ಸಿದ್ದರಾಮೋತ್ಸವದಿಂದ ವಾಪಸ್ಸಾಗುತ್ತಿದ್ದ ವಾಹನ ಅಪಘಾತ: ಓರ್ವ ಸಾವು
ಮೈಸೂರು

ಸಿದ್ದರಾಮೋತ್ಸವದಿಂದ ವಾಪಸ್ಸಾಗುತ್ತಿದ್ದ ವಾಹನ ಅಪಘಾತ: ಓರ್ವ ಸಾವು

August 5, 2022

ಪಿರಿಯಾಪಟ್ಟಣ, ಆ.4- ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿ ಣಾಮ ಬುಧವಾರ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಮುಗಿಸಿ ಕೊಂಡು ವಾಪಸ್ಸಾಗುತ್ತಿದ್ದವರಲ್ಲಿ ಒಬ್ಬರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಅರಕಲ ಗೂಡು ತಾಲೂಕಿನ ಗಂಗೂರು ಹ್ಯಾಂಡ್‍ಪೆÇೀಸ್ಟ್ ಬಳಿ ಗುರುವಾರ ಮುಂಜಾನೆ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ನಿವಾಸಿ ಹಾಗೂ ಕಾಂಗ್ರೆಸ್ ಮುಖಂಡ ಫಸಿಯೂದ್ದೀನ್ (53) ಮೃತಪಟ್ಟವರು. ಇವರು ಹಲಗನಹಳ್ಳಿಯಿಂದ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹುಟ್ಟುಹಬ್ಬದ ಅಂಗವಾಗಿ ನಡೆದ ಅಮೃತ ಮಹೋ ತ್ಸವಕ್ಕೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ(ಕೆಎ.45, ಎ2953)ದಲ್ಲಿ 10ಕ್ಕೂ ಅಧಿಕ ಸ್ನೇಹಿತರೊಂದಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಬುಧವಾರ ಸಂಜೆ ದಾವಣಗೆರೆಯಿಂದ ಹೊರಟಿದ್ದರು. ಆದರೆ ಗುರುವಾರ ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಅರಕಲ ಗೂಡು ತಾಲೂಕಿನ ಗಂಗೂರು ಹ್ಯಾಂಡ್‍ಪೆÇೀಸ್ಟ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಗೂಡ್ಸ್ ವಾಹನ ರಸ್ತೆ ಬದಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕನ ಪಕ್ಕದ ಸೀಟ್‍ನಲ್ಲಿ ಕುಳಿತಿದ್ದ ಫಸಿಯೂದ್ದೀನ್ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಬ್ಬರು, ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು, ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು, ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಓರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅರಕಲಗೂಡು ತಾಲೂಕಿನ ಕೊಣನೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.

ಫಸಿಯೂದ್ದೀನ್ ಅವರು ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದರು. ಅವರು ಅಪಘಾತದಲ್ಲಿ ಸಾವನ್ನಪ್ಪಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ತುಂಬಲಾರದ ನಷ್ಟ ಎಂದು ಪಿರಿಯಾಪಟ್ಟಣ ತಾಲೂಕಿನ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಸಂತಾಪ: ಇವರ ದುರಂತ ಸಾವಿಗೆ ಮಾಜಿ ಶಾಸಕ ಕೆ.ವೆಂಕಟೇಶ್, ಕಾಂಗ್ರೆಸ್ ಮುಖಂಡ ನಿತಿನ್ ವೆಂಕಟೇಶ್, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಗ್ರಾಪಂ ಸದಸ್ಯ ಸೋಹೇಲ್ ಪಾಷಾ, ಜಾವೀದ್ ಅಹ್ಮದ್, ಅಪ್ಸರ್ ಪಾಷಾ, ತಾಪಂ ಮಾಜಿ ಸದಸ್ಯ ಅತ್ತರ್ ಮತೀನ್ ಸೇರಿದಂತೆ ಇನ್ನಿತರರು ಕಂಬನಿ ಮಿಡಿದಿದ್ದಾರೆ.

ಅಂತಿಮ ದರ್ಶನ: ವಿಷಯ ತಿಳಿದು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಇನ್ನಿತರರು ಫಸಿಯೂದ್ದೀನ್ ಅಂತಿಮ ದರ್ಶನ ಪಡೆದು, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

Translate »