ಕಾನೂನು ಸುವ್ಯವಸ್ಥೆ ಸಂಬಂಧ ಸಿಎಂ, ಗೃಹ ಸಚಿವರಿಗೆ ಅಮಿತ್ ಷಾ ತರಾಟೆ
News

ಕಾನೂನು ಸುವ್ಯವಸ್ಥೆ ಸಂಬಂಧ ಸಿಎಂ, ಗೃಹ ಸಚಿವರಿಗೆ ಅಮಿತ್ ಷಾ ತರಾಟೆ

August 5, 2022

ಬೆಂಗಳೂರು, ಆ.4(ಕೆಎಂಶಿ)- ಪಕ್ಷದ ಕಾರ್ಯಕರ್ತರೇ ತಿರುಗಿ ಬೀಳುವಷ್ಟು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿ ರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಷಾ ತಾವು ತಂಗಿದ್ದ ಹೋಟೆಲ್‍ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕರೆಸಿಕೊಂಡು ಇತ್ತೀಚಿನ ಸರಣಿ ಹತ್ಯೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಪಡೆದರು. ರಾಜ್ಯ ಸರ್ಕಾರದ ಮಾಹಿತಿ ಪಡೆಯುವುದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ನಿನ್ನೆ (ಬುಧವಾರ) ದೆಹಲಿಗೆ ಕರೆಸಿಕೊಂಡ ಗೃಹ ಸಚಿವರು ಅವರಿಂದ ಹಿಂದೂ ಯುವಕರ ಹತ್ಯೆ ಹಾಗೂ ಇತ್ತೀಚಿನ ಮಂಗಳೂರು ಘಟನೆಯ ಬಗ್ಗೆಯು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು. ಪದೇ ಪದೆ ಹಿಂದು ಯುವಕರ ಹತ್ಯೆಯಾಗುತ್ತಿರುವುದು ಪರಿವಾರದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ವಿದ್ದರೂ ನಮ್ಮವರಿಗೆ ರಕ್ಷಣೆ ಏಕಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಹತ್ಯೆಗಳು ಯಾವ ಕಾರಣಕ್ಕೆ ಆಗುತ್ತಿವೆ. ಮಾಡುತ್ತಿರುವವರು ಯಾರು, ಅವರ ಹಿನ್ನೆಲೆ ಏನು, ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದೆಲ್ಲ ಪ್ರಶ್ನಿಸಿದ್ದಾರೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಿ.

ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡುವ ಉದ್ದೇಶವಿತ್ತು. ಹವಾಮಾನ ವೈಪರೀತ್ಯದ ಪರಿಣಾಮ ಭೇಟಿ ಸಾಧ್ಯವಾಗುತ್ತಿಲ್ಲ. ಮಂಗಳೂರಿಗೆ ಭೇಟಿ ನೀಡಬೇಕಾಗಿದ್ದ ಸಮಯವನ್ನು ಹಠಾತ್ತಾಗಿ ಯಲಹಂಕದ ಮದರ್‍ಡೈರಿ ಭೇಟಿಗೆ ಬಳಸಿಕೊಂಡರು. ಹಿಂದೂ ಯುವಕರ ಹತ್ಯೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ 30 ನಿಮಿಷಗಳ ಕಾಲ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮಾಹಿತಿ ಹಾಗೂ ಕೆಲವು ದಾಖಲೆಗಳನ್ನು ನೀಡಿದರು. ಕೇರಳದಲ್ಲಿ ರುವ ಹಿಂದೂ ವಿರೋಧಿ ಸಂಘಟನೆಗಳು ಈ ಕೃತ್ಯದಲ್ಲಿ ತೊಡಗಿವೆ. ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಇವರ ಕೈವಾಡ ವಿದೆ. ಇದು ಅಂತರರಾಜ್ಯ ಪ್ರಕರಣವಾಗಿರುವುದರಿಂದ ಎನ್‍ಐಎಗೆ ಕೊಡುವ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಅಮಿತ್ ಷಾ ಅವರಿಗೆ ಮಾಹಿತಿ ನೀಡಿದ್ದಾರೆ.
ಅಮಿತ್ ಷಾ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ನೆಟ್ಟಾರ್ ಸೇರಿದಂತೆ ಇತ್ತೀಚೆಗೆ ಯುವಕರ
ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹಸಚಿವರಿಗೆ ಮಾಹಿತಿ ಮತ್ತು ದಾಖಲೆಗಳನ್ನು ನಾನು ಮತ್ತು ಮುಖ್ಯಮಂತ್ರಿ ನೀಡಿದ್ದೇವೆ. ಕೇಂದ್ರ ಗೃಹ ಸಚಿವರು, ಹತ್ಯೆಯ ತನಿಖೆ ಬಗ್ಗೆ ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಿದರು. ಅವರು ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಮಂಗಳೂರು ಹತ್ಯೆ ಪ್ರಕರಣ ಕುರಿತಂತೆ ಸುದೀರ್ಘ ಮಾಹಿತಿ ಪಡೆದರು. ಎಲ್ಲವನ್ನೂ ಬಹಿರಂಗಪಡಿಸಲಾಗುವುದಿಲ್ಲ. ರಾಜ್ಯದಲ್ಲಿ ನಡೆಯು ತ್ತಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವರ ಗಮನಕ್ಕೆ ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳ ಬಗ್ಗೆಯೂ ಅವರಿಗೆ ಗೊತ್ತಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಅಮಿತ್ ಷಾಗೆ ತೃಪ್ತಿ ಇದೆ ಎಂದರು. ಫಾಜಿಲ್ ಹತ್ಯೆ ತನಿಖೆ ಮುಗಿಯುತ್ತ ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಆಗುತ್ತಿದೆ. ಎರಡು ಹತ್ಯೆ ಪ್ರಕರಣದಲ್ಲೂ ಪ್ರಮುಖ ಆರೋಪಿ ಯಾರು ಅನ್ನೋದು ಗೊತ್ತಾಗಿದೆ. ಮುಖ್ಯ ಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೆÇೀಹ ಅಷ್ಟೇ ಎಂದು ಹೇಳಿದರು.

Translate »