ಮೈಸೂರು ಮಹಾನಗರಪಾಲಿಕೆಯಿಂದ  141.11 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ
ಮೈಸೂರು

ಮೈಸೂರು ಮಹಾನಗರಪಾಲಿಕೆಯಿಂದ 141.11 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ

February 9, 2022

ಮೈಸೂರು, ಫೆ.8(ಆರ್‍ಕೆ)-ಕೋವಿಡ್ ಸಾಂಕ್ರಾಮಿಕದ ನಡುವೆಯೂ 2021-22ನೇ ಸಾಲಿನಲ್ಲಿ ಮೈಸೂರು ಮಹಾನಗರಪಾಲಿಕೆಯು 141.11 ಕೋಟಿ ರೂ.ಗಳ ದಾಖಲೆಯ ಆಸ್ತಿ ತೆರಿಗೆ ಸಂಗ್ರಹಿಸಿದೆ.

ಕುಡಿಯುವ ನೀರು ಸರಬರಾಜು, ಸ್ವಚ್ಛತೆ, ಒಳ ಚರಂಡಿ, ಬೀದಿ ದೀಪ, ರಸ್ತೆ, ಪಾರ್ಕ್, ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲ ಸೌಕರ್ಯ ಒದಗಿಸುವ ಜವಾ ಬ್ದಾರಿ ನಿರ್ವಹಿಸಲು ಮೈಸೂರು ಮಹಾನಗರಪಾಲಿಕೆಗೆ ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆಗಳ ರಹದಾರಿ ಶುಲ್ಕ, ಕಟ್ಟಡಗಳ ಬಾಡಿಗೆ ಹಾಗೂ ಜಾಹೀರಾತುಗಳಿಂದ ಬರುವ ಆದಾಯಗಳೇ ಪ್ರಮುಖ ಸಂಪನ್ಮೂಲಗಳಾಗಿವೆ.

ಆ ಪೈಕಿ ಆಸ್ತಿ ತೆರಿಗೆಯಿಂದ ಪಾಲಿಕೆಗೆ ಅತೀ ಹೆಚ್ಚು ಆದಾಯ ಬರಲಿದ್ದು, ಕೋವಿಡ್-19 ನಿರ್ಬಂಧದಿಂದಾಗಿ ಆಗಿಂದಾಗ್ಗೆ ಲಾಕ್‍ಡೌನ್, ವಾರಾಂತ್ಯದ ಕಫ್ರ್ಯೂ, ನಿಷೇ ಧಾಜ್ಞೆಗಳಂತಹ ನಿರ್ಬಂಧಗಳನ್ನು ವಿಧಿಸಿದ್ದಾಗ್ಯೂ ನಾಗರಿ ಕರು ಆರ್ಥಿಕ ಸಂಕಷ್ಟದ ನಡುವೆಯೂ ಆಸ್ತಿ ತೆರಿಗೆಯಿಂ ದಲೇ ಈ 1 ವರ್ಷದಲ್ಲಿ ಅತೀ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಿದೆ. ಮೈಸೂರು ನಗರದಲ್ಲಿ 32,311 ನಿವೇಶನ ಗಳು, 1,58, 350 ವಸತಿ ಮನೆಗಳು ಹಾಗೂ 7.288 ವಾಣಿಜ್ಯ ಕಟ್ಟಡಗಳಿಂದ 2021-22ನೇ ಸಾಲಿನ ಮಾರ್ಚ್ 31ರವರೆಗೆ 205.05 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದ ಲಾಗಿದ್ದು, ಫೆ.7ರವರೆಗೆ 141.11 ಕೋಟಿ ರೂ. ವಸೂಲಿ ಮಾಡುವಲ್ಲಿ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ರುವ ಒಟ್ಟು 1,97, 949 ಆಸ್ತಿಗಳಿಂದ ಮಾರ್ಚ್ ಒಳಗೆ 170 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. 2016-17ನೇ ಸಾಲಿನಲ್ಲಿ ಮೈಸೂರು ಪಾಲಿಕೆಯು 95.85 ಕೋಟಿ ರೂ., 2017-18ನೇ ಸಾಲಿನಲ್ಲಿ 116.24 ಕೋಟಿ ರೂ., 2018-19ನೇ ಸಾಲಿನಲ್ಲಿ 125.38 ಕೋಟಿ ರೂ., 2019-20ರಲ್ಲಿ 126.29 ಕೋಟಿ ರೂ. ಹಾಗೂ 2020-21ನೇ ಸಾಲಿನಲ್ಲಿ 120.17 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡಿತ್ತು. ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಿರುವುದರಿಂದ ನಾಗರಿ ಕರು ಕೋವಿಡ್ ಸಂಕಷ್ಟದ ನಡುವೆಯೂ ತಮ್ಮ ಆಸ್ತಿ ತೆರಿಗೆ ಪಾವತಿಸಲು ಉತ್ತಮ ಪ್ರತಿಕ್ರಿಯೆ ನೀಡಿರುವುದರಿಂದ ಈ ಬಾರಿ ಅತೀ ಹೆಚ್ಚಿನ ಮೊತ್ತದ ಆದಾಯ ಗಳಿಸಲು ಸಾಧ್ಯವಾಗಿದೆ.

ಪಾಲಿಕೆ ಎಲ್ಲಾ ವಲಯಾಧಿಕಾರಿಗಳು, ಕಂದಾಯಾಧಿಕಾರಿ ಗಳು, ರೆವಿನ್ಯೂ ಇನ್ಸ್‍ಪೆಕ್ಟರ್‍ಗಳು ಹಾಗೂ ಸಿಬ್ಬಂದಿಗಳು ಜಾಗೃತಿ ಮೂಡಿಸಿ ಮನೆ ಮನೆಗೆ ತೆರಳಿ ಜನಪ್ರತಿನಿಧಿಗಳ ಸಹಕಾರದಿಂದ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ ನಡೆಸಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ. ಅದೇ ರೀತಿ ಕುಡಿಯುವ ನೀರಿನ ತೆರಿಗೆ, ಉದ್ದಿಮೆ ರಹದಾರಿ ನವೀಕರಣ ಶುಲ್ಕ, ಜಾಹೀರಾತು ಶುಲ್ಕ ಹಾಗೂ ಕಟ್ಟಡಗಳ ಬಾಡಿಗೆ ಯಂತಹ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ವಸೂಲು ಮಾಡುತ್ತಿದ್ದು, ಇದರಿಂದ ಮೈಸೂರು ಪಾಲಿಕೆ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದಂತಾಗಿದೆ.

Translate »