ಗುಂಡ್ಲುಪೇಟೆ: ಜಿಟಿಟಿಸಿ ನೂತನ ಕಟ್ಟಡ ಉದ್ಘಾಟನೆ
ಚಾಮರಾಜನಗರ

ಗುಂಡ್ಲುಪೇಟೆ: ಜಿಟಿಟಿಸಿ ನೂತನ ಕಟ್ಟಡ ಉದ್ಘಾಟನೆ

October 22, 2020

ಚಾಮರಾಜನಗರ, ಅ.21- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೌಶಲಾಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಗುಂಡ್ಲುಪೇಟೆಯ ದುಂದಾಸನಪುರದಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ತರಬೇತಿ ಮತ್ತು ಆಡಳಿತ ವಿಭಾಗದ ನೂತನ ಕಟ್ಟಡ ಉದ್ಘಾಟನೆ ಬುಧವಾರ ನೆರವೇರಿತು.

ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ವಚ್ರ್ಯುವಲ್ ಮೂಲಕ ಬೆಂಗಳೂರಿನಿಂದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ ಆಧುನಿಕ ಕಟ್ಟಡ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರಕ್ಕಾಗಿ ಇಂತಹ ಉತ್ತಮ ಕಟ್ಟಡ ಅಗತ್ಯವಿತ್ತು. ಈ ಕಟ್ಟಡ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಬಳಕೆಯಾಗುವ ನಿಟ್ಟಿನಲ್ಲಿ ಶ್ರಮಿಸಿರುವ ಇಲಾಖೆಯ ಎಲ್ಲಾ ಉನ್ನತ ಹಾಗೂ ವಿವಿಧ ಹಂತದ ಅಧಿಕಾರಿಗಳು, ಕೇಂದ್ರದ ಪ್ರಾಂಶು ಪಾಲರು, ಬೋಧಕ ವರ್ಗಕ್ಕೆ ಅಭಿನಂದಿಸುವುದಾಗಿ ನುಡಿದರು.

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ ಒದಗಿಸ ಲಾಗಿರುವ ನೂತನ ಕಟ್ಟಡ ವ್ಯವಸ್ಥೆ ಲೋಕಾರ್ಪಣೆ ಸಂದರ್ಭ ದಲ್ಲಿ ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾ ಜನತೆಗೆ ಹಾಗೂ ಜಿಲ್ಲೆಯ ಹೊಸ ಕಾರ್ಯಕ್ರಮಗಳಿಗೆ ಶುಭ ಕೋರುವುದಾಗಿ ಉಪಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.

ವಚ್ರ್ಯುವಲ್ ವೇದಿಕೆಯ ಮೂಲಕ ಕೌಶಲಾಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯ ದರ್ಶಿಯ ಡಾ.ಎಸ್.ಸೆಲ್ವಕುಮಾರ್ ಮಾತನಾಡಿ, ನೂತನ ತರಬೇತಿ ಕಟ್ಟಡ ಕೇಂದ್ರದಿಂದ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಲು ಅವಕಾಶ ಲಭಿಸಲಿದೆ. ಅತ್ಯುತ್ತಮವಾಗಿ ಕಲಿಯಲು ಪೂರಕವಾಗಿರುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್‍ಗಳ ಅಧ್ಯಯನ ಮಾಡಿ ಉದ್ಯೋಗ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಗುಂಡ್ಲುಪೇಟೆಯ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗಣಪತಿ ಎಸ್.ಮೇತ್ರಿ, ಬೋಧಕ ವೃಂದದವರು ಉಪಸ್ಥಿತರಿದ್ದರು.

 

Translate »