ಮೈಸೂರು ಮೃಗಾಲಯದ `ಸಬ್ ವೇ’ ಶೀಘ್ರದಲ್ಲೇ ಉದ್ಘಾಟನೆ
ಮೈಸೂರು

ಮೈಸೂರು ಮೃಗಾಲಯದ `ಸಬ್ ವೇ’ ಶೀಘ್ರದಲ್ಲೇ ಉದ್ಘಾಟನೆ

February 12, 2022

ಮೈಸೂರು,ಫೆ.೧೧(ಎಂಟಿವೈ)- ಮೈಸೂರು ಮೃಗಾಲಯದ ಸುತ್ತಮುತ್ತ ಟ್ರಾಫಿಕ್ ಜಾಮ್ ತಪ್ಪಿಸುವ ನಿಟ್ಟಿನಲ್ಲಿ ನಿರ್ಮಿಸ ಲಾದ `ಸಬ್ ವೇ’ ಕಾಮಗಾರಿ ಪೂರ್ಣಗೊಂಡಿದ್ದು, ಖಾಸಗಿ ಸಂಸ್ಥೆಗಳ ಜಾಹೀರಾತುಗಳ ಮೂಲಕ ಇದರಲ್ಲೂ ಆದಾಯ ಕಂಡುಕೊಳ್ಳಲು ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿದೆ.

ಮೈಸೂರು ಮೃಗಾಲಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿ ಗರನ್ನು ಸೆಳೆಯುತ್ತಿದೆ. ಮೈಸೂರು ನಗರದಿಂದ ಚಾಮುಂಡಿ ಬೆಟ್ಟ, ತಿ.ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ವಿವಿಧೆಡೆ ತೆರಳುವ ವಾಹನಗಳು ಮೃಗಾಲಯದ ಮುಂದೆಯೇ ಸಂಚರಿಸುವ ಹಿನ್ನೆಲೆಯಲ್ಲಿ ಇಲ್ಲಿ ಸದಾ ವಾಹನ ಹಾಗೂ ಪ್ರವಾಸಿಗರ ದಟ್ಟಣೆಯಿಂದ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತಿತ್ತು. ಇದರಿಂದ ಟಿಕೆಟ್ ಕೌಂಟರ್ ಅನ್ನು ಮೃಗಾಲಯದ ಒಳಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಆದರೂ ಪ್ರವಾಸಿಗರು ರಸ್ತೆ ದಾಟಲು ಪರದಾಡುತ್ತಿದ್ದರಿಂದ ಹಾಗೂ ಗುಂಪು ಗುಂಪಾಗಿ ಪ್ರವಾಸಿಗರು ರಸ್ತೆ ದಾಟಲು ಮುಂದಾಗು ತ್ತಿದ್ದರಿಂದ ವಾಹನ ಸವಾರರಿಗೂ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಪಾರ್ಕಿಂಗ್‌ನಿAದ ಮೃಗಾಲಯ ಆವರಣಕ್ಕೆ ಸಬ್ ವೇ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಪಡೆದು ೧.೭೫ ಕೋಟಿ ರೂ. ವೆಚ್ಚದಲ್ಲಿ ಸಬ್ ವೇ ನಿರ್ಮಾಣ ಕಾಮ ಗಾರಿಯನ್ನು ೨೦೨೦ರ ಜ.೧೭ರಂದು ಆರಂಭಿಸಲಾಗಿತ್ತು. ಬೆಂಗಳೂರಿನ ವಿನ್ಯಾಸ್ ಬಿಲ್ರ‍್ಸ್ ಸಂಸ್ಥೆ ಗುತ್ತಿಗೆ ಪಡೆದಿತ್ತು. ೨ ವರ್ಷದ ಬಳಿಕ `ಸಬ್ ವೇ’ ಕಾಮಗಾರಿ ಪೂರ್ಣ ಗೊಂಡಿದೆ. ಈ ಸಬ್ ವೇ ೨೪ ಮೀಟರ್ ಉದ್ದ, ೪.೯ ಮೀಟರ್ ಅಗಲ ಹಾಗೂ ೧೦ ಅಡಿ ಎತ್ತರವಿದೆ. ಅಲ್ಲದೆ ಮೃಗಾಲಯ ಪ್ರವೇಶಿಸುವವರು ಹಾಗೂ ಮೃಗಾಲಯದಿಂದ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪ್ರತ್ಯೇಕ ಪಾಥ್(ಮಾರ್ಗ)ಗಳಿದ್ದು, ಪ್ರವಾಸಿ ಗರ ಸುರಕ್ಷಿತ ಸಂಚಾರಕ್ಕೆ ಪೂರಕವಾದ ವ್ಯವಸ್ಥೆ ಹೊಂದಿದೆ.

ಜಾಹಿರಾತು ಪ್ರದರ್ಶನಕ್ಕೆ ಅವಕಾಶ: ಮೃಗಾಲಯ ಪ್ರಾಧಿ ಕಾರದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕಣ ð `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಸಬ್ ವೇ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಪ್ರವಾಸಿ ಗರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಓರ್ವ ಪ್ರವಾಸಿಗರು ಸಬ್‌ವೇಯಲ್ಲಿನ ಮೆಟ್ಟಿಲ ಎರಡೂ ಬದಿಯಲ್ಲಿ ರೇಲಿಂಗ್ಸ್ ಅಳವಡಿಸುವಂತೆ ಸಲಹೆ ನೀಡಿದ್ದಾರೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ. ಉದ್ಘಾಟನೆ ದಿನಾಂಕ ನಿಗದಿಯಾಗುವುದರೊಳಗೆ ರೇಲಿಂಗ್ಸ್ ಅಳವಡಿಸಲಾಗುವುದು. ಇನ್ನು ವಿಶೇಷಚೇತನರಿಗೆ ಮೃಗಾಲಯ ಮುಖ್ಯ ದ್ವಾರದಿಂ ದಲೇ ನೇರ ಪ್ರವೇಶಾವಕಾಶ ಕಲ್ಪಿಸಿರುವುದರಿಂದ ಹಾಗೂ ಸಬ್ ವೇಯಿಂದ ಪ್ರವೇಶ ದ್ವಾರಕ್ಕೆ ರ‍್ಯಾಂಪ್ ಅಳವಡಿಸಿಲ್ಲ ಎಂದರು.
ಸಬ್ ವೇ ಗೋಡೆಗಳ ಮೇಲೆ ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರುವ ಚಿತ್ರಗಳು ಹಾಗೂ ಎಲ್‌ಇಡಿ ಮೂಲಕ ಪ್ರಾಣ ಗಳ ಸಂರಕ್ಷಣೆ ಮಹತ್ವ ಸಾರಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್-೧೯ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣ ಸಿದೆ. ಆದಾಯ ಸಂಗ್ರಹ ಕುಸಿ ದಿದೆ. ಈ ಹಿನ್ನೆಲೆಯಲ್ಲಿ ಸಬ್ ವೇ ಗೋಡೆಗಳ ಮೇಲೆ ಖಾಸಗಿ ಕಂಪನಿ, ಮಳಿಗೆ, ವಾಣ ಜೋದ್ಯಮ, ಹೋಟೆಲ್ ಉದ್ಯಮಗಳ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಆ ಮೂಲಕ ಆದಾಯ ಕ್ರೋಢೀಕರಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

 

ಮೃಗಾಲಯ, ಕಾರಂಜಿ ಕೆರೆ ಪ್ರವೇಶ ಶುಲ್ಕ ಸಂಗ್ರಹಣೆ ಕುಸಿತ
ಕಾರಂಜಿಕೆರೆ ಹಾಗೂ ಮೃಗಾಲಯಕ್ಕೆ ೨೦೧೯-೨೦ನೇ ಸಾಲಿನಲ್ಲಿ ೩೫,೦೯,೧೮೬ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ೨೭,೮೨,೪೨,೧೯೦ ರೂ. ಆದಾಯ ಸಂಗ್ರಹವಾಗಿತ್ತು. ೨೦೨೦-೨೧ನೇ ಸಾಲಿನಲ್ಲಿ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ೮,೫೬,೬೧೯ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ೭,೫೬,೦೦,೨೮೯ ರೂ. ಆದಾಯ ಸಂಗ್ರಹವಾಗಿದೆ. ೨೦೨೧-೨೨ನೇ ಸಾಲಿನಲ್ಲಿ ೯,೮೨,೧೭೨ ಮಂದಿ ಪ್ರವಾಸಿಗರಿಂದ ೯,೫೧,೧೪,೭೪೦ ರೂ. ಸಂಗ್ರಹವಾಗಿದೆ. ಕೋವಿಡ್ ಸಮಸ್ಯೆಗೂ ಮುನ್ನ ಸಂಗ್ರಹ ವಾಗುತ್ತಿದ್ದ ಆದಾಯದಲ್ಲಿ ಕಳೆದ ಎರಡು ವರ್ಷದಿಂದ ಸುಮಾರು ೨೫ ಕೋಟಿ ರೂ. ಇಳಿಕೆಯಾಗಿದೆ. ಸಿಬ್ಬಂದಿ ವೇತನ, ಮೃಗಾಲಯದ ನಿರ್ವಹಣೆ, ಪ್ರಾಣ -ಪಕ್ಷಿಗಳ ಆರೈಕೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚ ತಿಂಗಳಿಗೆ ೨ ಕೋಟಿ ರೂ. ಬೇಕಾಗಿರುವುದರಿಂದ ಮೃಗಾಲಯ ಮತ್ತಷ್ಟು ಆದಾಯ ನಿರೀಕ್ಷೆಯಲ್ಲಿದೆ. ಅದಕ್ಕಾಗಿ ಈಗ ಕಾರಂಜಿಕೆರೆಯ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದೆ.

 

 

Translate »