ಸಂಚಾರಿ ನಿಯಮ ಉಲ್ಲಂಘಿಸಿದ ಯುವಕನ ಮೇಲೆ ಪೇದೆಯಿಂದ ಹಲ್ಲೆ ಪೇದೆ ವಿರುದ್ಧ ಸಂಬಂಧಿಕರ ಪ್ರತಿಭಟನೆ
ಚಾಮರಾಜನಗರ

ಸಂಚಾರಿ ನಿಯಮ ಉಲ್ಲಂಘಿಸಿದ ಯುವಕನ ಮೇಲೆ ಪೇದೆಯಿಂದ ಹಲ್ಲೆ ಪೇದೆ ವಿರುದ್ಧ ಸಂಬಂಧಿಕರ ಪ್ರತಿಭಟನೆ

October 22, 2020

ಕೊಳ್ಳೇಗಾಲ, ಅ.21(ನಾಗೇಂದ್ರ)- ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಯುವಕನ ಮೇಲೆ ಪೊಲೀಸ್ ಪೇದೆ ಯೊಬ್ಬರು ಹಲ್ಲೆ ನಡೆಸಿದ್ದು, ಇದನ್ನು ಖಂಡಿಸಿ ಯುವಕನ ಸಂಬಂಧಿಕರು, ಸ್ನೇಹಿತರು ಪಟ್ಟಣದ ಗ್ರಾಮಾಂತರ ಠಾಣೆಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಘಟನೆಯ ವಿವರ: ನಗರದ ನಾಗಪ್ಪ ವೃತ್ತದ ಬಳಿ ಸಂಚಾರಿ ನಿಯಮ ಉಲ್ಲಂ ಘಿಸುವವರನ್ನು ತಡೆದು ಪೊಲೀಸರು ದಂಡ ವಿಧಿಸುತ್ತಿದ್ದರು. ಈ ವೇಳೆ ಮುಡು ಗುಂಡ ಗ್ರಾಮದ ಯುವಕ ಮಲ್ಲೇಶ್ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬರು ತ್ತಿರುವುದನ್ನು ಕಂಡ ಪೇದೆಯೊಬ್ಬರು ಆತನನ್ನು ತಡೆದು 500 ರೂ. ದಂಡ ಹಾಕಿ, ಸ್ಥಳದಲ್ಲಿಯೇ ದಂಡ ಪಾವತಿಸುವಂತೆ ಹೇಳಿದ್ದಾರೆ. ಆದರೆ, ಮಲ್ಲೇಶ್ ನನ್ನ ಬಳಿ ಕೇವಲ 50 ರೂ. ಮಾತ್ರವಿದೆ. ನಾನು ಆಮೇಲೆ ದಂಡ ಕಟ್ಟುತ್ತೇನೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೂ ತರುತ್ತೇನೆ ಎಂದು ಹೇಳಿದ್ದಾನೆ. ಆದರೂ ಪೇದೆ ದಂಡ ಪಾವತಿಸಲೇಬೇಕು ಎಂದು ಬಲವಂತ ಮಾಡಿ ಆ ಯುವಕನ ಮೇಲೆ ಹಲ್ಲೆ ಮಾಡಿ, ಅನುಚಿತ ಪದಗಳಿಂದ ನಿಂದಿಸಿದ್ದಾರೆ ಎಂದು ಯುವಕನ ಸಂಬಂಧಿಕರು ದೂರಿದ್ದಾರೆ.

ಯುವಕನ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಆತನ ಸ್ನೇಹಿತರು, ಸಂಬಂಧಿಕರು ಹಾಗೂ ಹಲ್ಲೆ ವೇಳೆ ಸ್ಥಳದಲ್ಲಿದ್ದ ಕೆಲವು ವಾಹನ ಸವಾರರು ಪಟ್ಟಣದ ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ, ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಸಾರ್ವಜನಿಕ ರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿ, ಒಂದು ವೇಳೆ ದಂಡ ನೀಡಲು ಹಣವಿಲ್ಲದಿದ್ದರೇ ವಾಹನ ಜಪ್ತಿ ಮಾಡಿ, ದಂಡ ಪಾವತಿಸಿದ ಬಳಿಕ ವಾಹನ ಬಿಡುಗಡೆ ಮಾಡಬೇಕು. ಇದನ್ನು ಹೊರತು ಪಡಿಸಿ, ಹಲ್ಲೆ ನಡೆಸುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಹಿರಿಯ ಅಧಿಕಾರಿಗಳು ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ದ್ದಾರೆ. ಆದರೆ, ಕೆಲವರು ಸಾರ್ವಜನಿಕ ರೊಂದಿಗೆ ಬೇಜಾವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇದೇನಾ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಹಲ್ಲೆ ನಡೆಸಿದ ಪೇದೆಯ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾಕಾರರ ಅಹವಾಲು ಆಲಿಸಿದ ಪಿಎಸೈ ತಾಜುದ್ದಿನ್ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳು ತ್ತೇವೆ. ಇಂದು ನಡೆದಿರುವ ಘಟನೆಗೆ ವಿಷಾದಿ ಸುತ್ತೇನೆ ಎಂದು ಸಮಾಧಾನಪಡಿಸಿದರು.

Translate »