ಗ್ರಾಮೀಣಾಭಿವೃದ್ಧಿ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿ
ಮಂಡ್ಯ

ಗ್ರಾಮೀಣಾಭಿವೃದ್ಧಿ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿ

July 10, 2021

ಮಂಡ್ಯ, ಜು.9- ಕೋವಿಡ್‍ನಿಂದ ಗ್ರಾಮೀಣ ಜನರನ್ನು ರಕ್ಷಿಸಿ ಮತ್ತು ಗ್ರಾಮೀಣ ಪ್ರದೇಶ ಗಳ ಜನರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳು ಶೀಘ್ರವೇ ಪೂರ್ಣಗೊಳ್ಳ ಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ನರೇಗಾ ಯೋಜನೆ, ಜಲಜೀವನ್ ಮಿಷನ್ ಸೇರಿದಂತೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಕೋವಿಡ್-19 ಸೋಂಕು ತಡೆಗೆ ಗ್ರಾಮ ಪಂಚಾ ಯಿತಿಗಳಿಂದ ತೆಗೆದುಕೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಕಾಮಗಾರಿಗಳಿಗೆ ಮತ್ತು ಕೋವಿಡ್ ನಿರ್ಮೂ ಲನೆಗೆ ಬಿಡುಗಡೆಯಾದ ಅನುದಾನವು ಸಮ ರ್ಪಕವಾಗಿ ಸದ್ಬಳಕೆಯಾಗಲಿ ಎಂದರು.

ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆಯ ಮಾದರಿಗಳ ಪರೀಕ್ಷೆ , ದೃಢಪಟ್ಟ ಪಾಸಿಟಿವಿಟಿ ರೇಟ್, ಗುಣಮುಖರಾಗಿ ಬಿಡುಗಡೆಗೊಂಡವರ ಸರಾಸರಿ, ಮರಣ ಹೊಂದಿದವರ ಸರಾಸರಿ ಅಂಕಿ ಅಂಶ ವನ್ನು ಪರಿಶೀಲಿಸಿ ಕೋವಿಡ್ ನಿರ್ಮೂ ಲನೆ ಮಾಡುವಲ್ಲಿ ಹಣಕಾಸಿನ ತೊಂದರೆ ಏನಾದರೂ ಉಂಟಾಗಿದೆಯೇ ಎಂದು ತಾಲೂಕುಗಳ ಕಾರ್ಯನಿರ್ವಹಣಾ ಅಧಿ ಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಕೋವಿಡ್ ನಿರ್ಮೂಲನೆಗೆ ಸರ್ಕಾರದಿಂದ ಪ್ರತಿ ಗ್ರಾಪಂಗೆ 50 ಸಾವಿರ ಬಿಡುಗಡೆಯಾಗಿ ರುವುದನ್ನು ಬಳಸಿಕೊಳ್ಳಿ ಎಂದರು.

ಕೋವಿಡ್ 3ನೇ ಅಲೆ 18 ವರ್ಷದೊಳ ಗಿನ ಮಕ್ಕಳ ಮೇಲೆ ಪರಿಣಾಮ ಬೀರಲಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿರುವ ವಿಶೇಷ ಚೇತನರ ಪಟ್ಟಿ ರಚಿಸಿ ಶೀಘ್ರವೇ ಅವರಿಗೆ ಕೋವಿಡ್ ಲಸಿಕೆ ನೀಡಿ ಎಂದರು.

ಲಸಿಕೆ, ಅಪೌಷ್ಟಿಕತೆಯಿಂದ ನರಳುವ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪ ಡಿಸಿ, ಪೌಷ್ಟಿಕ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಿಕೆ, ಶಿಶು ಅಭಿವೃದ್ಧಿ ಯೋಜನೆಗಳಿಂದ ಪೌಷ್ಟಿಕ ಆಹಾರ ವಿತರಣೆ, 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಗಳು, ಮಕ್ಕಳ ಚಿಕಿತ್ಸೆಗಾಗಿ ಅಗತ್ಯವಿರುವ ಔಷಧಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇನ್ನು ಹಲವು ನಿಯಂತ್ರಣ ಕ್ರಮ ಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡಾ, ಅಂಗನವಾಡಿ ಕೇಂದ್ರ, ಸೋಕ್ ಪಿಟ್, ದನದ ಕೊಟ್ಟಿಗೆ, ಕೆ.ಆರ್.ಪೇಟೆ ಹೇಮಗಿರಿ ನರ್ಸರಿ, ನಾಗ ಮಂಗಲ ಈರುಳ್ಳಿ ಶೇಖರಣಾ ಘಟಕ, ಘನತ್ಯಾಜ್ಯ ಘಟಕ ಗಳ ನಿರ್ಮಾಣಗಳ ಪ್ರಗತಿ ವಿವರ ಪರಿಶೀಲಿಸಿ ಡಿಸೆಂಬರ್-ಜನವರಿ ತಿಂಗಳೊಳಗೆ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳು ಅಭಿವೃದ್ಧಿಯಾಗಬೇಕು ಎಂದು ಸಚಿವ ಈಶ್ವರಪ್ಪ ಹೇಳಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆ ಯಡಿ ಸ್ವಚ್ಛ ಸಂಕೀರ್ಣ ಘಟಕಗಳು, ಸಮು ದಾಯ ಶೌಚಾಲಯಗಳು, ವೈಯಕ್ತಿಕ ಗೃಹ ಶೌಚಾಲಯಗಳ 2021-22 ನೇ ಸಾಲಿನ ಭೌತಿಕ ಪ್ರಗತಿ ವಿವರ ಪರಿಶೀಲಿಸಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಿ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾ ಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ವಿಧಾನಪರಿಷತ್ ಸದಸ್ಯರುಗಳಾದ ಅಪ್ಪಾಜಿಗೌಡ, ಶ್ರೀಕಂಠೇಗೌಡ, ಶಾಸಕ ರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಸುರೇಶ್ ಗೌಡ, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಪಂಚಾ ಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ದಿವ್ಯ ಪ್ರಭು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »