ಮೈಸೂರಲ್ಲಿ ಸುರಕ್ಷಿತ ಸೈಕಲ್ ಸವಾರಿಗೆ ಪ್ರತ್ಯೇಕ ಪಥ
ಮೈಸೂರು

ಮೈಸೂರಲ್ಲಿ ಸುರಕ್ಷಿತ ಸೈಕಲ್ ಸವಾರಿಗೆ ಪ್ರತ್ಯೇಕ ಪಥ

June 14, 2022

ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಪಾಲಿಕೆ ಸಜ್ಜು

ಮೊದಲ ಹಂತದಲ್ಲಿ ವಿವಿಧ ರಸ್ತೆಗಳಲ್ಲಿ ೮.೫ ಕಿ.ಮೀ. ನಿರ್ಮಾಣ

ಮೈಸೂರು,ಜೂ.೧೩- ಮೈಸೂರಿನ ಸೈಕಲ್ ಸವಾರಿಯ ಪರಂಪರೆಗೆ ಮತ್ತಷ್ಟು ಉತ್ತೇಜನ ನೀಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಸೈಕಲ್ ಸವಾರರಿಗೆಂದೇ ಮೈಸೂರು ನಗರದಲ್ಲಿ ಪ್ರತ್ಯೇಕ ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಸಜ್ಜಾಗುತ್ತಿದೆ.

ಅದಕ್ಕಾಗಿ ಮೊದಲ ಹಂತದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಒಟ್ಟು ೮.೫ ಕೀ.ಮಿ. ಸಿಂಥೆಟಿಕ್ ಸೈಕಲ್ ಪಥ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ೨೦೧೭ ಜೂ.೪ರಂದು ಮೈಸೂರಿನಲ್ಲಿ ಸಾರ್ವಜನಿಕ ಸೈಕಲ್ ಸಹಪಾಲು (ಪಿಬಿಎಸ್) ವ್ಯವಸ್ಥೆ ಚಾಲನೆಗೆ ಬಂದಿತು. ಆ ಮೂಲಕ ಈ ವ್ಯವಸ್ಥೆ ಇದೇ ಜೂ.೪ಕ್ಕೆ ಐದು ವರ್ಷಗಳನ್ನು ಪೂರೈಸಿದೆ.

ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆ ಇದಾಗಿದ್ದು, ಇದು ಇತ್ತೀ ಚಿನ ಮೈಸೂರು ಸೈಕಲ್ ಪರಂಪರೆಗೆ ವಿನೂತನ ಸ್ಪರ್ಶ ನೀಡಿತು. ಇದೀಗ ಇದರ ವಿಸ್ತೃತ ಯೋಜನೆ ಎಂಬAತೆ ಪ್ರತ್ಯೇಕ ಸಿಂಥೆಟಿಕ್ ಸೈಕಲ್ ಪಥ ನಗರದಲ್ಲಿ ನಿರ್ಮಾಣ ಗೊಳ್ಳುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಪಥ ಕೇವಲ ಟ್ರಿಣ್ ಟ್ರಿಣ್ ಸೈಕಲ್ ಗಳಿಗೆ ಮಾತ್ರ ಸೀಮಿತ ವಲ್ಲ. ಎಲ್ಲಾ ಸಾರ್ವಜನಿ ಕರ ಸೈಕಲ್ ಸವಾ ರಿಗೂ ಈ ಪಥ ಮುಕ್ತ.

ಸೈಕಲ್ ಸವಾರಿ ಮೈಸೂರು ಹೃದಯ ಭಾಗದಲ್ಲಿ ಕಷ್ಟದ ಕೆಲಸವೇ. ವಾಹನ ದಟ್ಟಣೆ ನಡುವೆ ಸೈಕಲ್ ತುಳಿಯುವುದು ಸಾಮಾನ್ಯ ಸಂಗತಿಯಲ್ಲ. ಜೊತೆಗೆ ಗುಂಡಿಮಯ ರಸ್ತೆಗಳಲ್ಲಿ ಸೈಕಲ್ ಸಂಚಾರ ಸಂಚಕಾರವೇ ಸರಿ. ಇದೀಗ ಇಂತಹ ಸನ್ನಿವೇಶ ನಿವಾರಣೆಗೆ ಪ್ರತ್ಯೇಕ ಸೈಕಲ್ ಪಥ ಸಹಕಾರಿ ಎಂಬುದು ಸೈಕಲ್ ಸವಾರರ ಅಭಿಮತ.

ಮೈಸೂರಿನ ಸೈಕಲ್ ಸಂಸ್ಕೃತಿಗೆ ಟ್ರಿಣ್ ಟ್ರಿಣ್ ಹೊಸ ಕಳೆ ನೀಡಿದೆ. ಮೋಟಾರು ವಾಹನಗಳ ಸಂಚಾರದಿAದ ಹೊರಸೂಸುವ ಇಂಗಾಲದ ಡೈಆಕ್ಸೆöÊಡ್ ಜಾಗತಿಕ ತಾಪಮಾನ ಏರಿಕೆಗೆ ದೊಡ್ಡ ಸವಾಲಾಗಿದೆ. ಇಂತಹ ಸನ್ನಿವೇಶದಲ್ಲಿ ಇಂಗಾ ಲದ ಡೈಆಕ್ಸೆöÊಡ್ ಕಡಿತಗೊಳಿಸುವಲ್ಲಿಯೂ ಟ್ರಿಣ್ ಟ್ರಿಣ್ ಸವಾರಿ ಸಹಕಾರಿಯಾಗಿದೆ. ಮೈಸೂರು ಮಹಾ ನಗರ ಪಾಲಿಕೆ, ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಈ ಟ್ರಿಣ್ ಟ್ರಿಣ್ ವ್ಯವಸ್ಥೆ ಜಾರಿಯಾಗಿದೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥಾಪಕಿ ಆಶಾ ಕೆರಕಟ್ಟಿ, ನಮ್ಮ `ಗ್ರೀನ್ ವ್ಹೀಲ್ ರೈಡ್’ ಕಂಪನಿ, ಟೆಂಡರ್ ಮೂಲಕ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆ ನಿರ್ವ ಹಣೆ ವಹಿಸಿಕೊಂ ಡಿದೆ. ಟ್ರಿಣ್ ಟ್ರಿಣ್ ಸೇವೆಗೆಂದು ಮೈಸೂರು ನಗರದಲ್ಲಿ ೫೨ ಸಹಪಾಲು ಸೇವಾ ಕೇಂದ್ರಗಳಿವೆ (ಡಾಕಿಂಗ್ ಸ್ಟೇಷನ್/ಸೈಕಲ್ ನಿಲ್ದಾಣಗಳು). ಇದನ್ನು ೧೦೦ ನಿಲ್ದಾಣಗಳಿಗೆ ಹೆಚ್ಚಿಸುವ ಉದ್ದೇಶಿತ ಯೋಜನೆಯೂ ಇದೆ ಎಂದು ಹೇಳಿದರು.

ಸವಾರರು ಯಾವುದೇ ಕೇಂದ್ರದಲ್ಲಿ ಸೈಕಲ್ ಪಡೆದು ಸವಾರಿ ಪೂರ್ಣಗೊಳಿ ಸಿದ ಬಳಿಕ ತಮಗೆ ಸಮೀಪದ ಯಾವುದೇ ಕೇಂದ್ರಗಳಲ್ಲಿ ಟ್ರಿಣ್ ಟ್ರಿಣ್ ಸೈಕಲ್‌ಗಳನ್ನು ನಿಲುಗಡೆ ಮಾಡಬಹುದು. ಸದ್ಯ ೩೦ ಗೇರ್ ಸೈಕಲ್‌ಗಳು ಸೇರಿದಂತೆ ಒಟ್ಟು ೪೫೦ ಸೈಕಲ್‌ಗಳು ಲಭ್ಯವಿವೆ. ಇವುಗಳನ್ನು ಸಾವಿರ ಸಂಖ್ಯೆಗೆ ಹೆಚ್ಚಿಸುವ ಮತ್ತೊಂದು ಉದ್ದೇಶಿತ ಯೋಜನೆ ಇದೆ. ಪ್ರಸ್ತುತ ೧೬,೯೧೮ ಮಂದಿ ಸದಸ್ಯತ್ವ ಪಡೆದು (೨೦೨೨ರ ಜೂ.೧೨ರವರೆಗೆ) ಟ್ರಿಣ್ ಟ್ರಿಣ್ ಸೈಕಲ್ ಬಳಕೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು ಸಾವಿರ ಮಂದಿ ಈ ಸೈಕಲ್ ಸೇವೆ ಬಳಕೆ ಮಾಡುತ್ತಿದ್ದಾರೆ. ಕಾಲೇಜುಗಳ ಪುನರಾರಂಭದ ಬಳಿಕ ಇದರ ಸಂಖ್ಯೆ ಮತ್ತಷ್ಟು ಹೆಚ್ಚಳಗೊಳ್ಳಲಿದೆ ಎಂದರು.

ಒAದೂವರೆ ದಶಕದ ಹಿಂದೆಯೇ ನಗರದ ಲಲಿತ ಮಹಲ್ ಅರಮನೆ ರಸ್ತೆಯಲ್ಲಿ ಆಡಳಿತ ತರಬೇತಿ ಸಂಸ್ಥೆ ಎದುರು ಮೊದಲ ಸೈಕಲ್ ಪಥ ನಿರ್ಮಾಣ ವಾಗಿತ್ತು. ಮೋಟಾರುರಹಿತ ವಾಹನಗಳನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಇಲ್ಲಿ ೫೦೦ ಮೀ. ಉದ್ದದ ವಿಶೇಷ ಸೈಕಲ್ ಪಥ ನಿರ್ಮಿಸಲಾಗಿತ್ತು.

-ಎಂ.ಬಿ.ಪವನ್‌ಮೂರ್ತಿ

 

Translate »