ಹಿಂದೂಗಳ ಭಾವನೆಗಳಿಗೆ ದ್ರೋಹ ಮಾಡಿದವರು  ಮುಂದಿನ ಚುನಾವಣೆಯಲ್ಲಿ ಗೆಲ್ಲಲಾರರು
ಮೈಸೂರು

ಹಿಂದೂಗಳ ಭಾವನೆಗಳಿಗೆ ದ್ರೋಹ ಮಾಡಿದವರು ಮುಂದಿನ ಚುನಾವಣೆಯಲ್ಲಿ ಗೆಲ್ಲಲಾರರು

September 29, 2021

ಮೈಸೂರು, ಸೆ.28(ಆರ್‍ಕೆಬಿ)- ನಂಜನಗೂಡು ತಾಲೂಕಿನ ಹುಚ್ಚಗಣಿ ದೇವಸ್ಥಾನವನ್ನು ಕೆಡವಿದ ಸಂಬಂಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಂಗಳವಾರ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಹಿಂದೂ ಸಮಾಜಕ್ಕೆ ದ್ರೋಹ ಮಾಡಿದವರು ಮುಂದಿನ ಚುನಾವಣೆ ಯಲ್ಲಿ ಹೇಗೆ ಗೆಲ್ಲಲು ಸಾಧ್ಯ ಎಂಬುದನ್ನು ಹಿಂದೂಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನ ತೆರವು ಕಾರ್ಯವನ್ನು ಇಡೀ ವಿಧಾನಸಭೆ ಪಕ್ಷಾತೀತವಾಗಿ ಖಂಡಿ ಸಿದೆ. ಇದು ಹಿಂದೂಗಳ ಧ್ರುವೀಕರಣದ ಮೊದಲ ಹಂತವಾಗಿದೆ. ಇನ್ನು ಮುಂದೆ ಯಾರೇ ಆಗಲಿ ಹಿಂದೂಗಳ ಭಾವನೆ ಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯ ವಿಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶಿಸಲಿದೆ ಎಂದರು.

ಯಾವ ದೇವಾಲಯವನ್ನೂ ಒಡೆದು ಹಾಕುವಂತೆ ಸುಪ್ರಿಂಕೋರ್ಟ್ ಹೇಳಿಲ್ಲ. ಇದು ಹೊಣೆಗೇಡಿಗಳ, ಯೋಗ್ಯತೆ ಇಲ್ಲ ದವರ ಕೈಯ್ಯಲ್ಲಿ, ಜಾತಿ ಆಧಾರದಲ್ಲಿ ಅಧಿ ಕಾರ ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಜನರ ಒತ್ತಡಕ್ಕೆ ಎಚ್ಚೆತ್ತ ಸರ್ಕಾರ, ದೇವಾಲಯ ಸಂರಕ್ಷಣೆ ಮಸೂದೆ ಮಂಡಿಸಿದೆ. ಇದು ಹಿಂದೂಗಳ ಗೆಲುವು ಎಂದು ಹೇಳಿದರು.

ಸೋಮವಾರ ನಡೆದ ರೈತ ಚಳವಳಿ ವಿಫಲವಾದ ಬಗ್ಗೆ ಪ್ರಸ್ತಾಪಿಸಿದ ಅವರು, ರೈತಪರವಾದ ಬಂದ್ ಯಶಸ್ವಿಯಾಗಬೇಕಿತ್ತು. ಆದರೆ ಚಳವಳಿಗಳೂ ಅರ್ಥ ಕಳೆದು ಕೊಂಡಿವೆ. ರಾಜಕೀಯ ಪ್ರವೇಶ ಮಾಡಿದ ಚಳವಳಿಗಳು ಸಫಲವಾಗುವುದಿಲ್ಲ ಎಂದರು.

ಇಸ್ಲಾಮಿಕ್ ಮೂಲಭೂತವಾದಿಗಳ ನೇತೃತ್ವದಿಂದಾಗಿ ಭಾರತ್ ಬಂದ್ ವಿಫಲ ವಾಗಿದೆ. ಸ್ವತಂತ್ರ ಪೂರ್ವದಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದಿದ್ದ ಕಾಂಗ್ರೆಸ್ 6 ದಶಕಗಳ ನಂತರ ದುಸ್ಥಿತಿಗೆ ಬಂದಿದೆ. ಇಸ್ಲಾಮಿಕ್ ಮೂಲಭೂತವಾದಿಗಳ ನೇತೃತ್ವ ದಿಂದಾಗಿ ಭಾರತ್ ಬಂದ್ ವಿಫಲವಾಗಿದೆ. ಇನ್ನಾದರೂ ಕಾಂಗ್ರೆಸ್ ಪಾಠ ಕಲಿಯ ಬೇಕು ಎಂದರು. ವೇದಿಕೆ ಮುಖಂಡರಾದ ಲೋಹಿತ್ ಅರಸ್, ನರಸಿಂಹೇಗೌಡ ಹಾಗೂ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

Translate »