ಕೂಟಿಯಾಲ ರಸ್ತೆ ಯೋಜನೆಗಾಗಿ ಕಾನೂನಾತ್ಮಕ ಹೋರಾಟ
ಕೊಡಗು

ಕೂಟಿಯಾಲ ರಸ್ತೆ ಯೋಜನೆಗಾಗಿ ಕಾನೂನಾತ್ಮಕ ಹೋರಾಟ

October 28, 2020

ಮಡಿಕೇರಿ,ಅ.27-ದಕ್ಷಿಣ ಕೊಡಗಿನ ಬಿರುನಾಣಿ-ಬಿ.ಶೆಟ್ಟಿಗೇರಿ ಗ್ರಾಪಂ ನಡುವೆ ಸಂಪರ್ಕ ಕಲ್ಪಿಸುವ ಮಹಾತ್ವಾಕಾಂಕ್ಷೆ ಕೂಟಿ ಯಾಲ ಸಂಪರ್ಕ ರಸ್ತೆ ಯೋಜನೆಯನ್ನು ಪೂರ್ಣ ಗೊಳಿಸಲು ಕಾನೂನಾತ್ಮಕ ಹೋರಾ ಟದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಪಿಸಿಸಿ ವಕ್ತಾರ ಅಜ್ಜಿ ಕುಟ್ಟೀರ ಎಸ್.ಪೆÇನ್ನಣ್ಣ ಭರವಸೆ ನೀಡಿದ್ದಾರೆ.

ಯೋಜನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದರೂ ಸಂಚಾರಕ್ಕೆ ಅವಕಾಶವಿಲ್ಲದೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಅಧ್ಯಯನ ನಡೆಸಿ ಕಾನೂನಿನ ಮೂಲಕ ನ್ಯಾಯ ದೊರಕಿಸಿ ಕೊಡುವುದಾಗಿ ಇದೇ ವೇಳೆ ತಿಳಿಸಿದರು.

ಗ್ರಾಮಸ್ಥರ ಮನವಿ: ಈ ಸಂದರ್ಭ ಉಭಯ ಗ್ರಾಮಸ್ಥರು ಮಾಹಿತಿ ನೀಡಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಅರಣ್ಯ ಇಲಾಖೆಯ ಉನ್ನತಾಧಿಕಾರಿ ಗಳೊಂದಿಗೆ ಬಹಳಷ್ಟು ಮಾತುಕತೆ ನಡೆಸಲಾಗಿದೆ. ಯೋಜನೆಗೆ ಉಂಟಾಗಿ ರುವ ಅಡ್ಡಿ ನಿವಾರಿಸಿ ಯೋಜನೆ ಕಾರ್ಯ ಗತಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ನ್ಯಾಯಾಲಯದಲ್ಲಿರುವ ಕಡಮಕಲ್ಲು ರಸ್ತೆ ವಿವಾದವೇ ಬೇರೆ. ಆದರೆ ಕೂಟಿಯಾಲ ರಸ್ತೆ ಯೋಜನೆ ಯನ್ನು ಕಡಮಕಲ್ ನೊಂದಿಗೆ ತಾಳೆ ಹಾಕಲಾಗುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಈ ಯೋಜನೆ ಕಾರ್ಯಗತಗೊಳಿಸಬೇಕೆಂದು ಪೆÇನ್ನಣ್ಣ ಅವರಲ್ಲಿ ಮನವಿ ಮಾಡಿದರು.

ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಪ್ರಮುಖರಾದ ಕೊಲ್ಲೀರ ಬೋಪಣ್ಣ, ತೀತೀರ ಧರ್ಮಜ ಉತ್ತಪ್ಪ, ಅಣ್ಣಳಮಾಡ ಲಾಲ ಅಪ್ಪಣ್ಣ, ಕಡೆಮಾಡ ಜೋಯಪ್ಪ, ಕುಸುಮಾ ಜೋಯಪ್ಪ, ಕಾಳಿಮಾಡ ಪ್ರಶಾಂತ್, ಚೇರಂಡ ಮೋಹನ್ ಕುಶಾಲಪ್ಪ, ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಚಂದೂರ ರೋಹಿತ್, ತೀತಿಮಾಡ ಸದನ್, ತೀತಿಮಾಡ ಗಿಣಿ, ಕುಪ್ಪಣಮಾಡ ಪ್ರೀತಮ್, ಅಣ್ಣಳಮಾಡ ಹರೀಶ್, ಅಣ್ಣಳಮಾಡ ರಾಬಿನ್ ಮತ್ತು ಗ್ರಾಮಸ್ಥರು ಈ ವೇಳೆ ಹಾಜರಿದ್ದರು. ಫೋಟೋ :01

ಯೋಜನೆಯ ಮಾಹಿತಿ….
ದಕ್ಷಿಣ ಕೊಡಗಿನ ವಿರಾಜಪೇಟೆ ತಾಲೂಕು ಕೇಂದ್ರಕ್ಕೆ ಜಿಲ್ಲೆಯ ಗಡಿ ಮತ್ತು ಗ್ರಾಮೀಣ ಪ್ರದೇಶವಾದ ಬಿರುನಾಣಿಗೆ ಸಂಪರ್ಕ ಕಲ್ಪಿಸುವ ಬಿ.ಶೆಟ್ಟಿಗೇರಿ-ಬಿರುನಾಣಿ ನಡುವಿನ ಕೂಟಿಯಾಲ ಸಂಪರ್ಕ ರಸ್ತೆ ಯೋಜನೆಗೆ ಬರಪೆÇಳೆ ಸೇತುವೆ ನಿರ್ಮಾಣ ಕಾರ್ಯ 69.55 ಲಕ್ಷ ರೂ. ವೆಚ್ಚದಲ್ಲಿ 20 ವರ್ಷಗಳ ಹಿಂದೆಯೇ ಪೂರ್ಣವಾಗಿದೆ. ಅಲ್ಲದೆ ಬಿ.ಶೆಟ್ಟಿಗೇರಿ ಭಾಗದ ಕಚ್ಛಾ ರಸ್ತೆ ಸಹ ಪೂರ್ಣವಾಗಿದೆ. ಆದರೆ ಸೇತುವೆಯ ಇನ್ನೊಂದು ಭಾಗ ಬಿರುನಾಣಿ ಗ್ರಾಪಂ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಸುಮಾರು 600 ಮೀ. ಪ್ರದೇಶ ಬ್ರಹ್ಮಗಿರಿ ವನ್ಯಜೀವಿ ತಾಣದ ವ್ಯಾಪ್ತಿಯಲ್ಲಿದೆ. ಇದರಿಂದ 20 ವರ್ಷಗಳಿಂದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿದೆ. ಎಂ.ಸಿ.ನಾಣಯ್ಯ ಅವರು ಸಚಿವರಾಗಿದ್ದ ಸಂದರ್ಭ 1996ರಲ್ಲಿ ನಬಾರ್ಡ್ ಮೂಲಕ ಈ ಯೋಜನೆ ರೂಪಿಸಲಾಗಿತ್ತು. ಬಿರುನಾಣಿಗೆ ತಾಲೂಕು ಕೇಂದ್ರ ವಿರಾಜಪೇಟೆಯನ್ನು ಸಂಪರ್ಕಿಸಲು 22 ಕಿ.ಮೀ.ಗೂ ಅಧಿಕ ಅಂತರ ಕಡಿತಗೊಳಿಸುವ ಹಾಗೂ ಗ್ರಾಮೀಣ ಭಾಗದ ಮೂಲಕ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ 69.55 ಲಕ್ಷ ರೂ.ಅನುದಾನ ಮಂಜೂರಾಗಿ ಬರಪೆÇಳೆ ನದಿಗೆ ಅಡ್ಡಲಾಗಿ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಸಹ 2000ನೇ ಇಸವಿ ವೇಳೆಗೆ ಪೂರ್ಣ ಗೊಂಡಿದೆ. ಆದರೆ ಸೇತುವೆ ನಿರ್ಮಾಣಗೊಂಡ ನಂತರವಷ್ಟೇ ರಸ್ತೆಯ ವಿವಾದ ಎದುರಾಗಿದೆ. ಬಿ.ಶೆಟ್ಟಿಗೇರಿ ಸಂಪರ್ಕ ರಸ್ತೆಯು ಪೆÇನ್ನಂಪೇಟೆ ಸಾಮಾಜಿಕ ಅರಣ್ಯದ ವ್ಯಾಪ್ತಿಯಲ್ಲಿದ್ದರೂ ಯಾವುದೇ ಸಮಸ್ಯೆ ಇಲ್ಲ. ಬಾಡಗರಕೇರಿ ಸಂಪರ್ಕಿಸುವ ರಸ್ತೆಯ ಪ್ರದೇಶ ಸುಮಾರು 600 ಮೀ. ನಷ್ಟು ಮಾತ್ರ ಶ್ರೀಮಂಗಲ ವಲಯ, ಬ್ರಹ್ಮಗಿರಿ ವನ್ಯಜೀವಿ ತಾಣದ ನಡುವೆ ಬರುವುದರಿಂದ ಯೋಜನೆಗೆ ತಡೆ ಉಂಟಾಗಿದೆ. ಸೇತುವೆ ನಿರ್ಮಾಣದ ಬಳಿಕ ರಸ್ತೆ ಸಂಪರ್ಕಕ್ಕೆಂದು ಬಿ.ಶೆಟ್ಟಿಗೇರಿ ಕಡೆಯ ರಸ್ತೆಗೆ ಕೋಟಿ ರೂ. ಮಂಜೂರಾಗಿ, ಇದರಲ್ಲಿ ಸೇತುವೆ ತನಕ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಕಚ್ಛಾ ರಸ್ತೆ ನಿರ್ಮಾಣವಾಗಿದೆ. ಬಿರುನಾಣಿಯಿಂದ 1.17 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಅರಣ್ಯ ಪ್ರದೇಶದ ವಿವಾದದಿಂ ದಾಗಿ ರಸ್ತೆ ಅಭಿವೃದ್ಧಿ ಯೋಜನೆ ಟೆಂಡರ್ ಪ್ರಕ್ರಿಯೆಗಷ್ಟೇ ಸೀಮಿತವಾಗಿದೆ. ಮಡಿಕೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕಡಮಕಲ್ಲು ರಸ್ತೆ ನಿರ್ಮಾಣ ಸಹ ಅರಣ್ಯ ವಿವಾದ ಏರ್ಪಟ್ಟು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದೇ ಸಂದರ್ಭದಲ್ಲಿ ಕೂಟಿಯಾಲ ರಸ್ತೆ ಯೋಜನೆಯನ್ನು ಈ ಪ್ರಕರಣದಲ್ಲಿ ಸೇರಿಸಲಾಗಿದೆ.

Translate »