ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ
ಮೈಸೂರು

ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ

February 12, 2022

ಮೈಸೂರು,ಫೆ.೧೧(ಎಂಟಿವೈ)- ಕೇಂದ್ರ ಸರ್ಕಾರದ ಆರ್ಥಿಕ ಅಶಿಸ್ತು, ದುರಾಡಳಿತದ ಫಲವಾಗಿ ಈ ಸಾಲಿನ ಅಂತ್ಯಕ್ಕೆ ದೇಶದ ಸಾಲದ ಮೊತ್ತ ೧೩೫ ಲಕ್ಷ ೮೭ ಸಾವಿರ ಕೋಟಿ ರೂ.ಗಳಾಗಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನೇ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಲೇ ಬಂದರು. ಆದರೆ ವಾಸ್ತವದ ಸ್ಥಿತಿ `ಸಬ್ ಕಾ ವಿನಾಶ್’ ನಂತಾಗಿದೆ. ಮೋದಿ ತಮ್ಮ ಆಡಳಿತದಲ್ಲಿ ದೇಶವನ್ನೇ ಮಾರುವಂತಹ ದುಸ್ಥಿತಿ ನಿರ್ಮಿಸಿದ್ದಾರೆ. ಮಿತಿ ಮೀರಿದ ಸಾಲದ ಹೊರೆ ದೇಶದ ಮೇಲೇರಿಸಿದ್ದಾರೆ. ಇದ ರಿಂದ ದೇಶವೇ ಹಾಳಾಗುತ್ತಿದೆ ಎಂದು ಕಿಡಿಕಾರಿದರು.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ದೇಶದ ಸಾಲ ೫೩ ಲಕ್ಷದ ೧೧ ಸಾವಿರ ಕೋಟಿ ರೂ. ಇತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸಾಲದ ಮೊತ್ತ ದುಪ್ಪಟ್ಟಾಗಿದೆ. ಕಳೆದ ವರ್ಷದವರೆಗೂ ದೇಶದ ಸಾಲ ೧೧ ಲಕ್ಷದ ೫೯ ಸಾವಿರ ಕೋಟಿ ಇತ್ತು. ಈ ಸಾಲಿನ ಅಂತ್ಯಕ್ಕೆ ಸಾಲದ ಮೊತ್ತ ೧೩೫ ಲಕ್ಷ ೮೭ ಸಾವಿರ ಕೋಟಿ ರೂ. ಆಗಲಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಂಟೇ ವರ್ಷದಲ್ಲಿ ೯೫ ಲಕ್ಷ ಕೋಟಿ ಸಾಲ ಮಾಡಿದೆ. ವಾರ್ಷಿಕ ೯ ಕೋಟಿ ಬಡ್ಡಿ ಕಟ್ಟಬೇಕಾದ ದುಸ್ಥಿತಿ ಇದೆ. ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿರು ವಾಗ `ಸಬ್ ಕಾ ಸಾಥ್, ಸಬ್ ಕಾ ವಿಕಾಸ’ ಸಾಧ್ಯವೇ? ಆ ಘೋಷಣೆ ಜನರ ಕಣ್ಣೊರೆಸುವ ತಂತ್ರಗಾರಿಕೆ ಯಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಿAದ ರಾಜ್ಯಕ್ಕೆ ಅನ್ಯಾಯ: ೧೫ನೇ ಹಣಕಾಸು ಆಯೋಗ ಜಾರಿಯಾದ ಆದ ಮೇಲೆ ಕೇಂದ್ರದಿAದ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ೨೫ ಸಂಸದರಿಗೂ ಧಮ್ ಇಲ್ಲ. ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ದ್ರೋಹವಾಗಿದ್ದರೂ ಅದನ್ನು ಸರಿಪಡಿಸಲು ಯಾರಿಗೂ ಸಾಧ್ಯವಾಗಿಲ್ಲ. ಅನುದಾನ ನೀಡಿಕೆ, ಜಿಎಸ್‌ಟಿ ಶೇರ್ ನಲ್ಲಿ ಕಡಿತ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುದಾನದ ಪ್ರಮಾಣ ಕಡಿತ ಸೇರಿದಂತೆ ವ್ಯಾಪಕ ಅನ್ಯಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕುಳಿತುಕೊಂಡು ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಯಾರೂ ಪ್ರಯ ತ್ನಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಕೇಂದ್ರ ಸರ್ಕಾರ ಪುರಸ್ಕöÈತ ಯೋಜನೆ ಗಳಿಗೆ ಕೇಂದ್ರದ ಪಾಲು ಶೇ.೭೫-೮೦ರಷ್ಟು ಇತ್ತು. ಆ ಯೋಜನೆಗಳಿಗೆ ರಾಜ್ಯದ ಪಾಲು ಶೇ.೨೫-೨೦ರಷ್ಟು ಪಾವತಿಸಬೇಕಾಗಿತ್ತು. ಆದರೆ ಈಗ ಕೇಂದ್ರ ಮತ್ತು ರಾಜ್ಯದ ಪಾಲನ್ನು ಶೇ.೫೦-೫೦ರಷ್ಟು ಮಾಡಲಾಗಿದೆ. ಇದರಿಂದ ಕೇಂದ್ರದ ಯೋಜನೆಗಳಿಗೆ ರಾಜ್ಯಕ್ಕೆ ಹೆಚ್ಚುವರಿ ಹೊರೆ ಬಿದ್ದಿದೆ ಎಂದರು.
ಈ ವರ್ಷದ ಜೂನ್ ತಿಂಗಳಿಗೆ ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರ ನಿಲ್ಲುವ ಸಾಧ್ಯತೆ ಇದೆ. ಇದರಿಂದ ಕನಿಷ್ಠ ೨೦ ಸಾವಿರ ಕೋಟಿ ರೂ. ನಮ್ಮ ರಾಜ್ಯಕ್ಕೆ ನಷ್ಟವಾಗುತ್ತದೆ. ನಷ್ಟವಾಗದಂತೆ ನೋಡಿ ಕೊಳ್ಳಬೇಕಾದರೆ, ಈ ಪರಿಹಾರವನ್ನು ಇನ್ನು ೫ ವರ್ಷ ಮುಂದುವರೆಸಿ ಎಂದು ನಾನು ಮನವಿ ಮಾಡಿದ್ದೆ. ಈ ಬಗ್ಗೆ ಬಿಜೆಪಿ ನಾಯಕರು ಯಾರೂ ಮಾತನಾಡದ ಕಾರಣ ಪ್ರಧಾನಿ ಮೋದಿ ಅವರು ಸುಮ್ಮನಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಮೌನದಿಂ ದಾಗಿ ರಾಜ್ಯಕ್ಕೆ ಜಿಎಸ್‌ಟಿ ಪಾಲು ೨೦ ಸಾವಿರ ಕೋಟಿ ರೂ ಕೈತಪ್ಪಲಿದೆ ಎಂದು ವಿಷಾದಿಸಿದರು.

ನೋಟು ನಿಷೇಧ, ಜಿಎಸ್‌ಟಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದೆ. ಇದರಿಂದ ಜನರು ತತ್ತರಿಸಿದ್ದಾರೆ. ಬಡವರ, ಮಧ್ಯಮ ವರ್ಗದ ಜನರ ಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಕೇಂದ್ರ ಸರ್ಕಾ ರದ ದುರಾಡಳಿತ ನಡೆಸುತ್ತಿರುವಾಗ ಈ ಸಾಲಿನಲ್ಲಿ ಉತ್ತಮ ಬಜೆಟ್ ಸಾಧ್ಯವೇ? ಎಂದು ಪ್ರಶ್ನಿಸಿದರು.
ರಾಜ್ಯವೂ ಸಾಲದ ಸುಳಿಯಲ್ಲಿದೆ: ಮಿತಿಮೀರಿದ ಸಾಲ ದಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದು ೩ ವರ್ಷದ ಕಳೆಯುತ್ತಿದೆ. ಈ ಅವಧಿ ಯಲ್ಲಿ ೨ ಲಕ್ಷದ ೧೫ ಸಾವಿರ ಕೋಟಿ ರೂ. ಸಾಲ ಮಾಡಿ ದ್ದಾರೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸ ಲಾಗಿದೆ. ಹೆಚ್ಚು ಬಡ್ಡಿ ಕಟ್ಟುವ ಸ್ಥಿತಿ ನಿರ್ಮಾಣವಾಗಿ ರುವುದರಿಂದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಅಭಿವೃದ್ಧಿ ಯಲ್ಲಿ ರಾಜ್ಯ ೨೦ ವರ್ಷ ಹಿಂದಕ್ಕೆ ಹೋಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದುವರೆಗೂ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಹಳೆಯ ಬಿಲ್‌ಗಳನ್ನೇ ನೀಡಲು ಇವರಿಗೆ ಸಾಧ್ಯವಾಗಿಲ್ಲ. ಆದರೂ `ಭವಿಷ್ಯದೆಡೆಗೆ ಭರವಸೆಯ ಹೆಜ್ಜೆ’ ಎಂದು ಜಾಹೀರಾತು ಕೊಟ್ಟು ಸಂಭ್ರಮಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸರ್ಕಾರ ಬರೆದುಕೊಟ್ಟದ್ದನ್ನು ಓದುತ್ತಾರೆ: ಫೆ.೧೪ ರಂದು ಕರೆದಿರುವುದು ಜಂಟಿ ಅಧಿವೇಶನ, ಅಲ್ಲಿ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಸರ್ಕಾರ ಬರೆದುಕೊಟ್ಟದ್ದನ್ನೇ ರಾಜ್ಯಪಾಲರು ಓದುವ ಸಂಪ್ರ ದಾಯವಿದೆ. ಸರ್ಕಾರ ವರ್ಷದಲ್ಲಿ ಏನು ಸಾಧನೆ ಮಾಡಿದೆ, ಮುಂದೆ ಏನು ಮಾಡುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ. ಅದನ್ನು ಓದುತ್ತಾರೆ. ಅದು ನೀತಿ ನಿರುಪಣಾ ಪತ್ರ. ಅದರ ಮೇಲೆ ಚರ್ಚೆ ಯಾಗುತ್ತದೆ. ನಾವು ಜಂಟಿ ಅಧಿವೇಶನದಲ್ಲಿ ಸರ್ಕಾ ರದ ಭ್ರಷ್ಟಾಚಾರ, ಜನ ವಿರೋಧಿ, ವೈಫಲ್ಯ ಇವುಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಬಜೆಟ್ ಅಧಿವೇಶನವನ್ನು ಮಾರ್ಚ್ನಲ್ಲಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಮುಖಂಡರಾದ ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಕೆ.ಆರ್. ನಗರದ ಡಿ.ರವಿಶಂಕರ್ ಸೇರಿದಂತೆ ಇನ್ನಿತರರು ಇದ್ದರು.

 

 

Translate »