ಕರಾಮುವಿಯಿಂದ ಮಾ.15ರಿಂದ `ವರ್ಚುಯಲ್ ಉದ್ಯೋಗ ಮೇಳ’
ಮೈಸೂರು

ಕರಾಮುವಿಯಿಂದ ಮಾ.15ರಿಂದ `ವರ್ಚುಯಲ್ ಉದ್ಯೋಗ ಮೇಳ’

February 26, 2021

ಮೈಸೂರು, ಫೆ.25(ಎಂಟಿವೈ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕರಾಮುವಿ), ಜಾಬ್ ಕಾರ್ಟ್ ಸಂಸ್ಥೆ ಸಹಭಾಗಿತ್ವದಲ್ಲಿ ಮಾ.15ರಿಂದ 23ರವರೆಗೆ 8 ದಿನಗಳ `ವರ್ಚುಯಲ್ ಉದ್ಯೋಗ ಮೇಳ’ ಆಯೋಜಿಸಿದೆ ಎಂದು ಮುಕ್ತ ವಿವಿ ಕುಲ ಪತಿ ಪೆÇ್ರ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.

ಮುಕ್ತ ವಿವಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕರಾಮುವಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಷ್ಟೇ ಅಲ್ಲದೆ ಉದ್ಯೋಗಾವಕಾಶ ಕಲ್ಪಿಸಿದೆ. ಅಗತ್ಯವಿದ್ದವರಿಗೆ ಕೌಶಲ ನೀಡಲು ಕ್ರಮ ಕೈಗೊಂಡಿದೆ. ಹಿಂದೆಯೂ ಬೃಹತ್ ಉದ್ಯೋಗ ಮೇಳ ಆಯೋಜಿಸಿ 10 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ವರ್ಚುಯಲ್ ಉದ್ಯೋಗ ಮೇಳ ನಡೆಸಲಾಗು ತ್ತಿದ್ದು, ಪೂರ್ವ ತಯಾರಿ ಮಾಡಿಕೊಳ್ಳ ಲಾಗಿದೆ. ರಾಜ್ಯದ ವಿವಿಧೆಡೆಯ 100 ಕಂಪನಿ ಗಳು ಭಾಗವಹಿಸುತ್ತಿದ್ದು, 1 ಸಾವಿರ ಹುದ್ದೆ ಗಳಿಗೆ ನೇಮಕ ನಡೆಯಲಿದೆ. ಅವಕಾಶ ವಂಚಿತರಿಗೆ, ಮಹಿಳೆಯರಿಗೆ, ಗ್ರಾಮೀಣ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಮೇಳ ನಡೆಸಲಾಗುತ್ತಿದ್ದು, ಉಪ ಮುಖ್ಯ ಮಂತ್ರಿ ಡಾ.ಅಶ್ವತ್ಥ್‍ನಾರಾಯಣ್ ಉದ್ಘಾ ಟಿಸಲಿದ್ದಾರೆ ಎಂದು ವಿವರಿಸಿದರು.

ಮುಕ್ತವಿವಿಯಷ್ಟೇ ಅಲ್ಲ, ಇತರೆ ವಿವಿ ಗಳಿಂದ ಪದವಿ ಪಡೆದವರೂ ಮೇಳದಲ್ಲಿ ಪಾಲ್ಗೊಳ್ಳಬಹುದು. 2018ರ ಬಳಿಕ ಪದವಿ ಪಡೆದವರಿಗೆ ಆದ್ಯತೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಐಟಿಐ, ಡಿಪೆÇ್ಲಮಾ, ಬಿಇ ಪದವಿ ಪಡೆದವರು ನೋಂದಾಯಿಸಿ ಕೊಳ್ಳಬಹುದು. ಈವರೆಗೆ 6,700 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಉದ್ಯೋಗಕ್ಕಾಗಿ ವಿವಿಗೆ ಅರ್ಜಿ ಸಲ್ಲಿಸಿರುವ 19 ಸಾವಿರ ಅಭ್ಯರ್ಥಿಗಳ ಮಾಹಿತಿ, ಕೌಶ ಲಾಭಿವೃದ್ಧಿ ತರಬೇತಿಗಾಗಿ ಅರ್ಜಿ ಸಲ್ಲಿಸಿ ರುವ 40 ಸಾವಿರ ಜನರ ಮಾಹಿತಿ ವಿವಿ ಬಳಿ ಇದೆ. ಅವರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದರು.

ಜಾಬ್ ಕಾರ್ಟ್ ಸಂಸ್ಥಾಪಕ ಎಸ್.ವಿ. ವೆಂಕಟೇಶ್ ಮಾತನಾಡಿ, ಕೆಲಸಕ್ಕಾಗಿ ಆಯ್ಕೆ ಪ್ರಕ್ರಿಯೆ 8 ಹಂತದಲ್ಲಿ ನಡೆಯಲಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಜಾಬ್ ಕಾರ್ಟ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಲಾಗಿನ್ ಬಳಿಕ 24 ಗಂಟೆ ಒಳಗೆ ಶೈಕ್ಷಣಿಕ ವಿದ್ಯಾರ್ಹತೆಯನ್ನು ಭರ್ತಿ ಮಾಡಬೇಕು. ವಿದ್ಯಾರ್ಹತೆ ಕುರಿತು 1 ನಿಮಿಷದ ವಿಡಿಯೋ ಮಾಡಿ ಅಪ್‍ಲೋಡ್ ಮಾಡಬಹುದು. ದಾಖಲಾತಿಗಳನ್ನು ಸ್ಕಾೃನ್ ಮಾಡಿ ಆ್ಯಪ್ ನಲ್ಲಿ ನೀಡಿರುವ ಫೆÇ್ರಫೈಲ್ ಲಿಂಕ್‍ಗೆ ಶೇರ್ ಮಾಡಬೇಕು. ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆ, ಕೌಶಲಕ್ಕೆ ಅನುಗುಣವಾಗಿ ಆ್ಯಪ್‍ನಲ್ಲಿ ಉದ್ಯೋಗ ವನ್ನು ಅರಸÀಬಹುದು ಎಂದರು.

ಪ್ರತಿದಿನ ಪ್ರಕ್ರಿಯೆ ಬೆಳವಣಿಗೆ ಕುರಿತು ಮಾಹಿತಿ ರವಾನೆ ಆಗಲಿದೆ. ಕಂಪನಿಗಳು ಸಂಭವನೀಯ ಆಯ್ಕೆ ಪಟ್ಟಿಯನ್ನು ತಯಾರು ಮಾಡಲಿವೆ. ನಂತರ ಕೆಲ ಕಂಪನಿಗಳು ನೇರವಾಗಿ ಉದ್ಯೋಗಾಕಾಂಕ್ಷಿಗಳಿಗೆ ದೂರ ವಾಣಿ/ಜೂಮ್ ಆ್ಯಪ್ ಮೂಲಕ ಸಂದ ರ್ಶಿಸಲಿವೆ. ಮುಖಾಮುಖಿ ಸಂದರ್ಶನ ಮೂಲಕ ಅಂತಿಮ ಆಯ್ಕೆ ನಡೆಯಲಿದೆ ಎಂದು ಅವರು ತಿಳಿಸಿದರು.

ಕರಾಮುವಿ ಉದ್ಯೋಗಾಧಿಕಾರಿ ಆರ್.ಹೆಚ್. ಪವಿತ್ರ ಮಾತನಾಡಿ, ನೋಂದಾಯಿಸಿ ಕೊಂಡ ಉದ್ಯೋಗಾಕಾಂಕ್ಷಿಗಳಿಗೆ ನಾಳೆ ಯಿಂದಲೇ ಬಲ್ಕ್ ಮೆಸೇಜ್ ಕಳುಹಿಸಿ ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಜನ ರಿಗೆ ಮಾಹಿತಿ ತಲುಪಿಸಲು ಕ್ರಮ ಕೈಗೊಳ್ಳ ಲಾಗಿದೆ. ಮಾಹಿತಿಗಾಗಿ ಮೊ: 95133 73737 ಸಂಪರ್ಕಿಸಬಹುದು ಎಂದರು.

ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಅಧ್ಯಯನ ಕೇಂದ್ರದ ಡೀನ್ ಷÀಣ್ಮುಖ, ಹಣಕಾಸು ಅಧಿಕಾರಿ ಖಾದಿರ್ ಪಾಷ ಸುದ್ದಿಗೋಷ್ಠಿಯಲ್ಲಿದ್ದರು.

 

 

 

Translate »