ್ ಗಳಿದ್ದು, ವಿವಿಧ ಜಿಲ್ಲೆ, ತಾಲೂಕು ಕೇಂದ್ರ, ಅಂತರರಾಜ್ಯ ಸೇರಿದಂತೆ 650 ಮಾರ್ಗ ಗಳಲ್ಲಿ 2500 ಟ್ರಿಪ್‍ಗಳಲ್ಲಿ ಸಂಚರಿಸುತ್ತಿ ದ್ದವು. ಆದರೆ ವೀಕೆಂಡ್ ಕಫ್ರ್ಯೂ ಹಿನ್ನೆಲೆ ಯಲ್ಲಿ ಶೇ.50ರಷ್ಟು ಬಸ್‍ಗಳು ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿತ್ತು. ಆದರೆ ಇಂದು ಬೆಳಗಿ ನಿಂದ ಮೈಸೂರಿಂದ ಬೇರೆ ಬೇರೆ ಜಿಲ್ಲೆ, ನಗರ, ಪಟ್ಟಣಗಳಿಗೆ ತೆರಳಿದ ಬಸ್‍ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿರಲಿಲ್ಲ. ಪ್ರಯಾ ಣಿಕರಿಲ್ಲದ ಕಾರಣ ಅರ್ಧ ಗಂಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿದಿನ ಮೈಸೂರಿಂದ ಬೆಂಗಳೂರಿಗೆ ಐದು ನಿಮಿಷಕ್ಕೊಂದು ಬಸ್ ಸಂಚರಿಸುತ್ತಿದ್ದವು. ಆದರೆ ಇಂದು ಬಸ್ ಇದ್ದರೂ ಪ್ರಯಾ ಣಿಕರಿಲ್ಲದ ಕಾರಣ ಅರ್ಧ ಗಂಟೆ ಗೊಂದು ಬಸ್ ತೆರಳುತ್ತಿದ್ದವು.

ನಗರ ಬಸ್ ನಿಲ್ದಾಣವೂ ಭಣಗುಟ್ಟಿತು: ಮೈಸೂರು ನಗರದ ವಿಭಾಗದಲ್ಲಿ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋ ಗಳಿಂದ ಒಟ್ಟು 431 ಬಸ್‍ಗಳಿದ್ದು, ಪ್ರತಿ ದಿನ 372 ಮಾರ್ಗಗಳಲ್ಲಿ ಐದು ಸಾವಿರ ಟ್ರಿಪ್ ಸಂಚರಿಸುತ್ತಿದ್ದವು. ಆದರೆ ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಇಂದು ಮೈಸೂರು ನಗರ ವಿಭಾಗದ ವಿವಿಧ ಡಿಪೋಗಳಿಗೆ ಸೇರಿದ ಬಸ್‍ಗಳು ಕೆಲವೇ ಕೆಲವು ಮಾರ್ಗ ಗಳಲ್ಲಿ ಸಂಚರಿಸಿದವು. ಬೇಡಿಕೆ ಇದ್ದರೆ ಮಾತ್ರ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು.

ರೈಲು ಸಂಚಾರವೂ ಇರಲಿದೆ: ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದರೂ ಮೈಸೂರಿಂದ ವಿವಿಧೆಡೆ ರೈಲು ಸಂಚಾರವಿತ್ತು. ಪ್ರಯಾ ಣಿಕರ ಕೊರತೆ ಇದ್ದರೂ ವಿವಿಧೆಡೆಗೆ ರೈಲು ಸಂಚರಿಸಿದವು. ಅದರಲ್ಲೂ ಮೈಸೂರು-ಬೆಂಗಳೂರು ನಡುವೆ, ತಮಿಳುನಾಡು, ಆಂಧ್ರ ಸೇರಿದಂತೆ ವಿವಿ ಧೆಡೆಗೆ ರೈಲುಗಳ ಸಂಚಾರವಿತ್ತು.

ಆಟೋರಿಕ್ಷಾ, ಟ್ಯಾಕ್ಸಿ: ಅಗತ್ಯ ಹಾಗೂ ತುರ್ತು ಸೇವೆಗಾಗಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಸೇವೆ ಲಭ್ಯವಿತ್ತು. ಬಸ್ ನಿಲ್ದಾಣ, ಆಸ್ಪತ್ರೆ, ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರಿ ಗಾಗಿ ಆಟೋರಿಕ್ಷಾ, ಟ್ಯಾಕ್ಸಿಗಳು ಪ್ರಯಾ ಣಿಕರಿಲ್ಲದೆ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.

 

Translate »