ಇನ್ನೂ 19 ಸಿಡಿ ಇದೆಯಂತೆ,  ನಾಲಗೆ ಹಿಡಿತದಲ್ಲಿರಲಿ ಕಟೀಲ್‍ಗೆ ಸಿದ್ದರಾಮಯ್ಯ ತಿರುಗೇಟು
News

ಇನ್ನೂ 19 ಸಿಡಿ ಇದೆಯಂತೆ, ನಾಲಗೆ ಹಿಡಿತದಲ್ಲಿರಲಿ ಕಟೀಲ್‍ಗೆ ಸಿದ್ದರಾಮಯ್ಯ ತಿರುಗೇಟು

March 22, 2021

ಬೆಂಗಳೂರು,ಮಾ.21-ಕಾಂಗ್ರೆಸ್ ಪಕ್ಷಕ್ಕೆ ರಾಜೀ ನಾಮೆ ನೀಡಲು ಸಿದ್ದ ರಾಮಯ್ಯ 90 ಜೊತೆ ಬಟ್ಟೆ ಖರೀದಿಸಿದ್ದಾರೆ ಎಂದು ಲೇವಡಿ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ. ಕಟೀಲ್ ಅವರ ಹೇಳಿಕೆಯ ಸುದ್ದಿಯನ್ನು ಉಲ್ಲೇ ಖಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಇನ್ನೂ 19 ಸಿಡಿ ಇದೆಯಂತೆ. ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ಮರ್ಯಾದೆ ಕಳೆ ಯುತ್ತಿರುವ ಬಿಜೆಪಿ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ನಳೀನ್‍ಕುಮಾರ್ ಕಟೀಲ್ ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡುತ್ತೀನಿ ಎಂದು ಸಿದ್ದರಾಮಯ್ಯ ತಮ್ಮ ಟ್ವೀಟ್‍ನಲ್ಲಿ ಕುಟುಕಿದ್ದಾರೆ. ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಮಳಿಗೆಯೊಂದ ರಲ್ಲಿ 90 ಜೊತೆ ಬಟ್ಟೆಗಳನ್ನು ಖರೀದಿಸಿದ್ದರು. ಈ ವಿಚಾರ ಮೊನ್ನೆ ಸದನದಲ್ಲಿ ಲಘು ಚರ್ಚೆಯ ವಸ್ತು ವಾಗಿತ್ತು. ಇಷ್ಟು ಬಟ್ಟೆಗಳನ್ನು ಒಮ್ಮೆಲೇ ಖರೀದಿಸಿದರೆ ಅಳತೆಯಲ್ಲಿ ವ್ಯತ್ಯಾಸ ಆಗುವುದಿಲ್ಲವಾ ಎಂದು ಬಿಜೆಪಿ ಸದಸ್ಯರು ಸದನದಲ್ಲೇ ತಮಾಷೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ, ತಾನು ಕೇವಲ 90 ಧೋತಿ ಗಳನ್ನಷ್ಟೇ ಖರೀದಿಸಿದ್ದು, ದಪ್ಪ ಆದರೂ ಅದನ್ನೂ ಧರಿಸಬಹುದು ಎಂದು ಹೇಳಿದ್ದರು. ಇದೀಗ, ಇದನ್ನು ರಾಜಕೀಯ ಟೀಕಾಸ್ತ್ರವಾಗಿ ಬಳಸಿಕೊಂಡಿ ರುವ ನಳೀನ್‍ಕುಮಾರ್ ಕಟೀಲ್ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಬಟ್ಟೆ ಖರೀದಿಸಿದ್ದಾರೆ ಎಂದಿದ್ದರು. ಇದಕ್ಕೆ ಸಿದ್ದರಾಮಯ್ಯ ಈಗ ಟ್ವೀಟ್ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ಸಿದ್ದರಾಮಯ್ಯ ತಮ್ಮ ಟ್ವೀಟ್‍ನಲ್ಲಿ ಪ್ರಸ್ತಾಪಿ ಸಿದ ಸಿಡಿ ವಿಚಾರ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ್ದು. ಇಲ್ಲಿ ಇನ್ನೂ 19 ಮಂದಿಯ ಸಿಡಿಗಳಿವೆ ಎಂಬಂತಹ ಸುದ್ದಿಗಳು ಕೆಲ ಮಾಧ್ಯಮ ಗಳಲ್ಲಿ ವರದಿಯಾಗಿವೆ. ಇದರಲ್ಲಿ ಸರಕಾರದ ಹಲವು ಸಚಿವರದ್ದೂ ಇದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಇದೇ ವಿಚಾರವನ್ನಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Translate »