ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ಸೃಷ್ಟಿಸಿದ್ದೇ  ರಾಜ್ಯ ಬಿಜೆಪಿ ಸರ್ಕಾರದ ಸಾಧನೆ: ಆರೋಪ
ಮೈಸೂರು

ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ಸೃಷ್ಟಿಸಿದ್ದೇ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ: ಆರೋಪ

February 9, 2022

ಮೈಸೂರು, ಫೆ.8(ಆರ್‍ಕೆಬಿ)- ರಾಜ್ಯಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿದೆ. ಶತಮಾನದ ಎನ್‍ಟಿಎಂ ಶಾಲೆಯ ಕಟ್ಟಡವನ್ನು ಜನರ ವಿರೋಧದ ನಡುವೆಯೂ ನೆಲಸಮ ಗೊಳಿಸಲಾಗಿದೆ. ಸೇವಾ ಭದ್ರತೆ ಕೇಳಿದ ಅತಿಥಿ ಉಪನ್ಯಾಸ ಕರ ಕೆಲಸದ ಅವಧಿಯನ್ನು 15 ಗಂಟೆಗಳಿಗೆ ಏರಿಸಲಾಗಿದೆ. ಇವೆಲ್ಲದರ ಮೂಲಕ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶೈಕ್ಷ ಣಿಕ ಅರಾಜಕತೆಯನ್ನು ಸೃಷ್ಟಿ ಮಾಡಿದೆ ಎಂದು ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದ ಎನ್‍ಟಿಎಂ ಶಾಲೆ ಉಳಿಸುವಂತೆ ಮೈಸೂರಿನ ಜನರ ಹೋರಾಟಕ್ಕೂ ಮಣಿಯದ ಸರ್ಕಾರ ಶಾಲೆಯ ಕಟ್ಟಡ ವನ್ನು ರಾತ್ರೋರಾತ್ರಿ ಕೆಡವಿ ಹಾಕಿದೆ. ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರ ಮೈಸೂರಿಗೆ ಭೇಟಿ ನೀಡಿ ಹೋದ ಕೆಲವೇ ಗಂಟೆಗಳಲ್ಲಿ ಕಟ್ಟಡವನ್ನು ಕೆಡವಿ ಹಾಕಿರುವುದನ್ನು ನೋಡಿದರೆ ಸಚಿವರೇ ಕಟ್ಟಡ ಕೆಡ ವಲು ಆದೇಶ ನೀಡಿರುವಂತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿ ಹಿಜಾಬ್ ವಿರುದ್ಧ ಕೇಸರಿ ಶಾಲುಗಳನ್ನು ತರಲಾಗಿದೆ. ಇದರ ಹಿಂದೆ ದೊಡ್ಡ ಧಾರ್ಮಿಕ ಹುನ್ನಾರವಿದೆ. ಸಮಸ್ಯೆ ಸಣ್ಣದಾಗಿದ್ದಾಗಲೇ ಅದನ್ನು ಸರಿಪಡಿಸುವುದನ್ನು ಬಿಟ್ಟು ಅನಗತ್ಯವಾಗಿ ಬೃಹದಾಕಾರ ವಾಗಿ ಬೆಳೆಸಿ, ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಹಾಳು ಮಾಡಲಾಗುತ್ತಿದೆ ಎಂದು ದೂರಿದರು.

ಅತಿಥಿ ಉಪನ್ಯಾಸಕರು ಖಾಯಮಾತಿಗಾಗಿ ಹಾಗೂ ಜೀವನ ಭದ್ರತೆಗಾಗಿ ಹೋರಾಟ ನಡೆಸುತ್ತಿದ್ದರೆ ಅವರಿಗೆ ಅವೈಜ್ಞಾನಿಕವಾಗಿ ಕೆಲಸದ ಅವಧಿಯನ್ನು 15 ಗಂಟೆಗಳಿಗೆ ಹೆಚ್ಚಿಸಿದೆ. ಇದರಿಂದ ಸಾಕಷ್ಟು ಮಂದಿ ಉದ್ಯೋಗ ವಂಚಿತರಾಗುವ ಅಪಾಯವಿದೆ ಎಂದು ತಿಳಿಸಿದರು.

ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತ ನಾಡಿ, ವಿದ್ಯಾರ್ಥಿಗಳ ನಡುವೆ ಜಾತಿ, ಧರ್ಮದ ವಿಷ ಬೀಜ ಬಿತ್ತಲಾಗುತ್ತದೆ. ಧರ್ಮಗಳ ನಡುವೆ ಸಂಘರ್ಷಕ್ಕೆ ಸರ್ಕಾರವೇ ಎಡೆ ಮಾಡಿಕೊಡುತ್ತಿದೆ. ಮನುಷ್ಯತ್ವ, ಸಂಸ್ಕøತಿ ಇಲ್ಲದ ಜನರಿಂದ ಇವೆಲ್ಲವೂ ನಡೆಯುತ್ತಿವೆ. ರಾಜ್ಯದಲ್ಲಿ ಒಂದಲ್ಲ ಒಂದು ಸಮಸ್ಯೆಯನ್ನು ಸೃಷ್ಟಿಸುವುದು ಬಿಜೆಪಿ ಸರ್ಕಾರದ ಸಿದ್ಧಾಂತವಾಗಿದೆ. ಕೇಸರಿ ಶಾಲುಗಳಿಗೆ ತಡೆಯೊಡ್ಡದಿದ್ದರೆ ನಾವು ನೀಲಿ ಶಾಲುಗಳನ್ನು ಹಾಕಿ ಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಬೇಕಾ ಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎನ್‍ಟಿಎಂ ಶಾಲೆಯ ಕಟ್ಟಡ ಕೆಡವಿದ ಬಗ್ಗೆ ಪ್ರಸ್ತಾಪಿ ಸಿದ ಅವರು, ರಾಮಕೃಷ್ಣ ಆಶ್ರಮದಲ್ಲಿ ನೂರಾರು ಎಕರೆ ಜಾಗವಿದ್ದರೂ ವಿವೇಕಾನಂದ ಸ್ಮಾರಕ ನಿರ್ಮಿಸಲು ಎನ್‍ಟಿಎಂ ಶಾಲೆಯೇ ಏಕೆ ಬೇಕಿತ್ತು? ಎಂದು ಶಾಂತರಾಜು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎನ್.ಭಾಸ್ಕರ್, ಕಲೀಂ, ರೋಹಿತ್, ಲೋಕೇಶ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »