ದಿನಸಿ ಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು
ಚಾಮರಾಜನಗರ

ದಿನಸಿ ಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು

July 10, 2021

ಕೊಳ್ಳೇಗಾಲ,ಜು.9(ಎನ್.ನಾಗೇಂದ್ರ)-ಕೊಳ್ಳೇಗಾಲದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ದಿನಸಿ ಕಿಟ್ ವಿತರಣೆ ಸಂದರ್ಭದಲ್ಲಿ ಸಾವಿ ರಾರು ಕಾರ್ಮಿಕರು ಮುಗಿಬಿದ್ದ ಹಿನ್ನೆಲೆ ಯಲ್ಲಿ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕಾಗಿ ನಗರ ಠಾಣೆ ಪೆÇಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆಯೂ ಜರುಗಿತು.ಸೂಕ್ತ ವ್ಯವಸ್ಥೆ, ಕೋವಿಡ್ ನಿಯ ಮಕ್ಕೂ ಅಗತ್ಯ ಕ್ರಮ ತೆಗೆದುಕೊಳ್ಳದೆ ಕಾರ್ಮಿಕ ಇಲಾಖೆ ಕೈಚೆಲ್ಲಿದ ಕಾರಣ ಕ್ಕಾಗಿ ಕಿಟ್ ಪಡೆಯಲು ಕಾರ್ಮಿಕರು ಮುಗಿಬಿದ್ದರಲ್ಲದೆ, ಸರತಿ ಸಾಲಿನಲ್ಲಿ ಸಾಗದೆ ಜನದಟ್ಟಣೆ ಏರ್ಪಟ್ಟಿತು. ಅನಿ ವಾರ್ಯವಾಗಿ ಪೆÇಲೀಸ್ ಸಿಬ್ಬಂದಿ ನಡೆಸಿದ ಲಘು ಲಾಠಿ ಪ್ರಹಾರಕ್ಕೆ ನಗರದ ಆರ್ ಎಂಸಿ ಸಾಕ್ಷಿಯಾಯಿತು. ಕೆಲ ಗಂಟೆಗಳು ಕಿಟ್‍ಗಾಗಿ ಕಾರ್ಮಿಕರು ಬಿಸಿಲಲ್ಲೇ ಕಾದು ಬಸವಳಿದದ್ದು ಸಹ ಕಂಡುಬಂತು.

ದಿನಸಿ ಕಿಟ್ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿದ ಶಾಸಕ ಮಹೇಶ್, ಕೊರೊನಾ ಸಂಕಷ್ಟದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾ ಗಲು ದಿನಸಿ ಕಿಟ್ ನೀಡುವಂತೆ ಕಾರ್ಮಿಕ ಸಚಿವರಿಗೆ ಮನವಿ ಮಾಡಿದ್ದೆ. ಮನವಿಗೆ ಸ್ಪಂದಿಸಿದ ಸಚಿವರು 5 ಸಾವಿರ ಕಿಟ್ ನೀಡು ವುದಾಗಿ ಭರವಸೆ ನೀಡಿದ್ದು, 3 ದಿನದಲ್ಲಿ ಕಾರ್ಮಿಕ ಇಲಾಖೆ ಕಿಟ್ ವಿತರಿಸಲಿದೆ. ಸರ್ಕಾರ ಕಟ್ಟಡ ಕಾರ್ಮಿಕರ ನೋವಿಗೆ ಸ್ಪಂದಿಸಿ 3 ಸಾವಿರ ಪರಿಹಾರ ಸಹ ನೀಡಿದೆ. ಇಂದು 2 ಸಾವಿರ ಕಿಟ್ ಬಂದಿದ್ದು, ನಾಳೆ 2 ಸಾವಿರ, ನಾಡಿದ್ದು 1 ಸಾವಿರ ಕಿಟ್ ಬರ ಲಿದೆ. ಇಂದಿನಿಂದ 3 ದಿನದಲ್ಲಿ ನೋಂದಾ ಯಿತ ಕಟ್ಟಡ ಕಾರ್ಮಿಕರೆಲ್ಲರಿಗೂ ದಿನಸಿ ಕಿಟ್ ವಿತರಣೆ ಮಾಡಲಾಗುವುದು ಎಂದರು.

Translate »