ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಸುಮಲತಾ  ಮಾಡಿದ ಕೆಲಸವನ್ನು ನಾನು ಮಾಡುವೆ
ಮಂಡ್ಯ

ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಸುಮಲತಾ ಮಾಡಿದ ಕೆಲಸವನ್ನು ನಾನು ಮಾಡುವೆ

July 10, 2021

ಮಂಡ್ಯ, ಜು.9(ಮೋಹನ್‍ರಾಜ್)- ಯಾರದ್ದೇ ಹೋರಾಟ ವಿರಲಿ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಇಲ್ಲದಿದ್ದರೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಅಂಬರೀಷ್ ಮಾಡಿದ ಕೆಲಸವನ್ನು ನಾನು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಸಿದರು.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಚಾರ ದಲ್ಲಿ ಅಧಿಕಾರಿಗಳ ತಪ್ಪು ಇದೆ. ಈ ಜಿಲ್ಲೆ ಹೆಣ್ಣು ಮಕ್ಕಳ ಜಿಲ್ಲೆಯಾ ಗಿದೆ. ಮಹಿಳೆಯರು ಕೆಲಸ ಮಾಡುವುದರಿಂದ ನಮ್ಮದೇನು ಅಭ್ಯಂತರವಿಲ್ಲ. ಒಂದು ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ಪಟ್ಟಿ ಯನ್ನು ಅಧಿಕಾರಿಯಿಂದ ಕೇಳುತ್ತಿದ್ದೇನೆ. ಗಣಿಗಾರಿಕೆ ನಡೆಯ ಬೇಕು. ಸರಿಯಾದ ರೀತಿಯಲ್ಲಿ ನಡೆಯಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 100 ಲಾರಿ ಗಣಿಗಾರಿಕೆ ಮಾಡಿದರೆ 10 ಲಾರಿ ರಾಜಧನ ಕಟ್ಟಲ್ಲ. ರಾಜಧನ ಬಂದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಅಧಿಕಾರಿಗಳ ಸಹಕಾರವಿಲ್ಲದೇ ಅಕ್ರಮ ಗಣಿಗಾರಿಕೆ ನಡೆಯುತ್ತಾ? ಅದು ಸಾಧ್ಯನಾ ಎಂದು ಪ್ರಶ್ನಿಸಿದರು.
ಕೆಆರ್‍ಎಸ್ ಡ್ಯಾಂ ಬಗ್ಗೆ ಚರ್ಚೆ ಬೇಡ. ಡ್ಯಾಂ ತುಂಬಾ ಚೆನ್ನಾ ಗಿದೆ. ಡ್ಯಾಂ ಪೂಜೆ ಮಾಡಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಡ್ಯಾಂ ಅನ್ನು ಹೊಸದಾಗಿ ಕಟ್ಟಿಲ್ಲ. ಡ್ಯಾಂ ತುಂಬಿದ ಮೇಲೆ ಖಂಡಿತಾ ಬಂದು ಪೂಜೆ ಮಾಡುತ್ತೇವೆ ಎಂದರು.

ಸುಮಲತಾ ಹಾಗೂ ಹೆಚ್‍ಡಿಕೆ ನಡುವಿನ ಮಾತಿನ ಸಮರಕ್ಕೆ ಪ್ರತಿಕ್ರಿಯಿಸಿ, ಅವರ ಫೈಟನ್ನು ನೋಡಬಾರದು ಅಂತಾನೆ ನೋಡಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. 15 ದಿನದಲ್ಲಿ ಅಕ್ರಮ ಗಣಿಗಾರಿಕೆ ಪಟ್ಟಿ ಕೊಡುತ್ತೇವೆ ಅಂದಿದ್ದರು. ಆದರೆ ಕೊಟ್ಟಿಲ್ಲ. ಅವರ ವಿರುದ್ಧ ಇಂದೇ ನೋಟಿಸ್ ಜಾರಿ ಮಾಡಿಸ್ತೀನಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮ ವಿರುದ್ಧ ಹರಿಹಾಯ್ದರು.

ಹಿಂದೆ ಇದ್ದವರು ಹಾಳಾಗಿ ಹೋಗಿದ್ದರು. ಇವರನ್ನ ಈಗ ಹಾಳು ಮಾಡಲಾಗುತ್ತಿದೆ. ಹಾಗೇನಾದರು ಆದರೆ ಇವರ ಮೇಲೆ ಕ್ರಮ ಕೈಗೊಳ್ಳುವೆ. ಹೊಸದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕಾರಿ ಬಂದ ಮೇಲೂ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿದೆ ಎಂದು 4 ಬಾರಿ ಗಣಿ ಸಚಿವರಿಗೆ ದೂರು ನೀಡಿದ್ದು, ಇದೀಗ ಮತ್ತೆ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುವಂತೆ ಸಚಿವರಿಗೆ ಪತ್ರ ಬರೆಯುವೆ ಎಂದರು.

Translate »