ತಾಜ್ ಗ್ರೂಪ್‌ಗೆ ಮೈಸೂರಿನ ಲಲಿತಮಹಲ್
ಮೈಸೂರು

ತಾಜ್ ಗ್ರೂಪ್‌ಗೆ ಮೈಸೂರಿನ ಲಲಿತಮಹಲ್

June 14, 2022

ಇಂದು ಸಂಪುಟ ಉಪಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ

ಮೈಸೂರು, ಜೂ. ೧೩ (ಆರ್‌ಕೆ)- ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ತಾಜ್ ಗ್ರೂಪ್‌ಗೆ ವಹಿಸುವ ಸಂಬAಧ ನಾಳೆ (ಜೂ. ೧೪) ಬೆಂಗಳೂರಲ್ಲಿ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.

ಈ ಹಿಂದೆ ಹಲವು ಬಾರಿ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿ ಸುವ ಕುರಿತಂತೆ ಸಭೆಗಳು ನಡೆದಿದ್ದವಾದರೂ, ನಿರ್ಣಯ ಕೈಗೊಂಡಿರಲಿಲ್ಲ. ಮಂಗಳವಾರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ಸಭೆ ನಿಗದಿಯಾಗಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧೀನದಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಹೆರಿಟೇಜ್ ಹೋಟೆಲ್ ಅನ್ನು ಖಾಸಗಿ ಸಂಸ್ಥೆಗೆ ವಹಿಸುವ ಬಗ್ಗೆ ಪ್ರಸ್ತಾವನೆ ಇತ್ತು. ಕಳೆದೊಂದು ವರ್ಷದಿಂದ ನಡೆಯು ತ್ತಿದ್ದ ಚರ್ಚೆಗೆ ಸಿಎಂ ನೇತೃತ್ವದಲ್ಲಿ ನಡೆಯುವ ಸಂಪುಟ ಉಪಸಮಿತಿ ಸಭೆಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡು ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿ ಡಿಸಿ)ದ ವಶದಲ್ಲಿದ್ದ ಹೋಟೆಲ್ ಅನ್ನು ೨೦೧೮ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ ಟಿಡಿಸಿ)ವು ವಹಿಸಿಕೊಂಡಿತ್ತು. ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸಲು ಸರ್ಕಾರ ಆಸಕ್ತಿ ತೋರಿದ್ದು, ತಾಜ್ ಗ್ರೂಪ್ ಆಫ್ ಹೋಟೆಲ್‌ನವರು ಪಡೆಯಲು ಮುಂದೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಿದ್ದು, ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿ ರುವ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷ ಎಂ.ಅಪ್ಪಣ್ಣ, ಮಂಗಳವಾರ ಸಭೆ ಇರುವ ವಿಷಯವೇ ನನಗೆ ಗೊತ್ತಿಲ್ಲ. ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ವಿಚಾರ ಹಲವು ತಿಂಗಳಿAದಲೂ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.

ಒಂದು ಸರ್ಕಾರಿ ಅಧೀನದಲ್ಲಿರುವ ಹೋಟೆಲ್ ಅನ್ನು ಖಾಸಗಿಯವರಿಗೆ ಒಪ್ಪಿಸುವುದು ಅಷ್ಟು ಸುಲಭ ವಲ್ಲ. ಹಲವು ನಿಯಮಾವಳಿಗಳಿವೆ. ಅದರನ್ವಯ ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ. ನಾಳೆ (ಜೂ. ೧೪)ಯೇ ಸಭೆಯಲ್ಲಿ ತೀರ್ಮಾನವಾಗುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಅಪ್ಪಣ್ಣ ನುಡಿದರು.

ನಾಳೆ ಸಂಪುಟ ಉಪಸಮಿತಿ ಸಭೆ ಇರುವುದು ನಿಜ. ಅದರಲ್ಲಿ ಲಲಿತ ಮಹಲ್ ಹೋಟೆಲ್ ವಿಷಯ ಅಜೆಂಡಾದಲ್ಲಿದೆ. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷರು ಸಂಪುಟ ಉಪಸಮಿತಿ ಸಭೆಯ ಸದಸ್ಯ ರಲ್ಲದ ಕಾರಣ ಅವರಿಗೆ ಈ ವಿಷಯ ತಿಳಿದಿಲ್ಲದಿರ ಬಹುದು ಎಂದು ಮನೋಜ್‌ಕುಮಾರ್ ತಿಳಿಸಿದ್ದಾರೆ.

೨೦೨೧ರ ಜನವರಿ ಮಾಹೆಯಲ್ಲಿ ಅಂದಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವರ್ಚ್ಯುಯಲ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ ತಾಜ್ ಗ್ರೂಪ್ ಮುಖ್ಯಸ್ಥರು, ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಡೆಸಲು ಆಸಕ್ತಿ ತೋರಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯ ಸರ್ಕಾರಿ ಸಂಸ್ಥೆ ನಡೆಸುತ್ತಿರುವ ಹೋಟೆಲ್ ಅನ್ನು ಖಾಸಗಿಯವರಿಗೆ ನೀಡಲು ನಿರ್ಧಾರವಾದಲ್ಲಿ ಸರ್ಕಾರವು ಬೇಡಿಕೆ ಪ್ರಸ್ತಾವನೆ ಅಥವಾ ಗ್ಲೋಬಲ್ ಟೆಂಡರ್ ಕರೆಯುತ್ತದೆ. ನಂತರ ಟೆಂಡರ್‌ನಲ್ಲಿ ಪಾಲ್ಗೊಂಡ ಹೆಚ್ಚಿನ ಬಿಡ್ಡುದಾರರಿಗೆ ಆಸ್ತಿಯನ್ನು ಲೀಸ್‌ಗೆ ಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.

Translate »