ಕೇಂದ್ರೀಯ ಶಿಯಾ ವಕ್ಫ್ ಬೋರ್ಡ್‍ನ ಮಾಜಿ  ಅಧ್ಯಕ್ಷ ವಾಸಿಮ್ ರಿಜ್ವಿ ನಡೆ ಖಂಡಿಸಿ ಪ್ರತಿಭಟನೆ
ಮೈಸೂರು

ಕೇಂದ್ರೀಯ ಶಿಯಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ನಡೆ ಖಂಡಿಸಿ ಪ್ರತಿಭಟನೆ

March 16, 2021

ಮೈಸೂರು,ಮಾ.15(ಪಿಎಂ)- ಹಿಂಸೆ ಉತ್ತೇಜಿಸುತ್ತದೆ ಎಂದು ಕುರಾನ್‍ನ ಕೆಲ ಅಂಶಗಳನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿರುವ ಉತ್ತರ ಪ್ರದೇಶದ ಕೇಂದ್ರೀಯ ಶಿಯಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ನಡೆ ಖಂಡಿಸಿ ಮಜ್ಲಿಸ್ ಉಲ್ಮಾ ಎ ಅಹ್ಲೆ ಸುನ್ನತ್ ಮೈಸೂರು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ವಾಸಿಮ್ ರಿಜ್ವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಾಸಿಮ್ ರಿಜ್ವಿ ಕುರಾನ್‍ಗೆ ಅಪ ಮಾನ ಮಾಡುವಂತೆ ನಡೆದುಕೊಂಡಿದ್ದು, ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು. ಸಂಘಟನೆ ಅಧ್ಯಕ್ಷ ಇಲಿಯಾಜ್ ಬೇಗ್, ಕಾರ್ಯದರ್ಶಿ ಮೊಹಮ್ಮದ್ ಯೂನಿಸ್, ಹಫೀಜ್ ಘಯಾಜ್, ಫಾಸಿ ವಾರ್ಸಿ, ಸಲೀಂ, ಅಬ್ದುಲ್ ಮಜೀದ್, ಮೌಲಾನಾ ಅಮನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »