ಮೈಸೂರು, ಸೆ.23(ಎಂಟಿವೈ)- ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಪದಾಧಿಕಾರಿಗಳು, ಸದಸ್ಯರು ಬುಧ ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಕೊರೊನಾ ಸಾಕಷ್ಟು ಮಂದಿಯನ್ನು ಬಲಿಪಡೆದಿದೆ. ಸೋಂಕಿ ನಿಂದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳದ ಸರ್ಕಾರ, ಕೃಷಿ ಕ್ಷೇತ್ರ ಹಾಗೂ ರೈತರಿಗೆ ಮರಣ ಶಾಸನದಂತಹ ತಿದ್ದುಪಡಿ ಕಾಯ್ದೆಗಳ ಜಾರಿಗೆ ಮುಂದಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಪೂರ್ವ ಸಿದ್ಧತೆಯಿಲ್ಲದೇ ಘೋಷಿಸಿದ ಲಾಕ್‍ಡೌನ್ ದೇಶದ ರೈತರು, ಕಾರ್ಮಿಕ ರಿಗೆ ತೀವ್ರ ಸಂಕಷ್ಟ ತಂದಿದೆ. ಈ ಸಂದಭರ್À ಬಡವರ ನೆರವಿಗೆ ಬರ ಬೇಕಾದ ಸರ್ಕಾರ ಶ್ರೀಮಂತರ ಆದಾಯ ಹೆಚ್ಚಿಸಲು ನಿರತವಾಗಿದೆ. ರೈತ ಪರ ಆಲೋಚನೆ ಮಾಡುತ್ತಿಲ್ಲವೆಂದು ಆರೋ ಪಿಸಿದರು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೂಲಿ 600 ರೂ.ಗೆ ಹೆಚ್ಚಿಸಿ 200 ದಿನÀ ಕೆಲಸ ಒದಗಿಸಬೇಕು. ಈ ವ್ಯವಸ್ಥೆಯನ್ನು ನಗರಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಸೂರ್ಯ ಮತ್ತಿತರರು ಪ್ರತಿಭÀಟನೆಯಲ್ಲಿ ಭಾಗವಹಿಸಿದ್ದರು.