ಮೈಸೂರು, ಸೆ.23(ಆರ್‍ಕೆಬಿ)- ಪ್ರಧಾನಮಂತ್ರಿಗಳ ಫಿಟ್ ಇಂಡಿಯಾ ಅಭಿಯಾನ ದಡಿ `ಫಿಟ್ ಮೈಸೂರು’ ಸಂಕಲ್ಪ ಮಾಡಿರುವ ಮೈಸೂರು ಜಿಮ್ ಮತ್ತು ಫಿಟ್‍ನೆಸ್ ಮಾಲೀಕರ ಸಂಘ ಗುರುವಾರದಿಂದ ಜಿಮ್ ಮತ್ತು ಫಿಟ್‍ನೆಸ್ ಕುರಿತಂತೆ 3 ದಿನಗಳ ಉಚಿತ ತರಬೇತಿ ನೀಡ ಲಿದೆ ಎಂದು ಸಂಘದ ಅಧ್ಯಕ್ಷ, ಏಕಲವ್ಯ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟ್ರಿಯ ಕ್ರೀಡಾಪಟು ಎ.ವಿ.ರವಿ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ಜಗತ್ತಿಗೆ ವ್ಯಾಪಿಸಿರುವ ಕೋವಿಡ್-19ನಿಂದಾಗಿ ಬಹುತೇಕ ಆರ್ಥಿಕ ಚಟು ವಟಿಕೆಗಳು ಸ್ಥಗಿತಗೊಂಡಿವೆ. ಜಿಮ್ ಮತ್ತು ಫಿಟ್‍ನೆಸ್ ಉದ್ಯಮವೂ ನೀರಸವಾಗಿ ನಡೆಯುತ್ತಿದೆ. ಇದನ್ನೇ ಮುಖ್ಯ ಕಸುಬಾಗಿಸಿಕೊಂಡ ಜಿಮ್ ಮಾಲೀಕರು, ತರಬೇತು ದಾರರ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ `ಫಿಟ್ ಮೈಸೂರು’ ವಿನೂತನ ಕಾರ್ಯಕ್ರಮ ಮೂಲಕ ಜನರ ಗಮನ ಸೆಳೆಯಲು ಉದ್ದೇಶಿಸಲಾಗಿದೆ. ಜತೆಗೆ ಕ್ರೀಡಾ ಮನೋಭಾವ ಬೆಳೆಸುವ ಚಿಂತನೆಯೂ ಇದರ ಹಿಂದಿದೆ ಎಂದರು.
ಕ್ರೀಡೆಯಿಂದ ಪ್ರತಿ ಕುಟುಂಬದ ಒಬ್ಬರಾದರೂ ಸದೃಢವಾಗಿ, ಆರೋಗ್ಯವಂತರಾಗಿ ಇದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು `ಫಿಟ್ ಮೈಸೂರು’ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಮ್ ಮತ್ತು ಫಿಟ್‍ನೆಸ್‍ನ ಮೂರು ದಿನಗಳ ಉಚಿತ ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೈಸೂರು ಜಿಮ್ ಮತ್ತು ಫಿಟ್‍ನೆಸ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಹರ್ಷ, ಕಾರ್ಯದರ್ಶಿ ಎ.ಎಲ್.ಸುರೇಶ್‍ಚಂದ್ರ, ಎಂ.ಆಕಾಶ್‍ದೀಪ್ ಸುದ್ದಿಗೋಷ್ಠಿಯಲ್ಲಿದ್ದರು.