ಮೈಸೂರಲ್ಲಿ `ಲಯನ್ಸ್ ಪ್ಲೇಟ್ ಬ್ಯಾಂಕ್’ ನಾಳೆ ಆರಂಭ
ಮೈಸೂರು

ಮೈಸೂರಲ್ಲಿ `ಲಯನ್ಸ್ ಪ್ಲೇಟ್ ಬ್ಯಾಂಕ್’ ನಾಳೆ ಆರಂಭ

February 26, 2021

ಮೈಸೂರು,ಫೆ.25(ಎಂಟಿವೈ)-ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಕೆ ತಗ್ಗಿಸುವ ಆಲೋಚನೆಯೊಂದಿಗೆ ಸಮಾರಂಭಗಳಿಗೆ ಉಚಿತವಾಗಿ ತಟ್ಟೆ-ಲೋಟ ಒದಗಿಸಲು ಮೈಸೂರಲ್ಲಿ `ಲಯನ್ಸ್ ಪ್ಲೇಟ್ ಬ್ಯಾಂಕ್’ ಆರಂಭಿಸುತ್ತಿದ್ದು, ಫೆ.27ರ ಸಂಜೆ 4.30ಕ್ಕೆ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಬ್ಯಾಂಕ್ ಉದ್ಘಾಟಿಸಲಿದ್ದಾರೆ ಎಂದು ಲಯನ್ಸ್ ಪ್ರಾಂತ್ಯ4ರ ಅಧ್ಯಕ್ಷ ಎಸ್.ಮೂರ್ತಿ ಮೈಸೂ ರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯೆ ಶಾರದಮ್ಮ, ಮಾಜಿ ಮೇಯರ್ ಭೈರಪ್ಪ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಲಯನ್ಸ್ ಕ್ಲಬ್‍ನ ಡಾ.ನಾಗರಾಜ್ ವಿ.ಭೈರಿ ಪಾಲ್ಗೊಳ್ಳÀಲಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಜಿಲ್ಲೆ-317ಎ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಹಾಗೂ ಮಯೂರಿ ಸಂಸ್ಥೆಗಳ ಸಹಯೋಗದಲ್ಲಿ ಮೈಸೂರಿನ ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆಯ ಹಸಿವು ನಿವಾರಣಾ ಕೇಂದ್ರದಲ್ಲಿ ಈ ಪ್ಲೇಟ್ ಬ್ಯಾಂಕ್ ಚಟುವಟಿಕೆ ನಡೆಸಲಿದೆ.

ಮದುವೆ ಮತ್ತಿತರೆ ಸಭೆ, ಸಮಾರಂಭ ಗಳಲ್ಲಿ ಉಪಯೋಗಿಸಿ ಬಿಸಾಡುವ ತಟ್ಟೆ, ಪ್ಲೇಟ್, ಲೋಟ ಬಳಸಲಾಗುತ್ತಿದೆ. ದಿನಕ್ಕೆ 18 ಟನ್ ಕಸ ಉತ್ಪಾದನೆಯಾಗುತ್ತಿದೆ. ನಂ.1 `ಸ್ವಚ್ಛನಗರಿ’ ಪ್ರಶಸ್ತಿ ಪಡೆದಿರುವ ಮೈಸೂ ರಿಗೆ ಇದು ದುಬಾರಿಯಾಗಿದೆ. ಈ ಕಸ ಉತ್ಪಾದನೆ ತಗ್ಗಿಸಲೆಂದೇ `ಪ್ಲೇಟ್ ಬ್ಯಾಂಕ್’ ಆರಂಭಿಸಲಾಗಿದೆ. ಆರಂಭದಲ್ಲಿ 1 ಸಾವಿರ ತಟ್ಟೆ, ಲೋಟ, ಚಮಚ ಇದ್ದು, ಮುಂದಿನ ದಿನಗಳಲ್ಲಿ 5 ಸಾವಿರಕ್ಕೆ ಹೆಚ್ಚಿಸುವ ಉದ್ದೇಶ ವಿದೆ. ಸಭೆ, ಸಮಾರಂಭ ಮಾಡುವವರು ವಾರ ಮುಂಚಿತವಾಗಿ ಮಾಹಿತಿ ನೀಡಿ ಪರಿಕರಗಳನ್ನು ಕಾಯ್ದಿರಿಸಬಹುದು ಎಂದರು.

ಕಾರ್ಯಕ್ರಮಗಳಿಗೆ ಊಟದ ತಟ್ಟೆ, ಲೋಟ, ತಿಂಡಿ ಪ್ಲೇಟ್‍ಗಳನ್ನು ಎರವ ಲಾಗಿ ಪಡೆಯಲಿಚ್ಛಿಸುವವರು 10 ಸಾವಿರ ರೂ. ಭದ್ರತಾ ಠೇವಣಿ ಪಾವತಿಸಬೇಕು. ಬಳಸಿದ ಬಳಿಕ ತಟ್ಟೆ, ಪ್ಲೇಟ್, ಲೋಟ ವನ್ನು ಶುಚಿಗೊಳಿಸಿ ವಾಪಸ್ ತಂದು ಕೊಟ್ಟು ಠೇವಣಿ ಇರಿಸಿದ್ದ ಹಣ ವಾಪಸ್ ಪಡೆಯಬಹುದು. ಸಾಮಗ್ರಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ ಅದರ ಬೆಲೆಯಷ್ಟು ಹಣವನ್ನು ಪಾವತಿಸಬೇಕಿದೆ ಎಂದರು.

ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾ ಗಿದೆ. ತೇಜಸ್ವಿನಿ ಅನಂತಕುಮಾರ್ ಅವರ ಸಲಹೆ ಮೇರೆಗೆ ಮೈಸೂರಿನಲ್ಲಿಯೂ ಆರಂ ಭಿಸಲಾಗುತ್ತಿದೆ. ಮುಂದೆ ನಗರದ ವಿವಿ ಧೆಡೆಯೂ ಪ್ಲೇಟ್ ಬ್ಯಾಂಕ್ ಆರಂಭಿಸುವ ಉದ್ದೇಶವಿದೆ ಎಂದರು. ಲಯನ್ಸ್ ಸಂಸ್ಥೆ ಸುಬ್ಬಣ್ಣ, ಜಯರಾಂ, ನಂಜುಂಡಸ್ವಾಮಿ, ಚಂದ್ರಶೇಖರ್, ಶ್ರೀನಿವಾಸ್ ಗೋಷ್ಠಿಯಲ್ಲಿದ್ದರು.

 

Translate »