ಮೈಸೂರಿನಲ್ಲೂ ಪ್ರತಿಭಟನೆಗೆ ಸೀಮಿತ
ಮೈಸೂರು

ಮೈಸೂರಿನಲ್ಲೂ ಪ್ರತಿಭಟನೆಗೆ ಸೀಮಿತ

September 28, 2021

ಮೈಸೂರು, ಸೆ. 27(ಆರ್‍ಕೆ)- ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಲವು ರೈತಪರ ಸಂಘಟನೆಗಳು ಇಂದು ಕರೆ ದಿದ್ದ ಭಾರತ್ ಬಂದ್‍ಗೆ ಮೈಸೂರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೊರೊನಾ ಸಂಕಷ್ಟ ಪರಿಸ್ಥಿತಿ, ಲಾಕ್ ಡೌನ್ ನಿರ್ಬಂಧ ಹಾಗೂ ಬೆಲೆ ಏರಿಕೆ ಯಂತಹ ಬಿಸಿಯಿಂದ ಬಳಲುತ್ತಿರುವ ಉದ್ಯಮಗಳು ಹಾಗೂ ಜನರು ಇಂದಿನ ಬಂದ್‍ಗೆ ನಿರೀಕ್ಷಿತ ಬೆಂಬಲ ನೀಡದಿ ರುವುದರಿಂದ ಕೇವಲ ರೈತ ಸಂಘ ಟನೆಗಳ ಪ್ರತಿಭಟನೆಗೆ ಮಾತ್ರ ಸೀಮಿತ ವಾಯಿತು. ಇಂದು ಮುಂಜಾನೆಯಿಂ ದಲೇ ದ್ವಿಚಕ್ರ ವಾಹನ, ಆಟೋ, ಸರಕು ಸಾಗಣೆ ವಾಹನ ಸೇರಿದಂತೆ ಸಂಚಾರ ಎಂದಿನಂತಿತ್ತಲ್ಲದೇ,
ಮೈಸೂರು ನಗರದ ಪ್ರಮುಖ ವಾಣಿಜ್ಯ ಪ್ರದೇಶದ ಕೆಲ ಅಂಗಡಿಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವ್ಯಾಪಾರ-ವಹಿವಾಟು ಎಂದಿನಂತಿತ್ತು. ಕೆ.ಆರ್. ಸರ್ಕಲ್, ಮಕ್ಕಾಜಿ ಚೌಕ, ಗಾಂಧಿ ಸ್ಕ್ವೇರ್, ಅಶೋಕ ರಸ್ತೆ, ಕೆ.ಟಿ. ಸ್ಟ್ರೀಟ್, ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಧನ್ವಂತರಿ ರಸ್ತೆ, ಶಿವರಾಂಪೇಟೆ ರಸ್ತೆ, ಸಂತೇಪೇಟೆ, ಇರ್ವಿನ್ ರಸ್ತೆ, ಬಿ.ಎನ್.ರಸ್ತೆಯಲ್ಲಿ ಕೆಲ ಅಂಗಡಿಗಳು ಬಂದ್ ಆಗಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಮೈಸೂರು ನಗರದಾದ್ಯಂತ ಎಲ್ಲಾ ಬಡಾವಣೆಗಳಲ್ಲಿ ವಾಣಿಜ್ಯ ಮಳಿಗೆ, ಅಂಗಡಿ-ಮುಂಗಟ್ಟು ತೆರೆದು ವಾಣಿಜ್ಯ-ವಹಿವಾಟು ಮಾಮೂಲಿಯಂತೆ ನಡೆದವು.

ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಮಲ್ಟಿಪ್ಲೆಕ್ಸ್ ಸಿನೆಮಾ, ಪ್ರವಾಸಿ ತಾಣ, ದೇವಾ ಲಯಗಳು, ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಬ್ಯಾಂಕ್, ಎಲ್‍ಐಸಿ ಕಚೇರಿಗಳು, ಕ್ರೀಡಾ ಚಟುವಟಿಕೆಗಳು, ಮಾರುಕಟ್ಟೆ, ಮಾಲ್‍ಗಳು, ಕಲ್ಯಾಣ ಮಂಟಪ, ಸೂಪರ್ ಮಾರ್ಕೆಟ್, ಫುಟ್‍ಪಾತ್ ವ್ಯಾಪಾರವು ಎಂದಿನಂತೆ ನಡೆದಿದ್ದರಿಂದ ಮೈಸೂರಿನಲ್ಲಿ ಬಂದ್ ವಾತಾವರಣ ಕಂಡು ಬರಲಿಲ್ಲ. ಆಟೋ, ಟ್ಯಾಕ್ಸಿ, ಓಲಾ-ಊಬರ್, ಟ್ರಕ್, ಟೆಂಪೋ, ಲಾರಿ, ಖಾಸಗಿ ಬಸ್, ಕೆಎಸ್‍ಆರ್‍ಟಿಸಿ ಗ್ರಾಮಾಂತರ ಮತ್ತು ನಗರ ವಿಭಾಗದ ಬಸ್‍ಗಳು, ರೈಲು, ದ್ವಿಚಕ್ರ ವಾಹನ ಸಂಚಾರ ಸಾಮಾನ್ಯವಾಗಿತ್ತಲ್ಲದೆ, ವಿಮಾನ ಸೇವೆಯೂ ಎಂದಿನಂತಿತ್ತು. ರೈತರು ಪ್ರತಿಭಟನೆ ನಡೆಸುತ್ತಿದ್ದ ಪುರಭವನ ಹಾಗೂ ಸಬರ್ಬನ್ ಬಸ್ ನಿಲ್ದಾಣದ ಬಳಿ ಬಿ.ಎನ್. ರಸ್ತೆಯಲ್ಲಿ ಮಾತ್ರ ಕೆಲವರು ಅಂಗಡಿಗಳನ್ನು ಕೆಲ ಸಮಯದವರೆಗೆ ಬಂದ್ ಮಾಡಿದ್ದರು. ಉಳಿದಂತೆ ಮೈಸೂರು ನಗರದಾದ್ಯಂತ ಜನಜೀವನ ಎಂದಿನಂತಿತ್ತು. ಕಟ್ಟಡ, ರಸ್ತೆ, ಚರಂಡಿಯಂತಹ ಸಿವಿಲ್ ಕಾಮಗಾರಿ, ಸಾಂಸ್ಕøತಿಕ ಚಟುವಟಿಕೆ, ಸಭೆ-ಸಮಾರಂಭಗಳಿಗೆ ಭಾರತ್ ಬಂದ್ ಅಡ್ಡಿಯಾಗಲಿಲ್ಲ. ಮೈಸೂರಿನಿಂದ ಮಡಿಕೇರಿ, ಮಂಗಳೂರು, ಬೆಂಗಳೂರು, ಚಾಮ ರಾಜನಗರ, ತುಮಕೂರು, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆಡೆಗೆ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ಬಸ್ಸುಗಳ ಸಂಚಾರ ಎಂದಿನಂತಿತ್ತು.

ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಕೆ.ಆರ್. ಮಾರ್ಕೆಟ್, ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ಗುಜರಿ ಸೇರಿದಂತೆ ಹಲವೆಡೆ ರೈತ ಸಂತೆ, ತರಕಾರಿ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅಡ್ಡಿಯುಂಟಾಗಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯ, ಜೆಎಸ್‍ಎಸ್ ತಾಂತ್ರಿಕ ವಿಶ್ವವಿದ್ಯಾನಿಲಯ ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಕಾಲೇಜುಗಳು ಎಂದಿನಂತೆ ನಡೆದವು. ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳೂ ತೆರೆದಿದ್ದು, ಪ್ರವಾಸಿಗರ ಭೇಟಿ ಎಂದಿನಂತಿತ್ತು. ಮೈಸೂರು ನಗರ ಸಾರಿಗೆ ಬಸ್ಸುಗಳೂ ಬೆಳಗ್ಗೆ ಯಿಂದ ರಾತ್ರಿವರೆಗೂ ಕಾರ್ಯನಿರ್ವಹಿಸಿದವು. ಸಣ್ಣ, ಸೂಕ್ಷ್ಮ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು, ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ಭಾರತ್ ಬಂದ್ ಬಿಸಿ ತಟ್ಟಲಿಲ್ಲ.
ರೈತ ಸಂಘಟನೆಗಳ ಮುಖಂಡರು ಮಾತ್ರ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬಳಿ ನಂಜನಗೂಡು ರಸ್ತೆ ತಡೆದು ಕೆಲ ಸಮಯ ಪ್ರತಿಭಟನೆ ನಡೆಸಿದರಲ್ಲದೆ, ಸಬರ್ಬನ್ ಬಸ್ ಸ್ಟ್ಯಾಂಡ್, ಪುರಭವನ ಬಳಿ ಪ್ರತಿಭಟನೆ ನಡೆಸಿದ ನಂತರ ಮೆರವಣಿಗೆಯಲ್ಲಿ ತೆರಳಿ ಡಿಸಿ ಕಚೇರಿ ಬಳಿ ಮಧ್ಯಾಹ್ನದವರೆಗೆ ಧರಣಿ ನಡೆಸಿ ಕೃಷಿ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಬಂದ್ ಹಿನ್ನೆಲೆಯಲ್ಲಿ ಮೈಸೂರು ನಗರದಾ ದ್ಯಂತ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Translate »