ಪಿರಿಯಾಪಟ್ಟಣ, ಜು.14 (ವೀರೇಶ್)- ಕೊರೊನಾ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುತ್ತಿರು ವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸ ದಿಂದ ಪರೀಕ್ಷೆ ಎದುರಿಸಿ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ವಿದ್ಯಾ ರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಆತ್ಮವಿಶ್ವಾಸ ತುಂಬುವ ಹಾಗೂ ವಿಷಯ ವಾರು ಸಂದೇಹ ನಿವಾರಿಸಲು ಏರ್ಪ ಡಿಸಿದ್ದ ವಿದ್ಯಾರ್ಥಿಗಳ ಫೆÇೀನ್-ಇನ್ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿ ರುವ ಪೆÇೀಷಕರ ಆತಂಕದ ನಡುವೆಯೂ ಸರ್ಕಾರದ ದಿಟ್ಟ ಕ್ರಮದ ಬಗ್ಗೆ ಯಾವುದೇ ಅಂಜಿಕೆ ಬೇಡ. ಈಗಾಗಲೇ ಸರ್ಕಾರ ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನ ಮಕ್ಕಳ ಸುರಕ್ಷತೆ ಗಾಗಿ ಹಲವು ಆರೋಗ್ಯ ಸುರಕ್ಷಾ ಕ್ರಮ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಆತಂಕಪಡುವುದು ಬೇಡ. ತಾಲೂಕಿನ 3,068 ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದರು.
ಬಿಇಓ ತಿಮ್ಮೇಗೌಡ, ಶಿಕ್ಷಕರಾದ ಶಿವರಾಜು, ಶಶಿಭೂಷಣ್, ಜಯ ಕುಮಾರ್, ಮೇರಿ, ಶಿವಕುಮಾರ್, ವೀಣಾ, ಸ್ವಾಮಿ, ಕ್ಷೇತ್ರ ಶಿಕ್ಷಣ ಸಂಯೋಜಕ ಪುಟ್ಟರಾಜು, ಗಣೇಶ್ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಂದೇಹ ನಿವಾರಿಸಿದರು.