ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ಸೋಂಕಿತರ ಆರೋಗ್ಯ ವಿಚಾರಣೆ
ಕೊಡಗು

ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ಸೋಂಕಿತರ ಆರೋಗ್ಯ ವಿಚಾರಣೆ

May 6, 2021

ಕುಶಾಲನಗರ, ಮೇ 5- ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಬುಧವಾರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.

ಕೋವಿಡ್ ಸೆಂಟರ್‍ಗೆ ಪಿ.ಪಿ ಕಿಟ್ ಧರಿಸಿ ಆಗಮಿಸಿದ ಶಾಸಕರು, ರೋಗಿಗಳ ವಾರ್ಡ್‍ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ಹಾಗೂ ಸಮಸ್ಯೆ ಕುರಿತು ವಿಚಾರಿ ಸಿದರು. ಸೋಂಕಿತರು ಯಾವುದೇ ಭಯ ಪಡುವ ಅಗತ್ಯ ಇಲ್ಲ. ನಿಮ್ಮ ಆರೋಗ್ಯ ರಕ್ಷಣೆಗೆ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ ಎಂದು ಮಾನಸಿಕವಾಗಿ ಧೈರ್ಯ ತುಂಬಿ ದರು. ಬಳಿಕ ಆರೋಗ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದರು. ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿ ಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕಳೆದ ಬಾರಿಗೆ ಹೊಲಿಕೆ ಮಾಡಿದರೆ ಈ ಬಾರಿ ಜಿಲ್ಲೆಯಲ್ಲಿ ಕೋವಿಡ್ 19 2ನೇ ಅಲೆ ಹೆಚ್ಚಾಗಿ ಕಂಡು ಬಂದಿದೆ. ಬೆಂಗಳೂರಿ ನಲ್ಲಿ ಕೆಲಸದ ನಿಮಿತ್ತವಾಗಿ ವಾಸಿಸುತ್ತಿದ್ದ ಜನರು ಕೊರೊನಾ ಕಫ್ರ್ಯೂ ಘೋಷಣೆ ನಂತರ ತಮ್ಮ ಊರಿಗೆ ವಾಪಸ್ಸಾದರು. ಇದರಿಂದ ಕೊರೊನಾ ಸೋಂಕು ಹರಡಲು ಕಾರಣವಾಗಿದೆ. ಕೊಡಗಿನಲ್ಲಿ ಬಹಳಷ್ಟು ಕೊರೊನಾ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಇಲ್ಲಿನ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುತ್ತಿ ದ್ದಾರೆ. ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಸರ್ಕಾರದ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಯನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಗೋವಿಂದ ರಾಜ್, ಕೋವಿಡ್ ಸೆಂಟರ್ ಅಧಿಕಾರಿ ಶೇಖರ್, ವೈದ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಶಿರಂಗಾಲ ಚೆಕ್ ಪೆÇೀಸ್ಟ್‍ಗೆ ಭೇಟಿ: ಕೊಡಗು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗವಾದ ಶಿರಂಗಾಲ ಗ್ರಾಮಕ್ಕೆ ಬುಧ ವಾರ ನೀಡಿದ ಶಾಸಕ ಅಪ್ಪಚ್ಚುರಂಜನ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗಡಿ ಚೆಕ್ ಪೆÇೀಸ್ಟ್ ಪರಿಶೀಲನೆ ನಡೆಸಿದರು.
ಆರೋಗ್ಯ ಕೇಂದ್ರಕ್ಕೆ ಅಧಿಕಾರಿಗಳೊ ಂದಿಗೆ ಭೇಟಿ ನೀಡಿ ಅವರು ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹಾಗೂ ಕೊವಾ ಕ್ಸಿನ್ ಲಸಿಕೆ ನೀಡಿರುವ ಬಗ್ಗೆ ವೈದ್ಯರಾದ ಡಾ.ಮಹಾಲಕ್ಷ್ಮಿ ಅವರಿಂದ ಮಾಹಿತಿ ಪಡೆದುಕೊಂಡರು. ನಂತರ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಗ್ರಾಮಸ್ಥರ ಅಹ ವಾಲು ಸ್ವೀಕರಿಸಿದರು. ನಂತರ ಅರಣ್ಯ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅನಗತ್ಯವಾಗಿ ಓಡಾಟ ನಡೆಸುವ ವಾಹನಗಳಿಗೆ ಅವಕಾಶ ನೀಡಬೇಡಿ ಎಂದರು. ಜಿಲ್ಲೆಯಿಂದ ಹೊರ ಹೋಗುವ ಹಾಗೂ ಜಿಲ್ಲೆಗೆ ಆಗಮಿಸುವ ವಾಹನಗಳ ನೊಂದಾಣಿ ಸಂಖ್ಯೆಯನ್ನು ದಾಖಲು ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಹೊರ ಜಿಲ್ಲೆಯಿಂದ ಕೊಡಗಿಗೆ ಬಂದು ವಾಸ್ತವ್ಯ ಹೂಡುವವರಿಗೆ ಕೈಗೆ ಸೀಲ್ ಹಾಕುತ್ತಿರುವುದನ್ನು ಪರಿಶೀಲಿಸಿದರು

ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ, ಭಾಗೀರಥಿ, ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ, ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ದೇವರು,ಗ್ರಾಮಾಂತರ ಪೆÇಲೀಸ್ ಪಿಎಸ್‍ಐ ಶಿವಶಂಕರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಚ್.ಡಿ.ಹರೀಶ್ ಹಾಗೂ ಆರೋಗ್ಯ ಸಿಬ್ಬಂದಿಗಳು ಇದ್ದರು.

Translate »