ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತಪರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಸಮರ್ಥನೆ
ಮೈಸೂರು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತಪರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಸಮರ್ಥನೆ

September 24, 2020

ಮೈಸೂರು, ಸೆ.23 (ಆರ್‍ಕೆಬಿ)- ಭೂಸುಧಾರಣಾ ಕಾಯ್ದೆ ರೈತಪರ. ಯುವ ಸಮೂಹವನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಪ್ರಯತ್ನಕ್ಕೆ ಈ ಕಾಯ್ದೆ ಜಾರಿಗೊಳಿಸ ಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ ಇಂದಿಲ್ಲಿ ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಬಂಡವಾಳಶಾಹಿಗಳು ಎಲ್ಲಾ ಕೃಷಿ ಭೂಮಿ ಯನ್ನು ಖರೀದಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಈಗ ಶಿಕ್ಷಣ ಪಡೆದವರಲ್ಲಿ ಹೆಚ್ಚು ಮಂದಿ ವಿವಿಧೆಡೆ ಕೆಲಸಗಳಿಗೆ ವಲಸೆ ಹೋಗಿದ್ದಾರೆ. ಅವರನ್ನು ಕೃಷಿಯತ್ತ ಮತ್ತೆ ಸೆಳೆಯುವುದು ಈ ಕಾಯ್ದೆ ತಿದ್ದುಪಡಿಯ ಉದ್ದೇಶ ಎಂದರು.

ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರಿಗೆ ಅನುಕೂಲಕರವೇ ಆಗಿದೆ. ಆದರೆ ವಿರೋಧ ಪಕ್ಷಗಳು ಕಾಯ್ದೆಯ ಮಹತ್ವದ ಬಗ್ಗೆ ತಿಳಿದುಕೊಳ್ಳದೆ ಅನಗತ್ಯವಾಗಿ ಕೂಗೆಬ್ಬಿಸುತ್ತಿವೆ ಎಂದು ಟೀಕಿಸಿದರು. ಎಪಿಎಂಸಿ ಕಾಯ್ದೆ ಮೂಲಕ ರೈತರು ಮತ್ತು ವ್ಯಾಪಾರಿಗಳು ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಖರೀದಿಸಲು ಸ್ವಾತಂತ್ರ್ಯವಿರುತ್ತದೆ. ಬಿಜೆಪಿ ಸರ್ಕಾರ ತಂದಿರುವ ಕಾಯ್ದೆಗಳು ಜನಪರ, ರೈತಪರ ವಾಗಿವೆ ಎಂದರು. ಬಿಜೆಪಿ ರೈತಮೋರ್ಚಾ ಮೈಸೂರು ಗ್ರಾಮಾಂತರ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಹಿಂದುಳಿದ ವರ್ಗಗಳ ಮೋರ್ಚಾ ನಗರ ಕಾರ್ಯದರ್ಶಿ ಸುರೇಶ್‍ಕುಮಾರ್, ಕೆ.ವಸಂತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

 

 

Translate »