`ವಿಶ್ವವಿದ್ಯಾಲಯಗಳನ್ನು ಹಳೆ ವಿದ್ಯಾರ್ಥಿ ಸಂಘಗಳೇ ಮುನ್ನಡೆಸಲಿ’
ಮೈಸೂರು

`ವಿಶ್ವವಿದ್ಯಾಲಯಗಳನ್ನು ಹಳೆ ವಿದ್ಯಾರ್ಥಿ ಸಂಘಗಳೇ ಮುನ್ನಡೆಸಲಿ’

December 13, 2020

ಮೈಸೂರು, ಡಿ.12(ಎಂಟಿವೈ)- ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿ ಬಹಳಷ್ಟು ವಿಶ್ವವಿದ್ಯಾಲಯಗಳು ನೆಲಕಚ್ಚು ವಂತಾಗಿವೆ. ಹಾಗಾಗಿ, ಹಳೆ ವಿದ್ಯಾರ್ಥಿ ಗಳ ಸಂಘಗಳು ವಿವಿಗಳನ್ನು ಮುನ್ನಡೆ ಸಲಿ ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಸಲಹೆ ನೀಡಿದರು.

ಮೈವಿವಿ ಹಳೆ ವಿದ್ಯಾರ್ಥಿ ಸಂಘವು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ `3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ ಹಾಗೂ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ’ ಸಮಾರಂಭ ದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವಿವಿಗಳು ಬಗೆಬಗೆಯ ಸವಾಲು ಎದುರಿಸುತ್ತಿವೆ. ಯಾವುದೇ ಸರ್ಕಾರ ಅಧಿ ಕಾರಕ್ಕೆ ಬಂದರೂ ವಿವಿಗಳನ್ನು ಸಮರ್ಥ ವಾಗಿ ಮುನ್ನಡೆಸಲು ಆಗುತ್ತಿಲ್ಲ. ಸರ್ಕಾರ ಗಳಿಗೂ ವಿವಿಗಳು ಬೇಕಾಗಿಲ್ಲ. ಜನಪ್ರತಿ ನಿಧಿಗಳಿಗೂ ವಿವಿಗಳ ಮೇಲೆ ಗೌರವವಿಲ್ಲ. ಹಿಂದೆ ವಿವಿಗಳ ಮೇಲೆ ರಾಜಕಾರಣಿಗಳು ಅಪಾರ ಗೌರವ ಇಟ್ಟುಕೊಂಡಿರುತ್ತಿದ್ದರು. ಈಗ ಅವರÀ ಮನಸ್ಥಿತಿ ಬದಲಾಗಿದೆ ಎಂದು ವಿಷಾದಿಸಿದರು.

ಶೇ.75 ಸಿಬ್ಬಂದಿ ಕೊರತೆ: ದೇಶದ ಪ್ರತಿ ಷ್ಠಿತ ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ಮೈಸೂರು ವಿವಿ 6ನೇ ಸ್ಥಾನದಲ್ಲಿದೆ. ಆದರೆ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿದೆ. ವಿವಿ ಯಲ್ಲಿ ಶೇ.75 ಹುದ್ದೆ ಖಾಲಿ ಇದೆ. ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. `ನಿನ್ನೆ ಎಂಎಸ್‍ಸಿ ಮಾಡಿದವನನ್ನು ಉಪನ್ಯಾಸಕನಾಗಿ ನೇಮಿಸಿ ಕೊಳ್ಳಿ’ ಎಂದು ರಾಜಕಾರಣಿಗಳು, ಪ್ರಭಾವಿ ಗಳು ಒತ್ತಡ ಹೇರುತ್ತಾರೆ. ಸ್ನಾತಕೋ ತ್ತರ ಪದವಿ ಪಡೆದ 1 ದಿನಕ್ಕೆಲ್ಲಾ ಪರಿಣಾಮ ಕಾರಿಯಾಗಿ ಬೋಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ರಂಗಪ್ಪ ಅವರು, ಇಂಥ ಒತ್ತಡದಲ್ಲಿ ಸಿಲುಕುವ ಕುಲಪತಿಗಳ ಸ್ಥಿತಿ ಶೋಚನೀಯ ಎಂದು ವಿಷಾದಿಸಿದರು.

ಹೊಸ ರೂಪ: 1999ರಲ್ಲಿ ಮೈವಿವಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆಯಾದರೂ 15 ವರ್ಷ ನೆಲೆ ಕಂಡಿರಲಿಲ್ಲ. ನಾನು ಕುಲಪತಿ ಯಾದ ನಂತರ ಸಂಘಕ್ಕೆ ಹೊಸ ರೂಪ ನೀಡಿದೆ. ಆಗ ಸಂಘದಲ್ಲಿ 65 ಸಾವಿರ ರೂ. ಮಾತ್ರ ಇತ್ತು. ಸಂಘಕ್ಕೆ ಅರ್ಕೇಶ್ ಅವರನ್ನು ಅಧ್ಯಕ್ಷರನ್ನಾಗಿಸಿದ ಬಳಿಕ ವಿವಿಧ ಕಾರ್ಯಕ್ರಮಗಳು ಜರುಗ ತೊಡಗಿದವು. ಮೈವಿವಿ ಶತಮಾನೋತ್ಸವ ವೇಳೆ ಹಳೆ ವಿದ್ಯಾರ್ಥಿಗಳ ಸಂಘಕ್ಕೆ 10 ಲಕ್ಷ ರೂ. ನೀಡ ಲಾಯಿತು. ಇದೀಗ ವಸಂತ ಕುಮಾರ್ ತಿಮಕಾಪುರ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಅಧ್ಯಕ್ಷರಾಗಿದ್ದು, ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಶಕ್ತಿ ತುಂಬಬೇಕು: ಚೀನಾ ಮತ್ತಿತರ ದೇಶಗಳಲ್ಲಿ ಹಳೆ ವಿದ್ಯಾರ್ಥಿ ಸಂಘಗಳೇ ವಿವಿಗಳನ್ನೇ ಮುನ್ನಡೆಸುವಷ್ಟು ಶಕ್ತಿಯುತ ವಾಗಿವೆ. ಮೈವಿವಿ ಹಳೆ ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ನೆಲೆಸಿ, ಉನ್ನತ ಹುದ್ದೆ ಯಲ್ಲಿದ್ದಾರೆ, ಕೈಗಾರಿಕಾ ಕ್ಷೇತ್ರಗಳಲ್ಲೂ ಸಾಧನೆಗೈಯ್ದಿದ್ದಾರೆ. ಈ ಹಳೆ ವಿದ್ಯಾರ್ಥಿ ಗಳನ್ನು ಸಂಘಟಿಸಿ ಸಂಘಕ್ಕೆ ಶಕ್ತಿ ತುಂಬು ವಂತೆ ಅಮೆರಿಕದಲ್ಲಿನ ಬಹದ್ದೂರ್ ಅವ ರನ್ನು ಕೋರಿದ್ದೇನೆ. ಹೊರದೇಶಗಳಲ್ಲಿರುವ 100 ಮಂದಿ ಸಂಘಕ್ಕೆ ನೆರವು ನೀಡಿದರೆ ಮೈವಿವಿಯನ್ನು ಯಶಸ್ವಿಯಾಗಿ ಮುನ್ನಡೆ ಸಬಹುದು. ಬಹದ್ದೂರ್ ಅವರೂ ಸಾಕಷ್ಟು ನೆರವು ನೀಡಿದ್ದಾರೆ. ಬೇರೆ ವಿವಿಗಳಲ್ಲಿ ಕೇವಲ ಖುರ್ಚಿ, ಟೇಬಲ್ ಬಿಟ್ಟರೆ ಬೇರೆನೂ ಇಲ್ಲ. ಎಂಐಟಿ, ಹಾರ್ವರ್ಡ್ ವಿವಿಯಂತೆ ನಾವು ದುಬಾರಿ ಶುಲ್ಕ ಸಂಗ್ರಹಿಸಲೂ ಆಗುವು ದಿಲ್ಲ ಎಂದು ಅವರು ಹೇಳಿದರು.

ಪ್ರಶಸ್ತಿಗಾಗಿ ಲಾಬಿ: ಪ್ರಸ್ತುತ ಯಾವುದೇ ಪ್ರಶಸ್ತಿಗೂ ಲಾಬಿ ಜೋರಾಗಿದೆ. ಪ್ರಶಸ್ತಿ ಕೊಡುವಾಗ ತಾರತಮ್ಯ, ರಾಜಕೀಯ ಒತ್ತಡ ಇರುತ್ತದೆ. ಈಗ ಹಳೆ ವಿದ್ಯಾರ್ಥಿ ಗಳ ಸಂಘ ನೀಡಿರುವ `ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ಯ ಆಯ್ಕೆಗೆ ಅನುಸರಿ ಸಿದ ಮಾನದಂಡ ವಿಶ್ವವೇ ಮೆಚ್ಚುವಂತ ಹದ್ದು. ಪುರಸ್ಕøತರೆಲ್ಲರೂ ಉತ್ತಮ ಸಾಧ ಕರೇ ಆಗಿದ್ದಾರೆ ಎಂದು ಶ್ಲಾಘಿಸಿದರು.

ಕಲೆ, ವಾಣಿಜ್ಯ, ವಿಜ್ಞಾನ ವಿಷಯಗಳಲ್ಲಿ ಪ್ರತಿಭಾವಂತ 50 ಮಂದಿಗೆ ಫೆಲೋಶಿಪ್ ಕೊಡಲು ಬಹದ್ದೂರ್ ಅವರನ್ನು ಕೋರಿ ದ್ದೇವೆ. ಕಾರಣಾಂತರದಿಂದ ಅದು ಸಾಧ್ಯ ವಾಗಿಲ್ಲ. ಮುಂದಿನ ದಿನಗಳಲ್ಲಿ ಒಬ್ಬ ಫ್ಯಾಕಲ್ಟಿಗೆ ಕನಿಷ್ಟ 5 ಫೆಲೋಶಿಪ್ ಕೊಡಿ ಸಲು ಶ್ರಮಿಸುವೆ ಎಂದರು. ಮೈವಿವಿ ಕುಲ ಪತಿ ಪೆÇ್ರ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಶ್ಮೀರ ವಿವಿ ವಿಶ್ರಾಂತ ಕುಲ ಪತಿ ಪದ್ಮಶ್ರೀ ಜೆ.ಎ.ಕೆ.ತರೀನ್, ಕುಲಸಚಿವ ಪೆÇ್ರ.ಆರ್.ಶಿವಪ್ಪ ಮುಖ್ಯ ಅತಿಥಿಗಳಾಗಿ ದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಸಂತ ಕುಮಾರ್ ತಿಮಕಾಪುರ, ಪ್ರಶಸ್ತಿ ಸಮಿತಿ ಅಧ್ಯಕ್ಷ ಎನ್.ನಿರಂಜನ್ ನಿಕ್ಕÀಂ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪೆÇ್ರ. ಹೆಚ್.ಎಂ.ವಸಂತಮ್ಮ, ಕಾರ್ಯದರ್ಶಿ ನಂದಿನಿಮೂರ್ತಿ, ಕೋಶಾಧ್ಯಕ್ಷ ಪ್ರೊ. ಆರ್.ಎನ್.ಪದ್ಮನಾಭ, ಜಂಟಿ ಕಾರ್ಯ ದರ್ಶಿ ಎಂ.ಎಸ್.ಸಪ್ನ ಮತ್ತಿತರರಿದ್ದರು.

ಮೈವಿವಿ ಪರಂಪರೆಯೇ ನಮ್ಮ ಹೆಮ್ಮೆ: ಕುಲಪತಿ
ಮೈಸೂರು, ಡಿ.12(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯಕ್ಕೆ ಸುದೀರ್ಘ ಇತಿಹಾಸ, ತನ್ನದೇ ಆದ ಪರಂಪರೆ ಇರುವುದು ಹೆಮ್ಮೆಯ ಸಂಗತಿ. ವಿವಿ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳ ಸಂಘ ಕೈಗೊಳ್ಳುವ ಎಲ್ಲ ಕಾರ್ಯಗಳಿಗೆ ಮೈವಿವಿ ಬೆಂಬಲವಿದೆ ಎಂದು ಕುಲಪತಿ ಪೆÇ್ರ.ಜಿ.ಹೇಮಂತ್‍ಕುಮಾರ್ ಭರವಸೆ ನೀಡಿದರು. ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಮೈವಿವಿ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಸಾಧಕರಿಗೆ `ವಿಶಿಷ್ಟ ಹಿರಿಯ ವಿದ್ಯಾರ್ಥಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ, ಸಂಸ್ಥೆ, ವಿವಿ ಸೇರಿದಂತೆ ಯಾವುದೇ ಸಂಸ್ಥೆಯಲ್ಲೂ ಹಿರಿಯರು ಇರುವುದೇ ಭೂಷಣ. ಅವರ ಅನುಭವಕ್ಕೆ ಸಮನಾದದ್ದೂ ಯಾವುದೂ ಇಲ್ಲ. ಪರಂಪರೆ ಇಲ್ಲದ ವಿದ್ಯಾಸಂಸ್ಥೆ ಆದರ್ಶ ಬಿತ್ತಲಾರದು ಎಂದರು.

ಜಗತ್ತಿನ ದೊಡ್ಡ ವಿವಿಗಳ ಏಳಿಗೆಯಲ್ಲಿ ಹಿರಿಯ ವಿದ್ಯಾರ್ಥಿ ಗಳ ಪಾತ್ರ ಪ್ರಧಾನ. 104 ವರ್ಷಗಳ ಇತಿಹಾಸದ ಮೈವಿವಿ ಯಲ್ಲಿ ಕಲಿತವರನ್ನು ಲೆಕ್ಕ ಹಾಕಿದರೆ ಕೋಟಿ ತಲುಪುತ್ತದೆ. ಕೊರೊನಾ ಪರಿಸ್ಥಿತಿ ತಿಳಿಯಾದ ನಂತರ ಸಂಘವು ಉದ್ದೇಶಿತ ಕಾರ್ಯ ಕ್ರಮಗಳನ್ನು ನೆರವೇರಿಸಬೇಕು ಎಂದು ಮನವಿ ಮಾಡಿದರು.

ಕಾಶ್ಮೀರ ವಿವಿ ವಿಶ್ರಾಂತ ಕುಲಪತಿ ಜೆ.ಎ.ಕೆ.ತರೀನ್ ಮಾತ ನಾಡಿ, ಜನರಲ್ಲಿ ಪರೋಪಕಾರಿ ಗುಣ ಕಾಣದಾಗಿದೆ. ಇನ್ನಾ ದರೂ ಪರೋಪಕಾರಿ ಗುಣ ಬೆಳೆಸಿಕೊಂಡು ಇತರರಿಗೆ ನೆರವಾ ಗಲು ಮುಂದಾಗಬೇಕು ಮೈವಿವಿ ಏಳಿಗೆಗೆ ಹಳೆ ವಿದ್ಯಾರ್ಥಿಗಳ ಸಂಘ ನೆರವಾಗಬೇಕು ಎಂದು ಸಲಹೆ ನೀಡಿದರು.

Translate »