`ಮಿಕ್ಸೋಪತಿ’ ವಿರೋಧಿಸಿ ಆಲೋಪತಿ ವೈದ್ಯರ ಉಪವಾಸ ಸತ್ಯಾಗ್ರಹ ಆರಂಭ
ಮೈಸೂರು

`ಮಿಕ್ಸೋಪತಿ’ ವಿರೋಧಿಸಿ ಆಲೋಪತಿ ವೈದ್ಯರ ಉಪವಾಸ ಸತ್ಯಾಗ್ರಹ ಆರಂಭ

February 2, 2021

ಮೈಸೂರು,ಫೆ.1(ಪಿಎಂ)-ಹಲವು ರೀತಿ ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯ ರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿರು ವುದನ್ನು ಖಂಡಿಸಿ ಆಲೋಪತಿ ವೈದ್ಯರು ಮತ್ತೆ ಹೋರಾಟಕ್ಕಿಳಿದಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವ ದಲ್ಲಿ ದೇಶದಾದ್ಯಂತ ಸಂಘದ ಎಲ್ಲಾ ರಾಜ್ಯ ಘಟಕಗಳ ಆವರಣದಲ್ಲಿ ಇಂದಿನಿಂದ (ಫೆ.1) ಫೆ.14ರವರೆಗೆ `ಮಿಕ್ಸೋಪತಿ’ ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.

ಅಂತೆಯೇ ಸೋಮವಾರ ಬೆಂಗಳೂ ರಿನ ಚಾಮರಾಜಪೇಟೆಯಲ್ಲಿರುವ ಐಎಂಎ ಕರ್ನಾಟಕ ರಾಜ್ಯ ಘಟಕದ ಕಚೇರಿ ಆವ ರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸ ಲಾಯಿತು. ಮೊದಲ 24 ಗಂಟೆ ಅವಧಿಗೆ ಬೆಂಗಳೂರು, ಬಳ್ಳಾರಿ ಮತ್ತು ಗಂಗಾವತಿ ಶಾಖೆಗಳ ತಂಡದಿಂದ ಸತ್ಯಾಗ್ರಹ ನಡೆಯಿತು.

ಆಯುರ್ವೇದ ವೈದ್ಯ ಶಿಕ್ಷಣದ ಶಾಲ್ಯ ತಂತ್ರ ಮತ್ತು ಶಾಲಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ತರ ಬೇತಿ ಬಳಿಕ ಹಲವು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ಖಂಡಿಸಿ ನಡೆ ಯುತ್ತಿರುವ ಈ ಉಪವಾಸ ಸತ್ಯಾಗ್ರಹ ದಲ್ಲಿ ಮೈಸೂರು ಮತ್ತು ಕೊಡಗು ಶಾಖೆ ಗಳ ತಂಡ ಫೆ.3ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಲಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಐಎಂಎ ಮೈಸೂರು ಘಟಕದ ಅಧ್ಯಕ್ಷ ಡಾ.ಬಿ.ಎನ್.ಆನಂದರವಿ, 14 ದಿನಗಳು ಇಡೀ ದೇಶದಾದ್ಯಂತ ಉಪ ವಾಸ ಸತ್ಯಾಗ್ರಹ ನಡೆಯಲಿದೆ. ಕರ್ನಾಟಕ ರಾಜ್ಯ ಐಎಂಎ ಶಾಖೆ ಆವರಣದಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ ಎಂದು ತಿಳಿಸಿದರು.

ಮೈಸೂರು-ಕೊಡಗು ಐಎಂಎ ಶಾಖೆ ಗಳ ಸುಮಾರು 30 ಮಂದಿ ತಂಡ ಫೆ.3 ರಂದು ಬೆಂಗಳೂರಿಗೆ ತೆರಳಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ. ಫೆ.3ರ ಬೆಳಗ್ಗೆ 10ರಿಂದ ಫೆ.4ರ ಬೆಳಗ್ಗೆ 10 ಗಂಟೆವರೆಗೆ ಮೈಸೂರು-ಕೊಡಗು ಶಾಖೆಗಳ ತಂಡ ಉಪ ವಾಸ ಸತ್ಯಾಗ್ರಹ ನಡೆಸಲಿದೆ. ನಮ್ಮ ತಂಡಕ್ಕೂ ಮುನ್ನ ಬೇರೆ ಜಿಲ್ಲಾ ಶಾಖೆಗಳು ಸತ್ಯಾಗ್ರಹ ನಡೆಸಿರುತ್ತವೆ. ಅಂತೆಯೇ ನಮ್ಮ ತಂಡದ ಬಳಿಕ ಬೇರೆ ಜಿಲ್ಲಾ ಶಾಖೆಗಳ ತಂಡಗಳು ಸತ್ಯಾಗ್ರಹ ಮುಂದುವರೆಯಲಿದೆ ಎಂದರು.

Translate »