‘ಲಲಿತಾ ಜ್ಯುವೆಲರಿ’ಯ 32ನೇ ಶೋ ರೂಂ ಮೈಸೂರಲ್ಲಿ ನಾಳೆ ಉದ್ಘಾಟನೆ
ಮೈಸೂರು

‘ಲಲಿತಾ ಜ್ಯುವೆಲರಿ’ಯ 32ನೇ ಶೋ ರೂಂ ಮೈಸೂರಲ್ಲಿ ನಾಳೆ ಉದ್ಘಾಟನೆ

March 17, 2021

ಮೈಸೂರು,ಮಾ.16(ಪಿಎಂ)- `ಲಲಿತಾ ಜ್ಯುವೆಲರಿ’ 37 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಆಭರಣ ರೀಟಲರ್ಸ್ ಆಗಿ ಪ್ರಮುಖ ಹೆಸರು ಗಳಿಸಿದೆ. ಇದೀಗ ಮೈಸೂರಿ ನಲ್ಲೂ ತನ್ನ ನೂತನ ಶೋ ರೂಂ ಆರಂಭಿಸುತ್ತಿದೆ. 32ನೇ ಶೋ ರೂಂ ಮೈಸೂರಿನಲ್ಲಿ ಮಾ.18ರಂದು ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಹೊಸ ಆಭರಣಗಳ ಪ್ರದರ್ಶನವನ್ನೂ ಆಯೋ ಜಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶೋ ರೂಂ ವಿಸ್ತರಿಸಲು ಲಲಿತಾ ಜ್ಯುವೆಲರಿ ಉದ್ದೇಶಿಸಿದೆ. ಬೆಂಗಳೂರಿನ ಲಲಿತಾ ಜ್ಯುವೆಲರಿ ಶೋ ರೂಂಗಳಲ್ಲಿ ಗ್ರಾಹಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕರ್ನಾಟಕದಲ್ಲಿ ಮತ್ತಷ್ಟು ಶೋರೂಂ ಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಎಂದು ಜ್ಯುವೆಲರಿ ಸಿಎಂಡಿ ಡಾ.ಎಂ.ಕಿರಣ್ ಕುಮಾರ್ ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದ ಅಂಗ ವಾಗಿ ಗ್ರಾಹಕರಿಗೆ ಸಂಪೂರ್ಣ ಶ್ರೇಣಿಯ ಚಿನ್ನಾಭರಣಗಳ ಮೇಲೆ ಶೇ.2ರಷ್ಟು ಕಡಿಮೆ ವ್ಯಾಲ್ಯೂ ಆಡಿಷನ್ (ಮೌಲ್ಯಾಧಾರಿತ ಶುಲ್ಕ) ಶುಲ್ಕದೊಂದಿಗೆ ನೀಡುವುದು ಮಾತ್ರ ವಲ್ಲದೆ, ಸಂಪೂರ್ಣ ಶ್ರೇಣಿಯ ವಜ್ರಾ ಭರಣಗಳನ್ನು ಒಂದು ಕ್ಯಾರೆಟ್‍ಗೆ 3 ಸಾವಿರ ರೂ. ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಗ್ರಾಹಕರು ನೀಡುತ್ತಿರುವ ಬೆಲೆಗಿಂತ ಇದು ಕಡಿಮೆ ಎನ್ನುತ್ತಾರೆ ಡಾ.ಎಂ.ಕಿರಣ್‍ಕುಮಾರ್.

ಉದ್ಘಾಟನೆ: ಮೈಸೂರಿನ ಬೆಂಗಳೂರು-ನೀಲಗಿರಿ ರಸ್ತೆ ಯಲ್ಲಿ (ಸಬ್‍ಅರ್ಬನ್ ಬಸ್ ನಿಲ್ದಾಣದ ಬಳಿ) ನೂತನ ವಾಗಿ ಆರಂಭಗೊಳ್ಳುತ್ತಿರುವ ಶೋ ರೂಂ ಮಾ.18ರಂದು ಬೆಳಗ್ಗೆ 10.35ಕ್ಕೆ ಉದ್ಘಾಟನೆಗೊಳ್ಳಲಿದೆ. ಸಮಾರಂಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಪಾಲಿಕೆ ಸದಸ್ಯರಾದ ಎಂ.ಸತೀಶ್, ಎಂ.ಪ್ರದೀಪ್‍ಚಂದ್ರ, ಎಂ. ಪ್ರಮೀಳಾ ಭರತ್, ವೈಶಾಕ್ ಗ್ರೂಪ್ ಹೋಟೆಲ್ಸ್‍ನ ಎಂಡಿ ಗೋವಿಂದೇಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಆಯ್ಕೆ ಮಾಡಿ, ಕ್ಲಿಕ್ ಮಾಡಿ, ಹೋಲಿಸಿ ಮತ್ತು ಖರೀದಿಸಿ: ಲಲಿತಾ ಜ್ಯುವೆಲರಿಯಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡು ತ್ತಿದ್ದೇವೆ ಎಂಬುದನ್ನು ಗ್ರಾಹಕರು ಖಾತರಿಪಡಿಸಿಕೊಳ್ಳಬಹುದು. ಲಲಿತಾ ಜ್ಯುವೆಲರಿ ಮಾತ್ರ ಯಾವುದೇ ಆಭರಣವನ್ನು ಆಯ್ಕೆ ಮಾಡುವ ಅವಕಾಶವನ್ನು ಖರೀದಿದಾರರಿಗೆ ನೀಡುತ್ತದೆ. ಆಭರಣದ ಫೋಟೋ ತೆಗೆದು ಎಸ್ಟಿಮೇಟ್ ಸ್ಲಿಪ್‍ನೊಂದಿಗೆ ಅದೇ ರೀತಿಯ ಆಭರಣಗಳನ್ನು ಬೇರೆ ಶೋ ರೂಂಗಳಲ್ಲಿನ ಬೆಲೆಗಳೊಂದಿಗೆ ಹೋಲಿಸುವ ಸೌಲಭ್ಯ ನೀಡ ಲಾಗುತ್ತಿದೆ. ಹೀಗಾಗಿ ಯಾವ ಶೋ ರೂಂ ಕಡಿಮೆ ಬೆಲೆಯಲ್ಲಿ ನೀಡುತ್ತದೆ ಎಂಬುದನ್ನು ತಿಳಿದುಕೊಂಡು ಅಲ್ಲಿ ಖರೀದಿಸಬಹುದು! ಇದು ಮಾರುಕಟ್ಟೆಯಲ್ಲಿ ಒಂದು ದೊಡ್ಡ ವ್ಯತ್ಯಾಸ ಉಂಟು ಮಾಡಿದೆ ಎಂದು ಡಾ.ಎಂ.ಕಿರಣ್ ಕುಮಾರ್ ತಿಳಿಸಿದ್ದಾರೆ.

ಸಂಪೂರ್ಣವಾಗಿ ಗ್ರಾಹಕರನ್ನು ಸಶಕ್ತಗೊಳಿಸುವುದರ ಬಗ್ಗೆ: ವಿಶ್ವಾಸ ನೀಯ ಬ್ರ್ಯಾಂಡ್, ಪ್ರಾಮಾಣಿಕ ವ್ಯವಹಾರ ಗಳು, ವಿಶಾಲ ವ್ಯಾಪ್ತಿ ಮತ್ತು ಗ್ರಾಹಕರನ್ನು ಸಶಕ್ತಗೊಳಿಸಲು ತನ್ನ ವಿಶ್ವಪ್ರಸಿದ್ಧ ಬದ್ಧತೆ ಯನ್ನು ನಾವು ಹೊಂದಿದ್ದೇವೆ ಎಂದು ಡಾ.ಎಂ.ಕಿರಣ್‍ಕುಮಾರ್ ಹೇಳುತ್ತಾರೆ.
ಮೋಡಿ ಮಾಡುವ ಶ್ರೇಣಿ, ಮಾಂತ್ರಿಕ ಗುಣಮಟ್ಟ: ಲಲಿತಾ ಜ್ಯುವೆಲರಿ ಕೇವಲ ಗುಣಮಟ್ಟ ಮತ್ತು ಪಾರದರ್ಶಕತೆಗೆ ಮಾತ್ರ ಪ್ರಸಿದ್ಧಿ ಆಗಿಲ್ಲ. ಇದರ ಜೊತೆಗೆ ಅಂದ ವಾದ ಆಭರಣಗಳಿಗೂ ಪ್ರಸಿದ್ಧಿ. ಲಲಿತಾ ಜ್ಯುವೆಲರಿ ಗುಣಮಟ್ಟ ಮತ್ತು ಬೆಲೆಯ ಭರವಸೆ ಚೈನು, ಬಳೆ, ನೆಕ್‍ಲೇಸ್, ಚೋಕರ್ಸ್, ಹಾರಮ್ಸ್, ವಂಕಿಗಳು, ಒಡಿಯಾಣ, ಉಂಗುರಗಳು, ಜುಮುಕಿಗಳು ಮತ್ತು ಇನ್ನೂ ಅನೇಕ ಇತರ ಸೂಕ್ಷ್ಮವಾಗಿ ತಯಾ ರಿಸಲ್ಪಟ್ಟ ಅಮೂಲ್ಯ ಆಭರಣಗಳ ಸಂಗ್ರ ಹಣೆಯಿಂದ ಇದು ಸ್ಪಷ್ಟವಾಗುತ್ತದೆ. ಲಲಿತಾ ಜ್ಯುವೆಲರಿ ವಿವಿಧ ಬೆಲೆ ಶ್ರೇಣಿಗಳಲ್ಲಿ, ವಿವಿಧ ಶೈಲಿಗಳಲ್ಲಿ ವಜ್ರದ ಆಭರಣಗಳ ಬೃಹತ್ ಸಂಗ್ರಹಕ್ಕೆ ಹೆಸರುವಾಸಿಯಾಗಿದೆ.

ಮೈಸೂರಿನಲ್ಲಿರುವ ಗ್ರಾಹಕರು ಶೋ ರೂಂನಲ್ಲಿನ ವಜ್ರದ ಆಭರಣಗಳ ಕ್ಯಾರೆಟ್‍ಗೆ 43 ಸಾವಿರ ರೂ. ಮತ್ತು ವಿಎ ಪ್ರತಿ ಗ್ರಾಂಗೆ ಕೇವಲ 975 ರೂ.ಗಳಿಗೆ ಪಡೆಯಬಹುದು. ಅವರ ಮೌಲ್ಯಕ್ಕೆ ಮತ್ತಷ್ಟು ಪ್ರೀಮಿಯಂ ಅನ್ನು ಸೇರಿಸುವ ಅಂಶ ವೆಂದರೆ, ಲಲಿತಾದಲ್ಲಿನ ಎಲ್ಲಾ ವಜ್ರದ ಆಭರಣಗಳು ಇ-ಎಫ್ ಕಲರ್ ಗ್ರೇಡ್ ಮತ್ತು ವಿವಿಎಸ್ ಸ್ಪಷ್ಟತೆಯೊಂದಿಗೆ ಬರು ತ್ತವೆ. ಮರು ಖರೀದಿ ನೀತಿಯು ಹೊಸ ವಜ್ರಾಭರಣಗಳ ವಿನಿ ಮಯದ ಹೊರತಾಗಿ ಶೇ.10ರಷ್ಟು ಮತ್ತು ನಗದು ಹೊರತಾಗಿ ಶೇ.85ರಷ್ಟು ಮೌಲ್ಯವನ್ನು ನೀಡುತ್ತದೆ. ಲಲಿತಾ ಜ್ಯುವೆಲರಿಯ ಹೊಸ ಶೋ ರೂಂ ಸಹ ಬೆಳ್ಳಿ ಪಾತ್ರೆಗಳು ಮತ್ತು ಉಡುಗೊರೆ ವಸ್ತುಗಳ ಬೃಹತ್ ಸಂಗ್ರಹ ಒಳಗೊಂಡಿದೆ.

Translate »