ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಫಲಕ ಅಳವಡಿಕೆ: ಕಾಂಗ್ರೆಸ್ ಪ್ರತಿಭಟನೆ
ಚಾಮರಾಜನಗರ

ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಫಲಕ ಅಳವಡಿಕೆ: ಕಾಂಗ್ರೆಸ್ ಪ್ರತಿಭಟನೆ

October 22, 2020

ಕೊಳ್ಳೇಗಾಲ, ಅ.21(ನಾಗೇಂದ್ರ)- ತಾಲೂಕಿನ ಹಲವು ಗ್ರಾಮಗಳ ಮುಖ್ಯ ರಸ್ತೆಯ ಬದಿಯಲ್ಲಿ ಜನಪ್ರತಿನಿಧಿಗಳ ಕುರಿತು ಅವಹೇಳನಕಾರಿ ಫಲಕ ಅಳವಡಿಸಿರುವ ಕಿಡಿಗೇಡಿಗಳ ಬಂಧಿಸುವಂತೆ ಆಗ್ರಹಿಸಿ ಪಟ್ಟಣ ದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು.

ಪಟ್ಟಣದ ನಾಗಪ್ಪ ವೃತ್ತದ ಬಳಿ ಸಮಾ ವೇಶಗೊಂಡ ಪ್ರತಿಭಟನಾಕಾರರು, ಫಲಕ ಅಳವಡಿಸಿರುವವರು ಹಾಗೂ ಫಲಕ ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಘೋಷಣೆ ಕೂಗಿ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರಾಮಾಂತರ ಠಾಣೆಯಲ್ಲಿ ಫಲಕ ಅಳವಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ ದೂರು ನೀಡಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಶಿವಮ್ಮಕೃಷ್ಣ, ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು ಇನ್ನಿತರರು ಇದ್ದರು.

ಫಲಕ ಅಳವಡಿಸಿರುವವರ ವಿರುದ್ಧ ಕ್ರಮ: ಕೊಳ್ಳೇಗಾಲ ಸಬ್ ಡಿವಿಜನ್ ವ್ಯಾಪ್ತಿಯ ಲ್ಲಿಯೂ ಈ ರೀತಿಯ ಒಂದು ಫಲಕ ಪತ್ತೆ ಯಾಗಿದೆ. ಈ ಫಲಕ ಹಾಕಿರುವವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಕೊಳ್ಳೇಗಾಲ ಪಟ್ಟಣ ಠಾಣೆಯ ಇನ್ ಸ್ಪೆಕ್ಟರ್ ಶ್ರೀಕಾಂತ್ ಪತ್ರಿಕೆಗೆ ತಿಳಿಸಿದರು.

 

 

 

Translate »