ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯ ಆರಂಭ
ಚಾಮರಾಜನಗರ

ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯ ಆರಂಭ

October 22, 2020
  •  22 ತಿಂಗಳು ಬಳಿಕ ಮಾರಮ್ಮನ ದರ್ಶನ
  • ಹಸಿರು ತೋರಣಗಳಿಂದ ಕಂಗೊಳಿಸುತ್ತಿರುವ ದೇವಾಲಯ

ಹನೂರು, ಅ.21(ಸೋಮು)- ತಾಲೂಕಿನ ಕಿಚ್ಚುಗುತ್ ಮಾರಮ್ಮ ದೇವಾಲಯ ಪುನಾರಂಭಕ್ಕೆ ಸಂಬಂಧಿಸಿದಂತೆ ಪಾಪ ಪ್ರಾಯಶ್ಚಿತ, ಹೋಮ, ಹವನ, ಕುಂಭಾಭಿಷೇಕ ಸೇರಿದಂತೆ 4 ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಗಳು ಬುಧವಾರ ಸಂಜೆ 5.30ರಿಂದ ಪ್ರಾರಂಭವಾಗಿದೆ.

ಕಳೆದ 22 ತಿಂಗಳ ನಂತರ ವಿಷ ಪ್ರಸಾದ ದುರಂತದ ಬಳಿಕ ತಾಲೂಕಿನ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದರ್ಶನಕ್ಕೆ ಇಂದಿನ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದೆ. ಮೊದಲ ದಿನದ ಧಾರ್ಮಿಕ ಪೂಜಾ ಕಾರ್ಯ ಗಳ ಹಿನೆÀ್ನಲೆ ದೇವಾಲಯ ಹಾಗೂ ಆವರಣವನ್ನು ಶುಚಿ ಗೊಳಿಸಿ ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾ ಲಂಕಾರಗಳನ್ನು ಕೈಗೊಂಡಿರುವುದು ಕಂಡು ಬಂದಿತು. ಧಾರ್ಮಿಕ ದತ್ತಿ ಇಲಾಖೆಯ ಆಗಮಿಕ ಪಂಡಿತರು, ವೇದ ಮತ್ತು ಸಂಸ್ಕøತ ಪಂಡಿತರ ಮಾರ್ಗಸೂಚಿಯಂತೆ ಬೆಳಗ್ಗೆಯಿಂದಲೇ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದ್ದು, ವಿಷ ಪ್ರಸಾದ ದುರಂತ ಪ್ರಕರಣ ಬಳಿಕ ಮೊದಲ ಬಾರಿಗೆ ದೇವಾಲಯವು ಕಂಗೊಳಿಸುತ್ತಿತ್ತು.

ವಿಷ ಪ್ರಸಾದ ದುರಂತದ ಬಳಿಕ ಮುಚ್ಚಲಾಗಿದ್ದ ಮಾರಮ್ಮನ ದೇವಾಲಯವನ್ನು ಪುನಃ ತೆಗೆದು ಸಾರ್ವ ಜನಿಕ ದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂದು ಮುಜರಾಯಿ ಇಲಾಖೆ ಹೊರಡಿಸಿದ ಆದೇಶದ ಮೇರೆಗೆ 22 ತಿಂಗಳ ಬಳಿಕ ದೇವಾಲಯವನ್ನು ತೆರೆಯಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಿಯೋಜನೆ ಗೊಂಡಿರುವ ಆಗಮಿಕ ಅರ್ಚಕ ಮಲ್ಲಣ್ಣ ನೇತೃತ್ವದ ತಂಡ ಬುಧವಾರದಿಂದ ಶುಕ್ರವಾರವರೆಗೆ ಹೋಮ ಹವನ ಕಾರ್ಯಗಳನ್ನು ನಡೆಸಿಕೊಡಲಿದ್ದಾರೆ.

ದೇವಸ್ಥಾನ ಪುನರಾರಂಭ: ರಾಷ್ಟ್ರ ವ್ಯಾಪ್ತಿಯಲ್ಲಿ ಹೆಸರು ಆಗಿದ್ದ ತಾಲೂಕಿನ ಕಿಚ್ಚುಗುತ್‍ನ ಮಾರಮ್ಮ ದೇವಾಲಯವು ವಿಷ ಪ್ರಸಾದ ದುರಂತದ ಬಳಿಕ ಮುಚ್ಚಲಾಗಿತ್ತು. ಈ ಹಿನೆÀ್ನಲೆ ಇಂದು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ವಿಶೇಷ ಪೂಜಾ ಕಾರ್ಯಗಳು ನಡೆಯುವ ಮುನ್ನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಪಂಚ ಕಳಸಕ್ಕೆ ವಿಶೇಷ ಪೂಜಾ ಸಲ್ಲಿಸಿ ಬಳಿಕ ಐವರು ಮುತ್ತೈದೆಯರ ಮೂಲಕ ದೇವಸ್ಥಾನದ ಬಳಿ ತಂದು ದೇವಾಲಯದ ಬಾಗಿಲು ತೆರೆದು ಪೂಜೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ತಾಲೂಕು ಆಡಳಿತ ವತಿಯಿಂದ ದೇವಸ್ಥಾನದಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ದೇವಸ್ಥಾನಕ್ಕೆ ಸುಣ್ಣ ಬಣ್ಣ, ಬಳಿದು ದೇವಾಲಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಕಲ್ಯಾಣಿ ಬಾವಿ ಹಾಗೂ ಪ್ರಾಂಗಣ, ಅಡುಗೆ ಕೋಣೆ ಮುಂತಾದವುಗಳನ್ನು ಸಿದ್ಧಗೊಳಿಸಲಾಗಿದೆ.

 

Translate »