ಮೈಸೂರು ಸಿಎಫ್‍ಟಿಆರ್‍ಐನ ಮಾಜಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಓಂ ಪ್ರಕಾಶ್ ಕಪೂರ್ ನಿಧನ
ಮೈಸೂರು

ಮೈಸೂರು ಸಿಎಫ್‍ಟಿಆರ್‍ಐನ ಮಾಜಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಓಂ ಪ್ರಕಾಶ್ ಕಪೂರ್ ನಿಧನ

January 13, 2021

ಮೈಸೂರು,ಜ.12-ಮೈಸೂರಿನ ಸಿಎಫ್‍ಟಿಆರ್‍ಐನ ಸೆಂಟ್ರಲ್ ಫುಡ್ ಲ್ಯಾಬೋರೇಟರಿ ನಿವೃತ್ತ ನಿರ್ದೇಶಕರು ಹಾಗೂ ಫುಡ್ ಸೇಫ್ಟಿ ಅಂಡ್ ಕ್ವಾಲಿಟಿ ಕಂಟ್ರೋಲ್ ಲ್ಯಾಬೋರೇಟರಿಯ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಓಂ ಪ್ರಕಾಶ್ ಕಪೂರ್ ಮಂಗಳವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಪಾಕಿಸ್ತಾನದ ಲಾಹೋರ್‍ನಲ್ಲಿ ಜನಿಸಿದ ಇವರು ಲಂಡನ್‍ನಲ್ಲಿ ಅಧ್ಯಯನ ಮಾಡಿ ನಂತರ ಮೈಸೂರಿನ ಸಿಎಫ್‍ಟಿಆರ್‍ಐಗೆ ಡಿಸೆಂಬರ್ 1957ರಂದು ಸೇರಿದರು. ಬಳಿಕ 1962ರಲ್ಲಿ ಇಂಡಿಯನ್ ಆರ್ಮಿಗೆ ನಿಯೋಜನೆಗೊಂಡರು. 1975ರಲ್ಲಿ ಮೈಸೂರಿಗೆ ಹಿಂತಿರುಗಿ ಸಿಎಫ್‍ಟಿಆರ್‍ಐನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಫುಡ್ ಸೈನ್ಸ್ ನಿಪುಣತೆ ಹೊಂದಿದ್ದ ಇವರು ಸಿಎಫ್‍ಟಿಆರ್‍ಐ ನೌಕರರ ಕಲ್ಯಾಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಸ್ನೇಹಿತರು, ನೌಕರರು ಮತ್ತು ಸಹೋದ್ಯೋಗಿ ವೃಂದದಿಂದ ಉನ್ನತ ನೈತಿಕತೆ ಮತ್ತು ಮಾನವೀಯ ಗುಣಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಪತ್ನಿ ಸ್ವದೇಶ್ ಕಪೂರ್, ಪುತ್ರ ಡಾ. ಪ್ರೀತಿ ಕಪೂರ್, ಅಳಿಯ ಡಾ. ಮುರಳಿ ಮೋಹನ್, ಪುತ್ರ ಪವನ್ ಕಪೂರ್ ಮತ್ತು ಸೊಸೆ ಮಂಜೂಷಾ ಕಪೂರ್, ಮೊಮ್ಮಗ ನೀಲ್ ಮೋಹನ್ ಮತ್ತು ಅಪಾರ ಬಂಧು ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಆರ್ಯ ಸಮಾಜದ ವಿಧಿ ವಿಧಾನಗಳ ಪ್ರಕಾರ ವಿಜಯನಗರ 4ನೇ ಹಂತದ ಮುಕ್ತಿಧಾಮದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

Translate »