ಕೆಆರ್‍ಎಸ್ ಬಿರುಕು ಸಾಬೀತುಪಡಿಸಲಿ…
ಕೊಡಗು

ಕೆಆರ್‍ಎಸ್ ಬಿರುಕು ಸಾಬೀತುಪಡಿಸಲಿ…

July 10, 2021

ಮಡಿಕೇರಿ, ಜು.9- ಕೆಆರ್‍ಎಸ್ ಬಿರುಕು ಬಿಟ್ಟಿದೆ ಅನ್ನೋದು ಗಂಭೀರ ವಿಚಾರ, ಸರಿಯಾದ ಮಾಹಿತಿ ಇದ್ರೆ ಸರಿಪಡಿ ಸೋದಕ್ಕೆ ಮುಖ್ಯಮಂತ್ರಿಯನ್ನು ಕೇಳೋಣ. ಸಾಕ್ಷಿಗಳಿದ್ದರೆ ಬಹಿರಂಗಪಡಿಸಿ, ತಪ್ಪು ಮಾಹಿತಿ ಇದ್ರೆ ಅದನ್ನೂ ಒಪ್ಪಿಕೊಳ್ಳಿ ಎಂದು ಸಂಸದೆ ಸುಮಲತಾ ಅವರಿಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೆಆರ್‍ಎಸ್ ಮಂಡ್ಯ ಸಂಸದರ ಆಸ್ತಿ ಅಲ್ಲ, ಇದು ಎಲ್ಲರಿಗೂ ಸೇರಿದ್ದು. ಕೆಆರ್‍ಎಸ್ ರಾಜ್ಯ, ರಾಷ್ಟ್ರದ ಆಸ್ತಿ ಎಂದು ಹೇಳಿದರು.

ಸುಮಲತಾ ಅವರ ನಟನೆ ಬಗ್ಗೆ ಬಹಳ ಗೌರವ ಇದೆ. ಅಂಬರೀಷ್ ಅವರನ್ನು ನೋಡೋದಕ್ಕೆ ಅವರ ಮನೆಗೆ ಹೋಗ್ತಿದ್ದೆ. ಸಿನಿಮಾ ನಟನೆಗೂ, ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ನಿನ್ನೆ ನಾನು ಯಾರೋ ಒಬ್ಬರ ಪರವಾಗಿ ಮಾತನಾಡಿಲ್ಲ, ಕೆಆರ್‍ಎಸ್ ಯಾರೊಬ್ಬರ ಆಸ್ತಿ ಅಲ್ಲ. ಜಲಾಶಯಕ್ಕೆ ನನ್ನ ಕ್ಷೇತ್ರದ ಕೊಡಗಿನ ಕಾವೇರಿಯಿಂದ ನೀರು ಬರುತ್ತೆ. ಬಿರುಕು ಬಿಟ್ಟಿದೆ ಅಂದವರು ಅದನ್ನ ತೋರಿ ಸಲಿ. ಈ ವಿಚಾರವನ್ನಷ್ಟೇ ನಾನು ಹೇಳಿದ್ದು ಎಂದು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು.

ನಾನು ಮೈಸೂರು-ಕೊಡಗು ಸಂಸದ ಅನ್ನುವ ಬಗ್ಗೆ ಜನರಿಗೆ ಗೊಂದಲ ಇಲ್ಲ. ನಾನು ಮೈಸೂರಿನಲ್ಲೇ ವಾಸವಿದ್ದೇನೆ. ಕೊಡಗಿಗೂ ಬರ್ತಿರ್ತೇನೆ, ಅಭಿವೃದ್ಧಿ ಕಾರ್ಯ ಮಾಡ್ತಿದ್ದೇನೆ. ಗೊಂದಲ ಮಂಡ್ಯದವರಿಗೆ ಇರುತ್ತೆ, ನಾವು ವೋಟ್ ಹಾಕಿದವ್ರು ಎಲ್ಲಿ ದ್ದಾರೆ ಅಂತ ಮಂಡ್ಯದವರಿಗೆ ಗೊಂದಲ ವಿದೆಯೇ ಹೊರತು, ಕೊಡಗು-ಮೈಸೂರಿನವರಿಗೆ ಇಲ್ಲ. ನಾನು ಜನರ ಮನೆ ಬಾಗಿಲಲ್ಲಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಸುಮಲತಾ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರಲ್ಲದೆ, ಕೆಆರ್‍ಎಸ್ ಬಿರುಕು ಬಿಟ್ಟಿದ್ದರೆ ತೋರಿ ಸಲಿ. ಇಲ್ಲಾ ಅಂದರೆ ಹೇಳಿದ್ದು ತಪ್ಪಾಗಿದೆ ಎಂದು ಸುಮ್ಮನಾಗಲಿ, ಅಷ್ಟೇ ನನ್ನ ಮನವಿ ಎಂದು ಪ್ರತಾಪ್ ಸಿಂಹ ಹೇಳಿದರು.

ಕೆಆರ್‍ಎಸ್ ವಿಚಾರದಲ್ಲಿ ಅಂಬರೀಷ್ ಹೆಸರು ಪ್ರಸ್ತಾಪಕ್ಕೆ ಪ್ರತಾಪ್‍ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಅಂಬರೀ ಷಣ್ಣ ರಾಜ್ಯ ಕಂಡ ಒಳ್ಳೆಯ ನಟ. ಹೃದಯ ವಂತಿಕೆ ಇದ್ದ ನಟ, ಕರ್ಣ ಅಂತ ಅವರನ್ನು ಕರೆಯುತ್ತೇವೆ. ದಾನ ಧರ್ಮದಲ್ಲಿ ಎತ್ತಿದ ಕೈ ಆಗಿದ್ರು. ಅವರ ವಿಚಾರ ಇಲ್ಲಿ ಪ್ರಸ್ತಾಪ ಆಗೋದು ಬೇಡ. ಅವರಿಗೆ ಇಡೀ ರಾಜ್ಯ ಗೌರವ ಕೊಡಬೇಕು. ನಾವು ಹೃದಯ ದಲ್ಲಿಟ್ಟು ಆರಾಧಿಸುತ್ತೇವೆ, ಅವರನ್ನು ಈ ವಿಚಾರಕ್ಕೆ ಯಾರೂ ಈಗ ಎಳೆತರೋದು ಬೇಡ, ಹೇಳಿಕೆಗಳ ಮೇಲಾಟ ಬಿಟ್ಟು ಕೆಆರ್‍ಎಸ್ ಬಿರುಕು ಬಿಟ್ಟಿದೆಯೇ ಅನ್ನೋದನ್ನು ಸಾಬೀತು ಮಾಡಬೇಕು ಎಂದು ಪ್ರತಾಪ್‍ಸಿಂಹ ಸಂಸದೆ ಸುಮಲತಾ ಅವರನ್ನು ಆಗ್ರಹಿಸಿದರು.

Translate »