ಇಂದಿನಿಂದ ವೈನ್‍ಶಾಪ್, ಎಂಎಸ್‍ಐಎಲ್ ಶಾಪ್‍ನಲ್ಲಿ ಮದ್ಯ ಮಾರಾಟ
ಮೈಸೂರು

ಇಂದಿನಿಂದ ವೈನ್‍ಶಾಪ್, ಎಂಎಸ್‍ಐಎಲ್ ಶಾಪ್‍ನಲ್ಲಿ ಮದ್ಯ ಮಾರಾಟ

May 4, 2020

ಮೈಸೂರು, ಮೇ 3(ಎಂಟಿವೈ)- ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಕಳೆದ 42 ದಿನಗಳಿಂದ ಮುಚ್ಚಲ್ಪಟ್ಟಿದ್ದ ವೈನ್ ಶಾಪ್ ಹಾಗೂ ಎಂಎಸ್‍ಐಎಲ್ ಮದ್ಯ ದಂಗಡಿಗಳು ಸೋಮವಾರ (ಮೇ4) ತೆರೆಯಲಿದ್ದು, ಕೊರೊನಾ ಸೋಂಕು ಹರಡು ವುದನ್ನು ತಡೆಗಟ್ಟಲು ಗ್ರಾಹ ಕರು ಕಡ್ಡಾಯವಾಗಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಬ ಕಾರಿ ಇಲಾಖೆ ಅಧಿಕಾರಿಗಳು ವೈನ್‍ಸ್ಟೋರ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ಮಾ.23ರಿಂದ ರಾಜ್ಯ ದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಅದೇ ದಿನ ಮೈಸೂರು ಜಿಲ್ಲೆಯ ಎಲ್ಲಾ 10 ವಲಯಗಳಲ್ಲಿರುವ ಬಾರ್, ರೆಸ್ಟೋರೆಂಟ್, ವೈನ್‍ಸ್ಟೋರ್, ಎಂಎಸ್‍ಐಎಲ್ ಸೇರಿ ದಂತೆ ಎಲ್ಲಾ ಬಗೆ ಮದ್ಯ ಮಾರಾಟ ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿತ್ತು. ಮೈಸೂರು ನಗರವನ್ನು ಅಬ ಕಾರಿ ಇಲಾಖೆ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಟ್ಟು 280 ವಿವಿಧ ಬಗೆಯ ಬಾರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 200ಕ್ಕೂ ಹೆಚ್ಚು ವಿವಿಧ ಬಗೆಯ ಬಾರ್‍ಗಳಿವೆ. ಈ ಎಲ್ಲಾ ಬಗೆಯ ಮದ್ಯದ ಅಂಗಡಿಗಳನ್ನು ಮುಚ್ಚಿಸಲಾಗಿತ್ತು.

3ನೇ ಹಂತದ ಲಾಕ್‍ಡೌನ್‍ನಲ್ಲಿ ರಾಜ್ಯ ಸರ್ಕಾರ ಕೆಲವು ವಿನಾಯಿತಿ ನೀಡಿದ್ದು, ಅದರಲ್ಲಿ ಕಳೆದ 42 ದಿನಗಳಿಂದ ಮದ್ಯ ವಿಲ್ಲದೆ ಪರದಾಡುತ್ತಿದ್ದ ಮದ್ಯವ್ಯಸನಿಗಳಿಗೆ ಸಿಹಿ ಸುದ್ದಿ ನೀಡಿ ದ್ದರು. ಕಂಟೇನ್ಮೆಂಟ್ ಜೋóóನ್ ಹೊರತುಪಡಿಸಿ ಇತರೆ ಸ್ಥಳಗಳಲ್ಲಿರುವ ವೈನ್‍ಸ್ಟೋರ್ ಮತ್ತು ಎಂಎಸ್‍ಐಎಲ್ ಮಳಿಗೆ ಯಲ್ಲಿ ಮಾತ್ರ ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದ್ದು, ಬಾರ್ ಹಾಗೂ ರೆಸ್ಟೋರೆಂಟ್ ಗಳು ಎಂದಿನಂತೆ ಬಂದ್ ಆಗಲಿವೆ. ಜಿಲ್ಲೆಯಲ್ಲಿ 182 ವೈನ್ ಸ್ಟೋರ್ ಹಾಗೂ 35 ಎಂಎಸ್‍ಐಎಲ್ ಮಳಿಗೆಗಳು ನಾಳೆ ಬೆಳಿಗ್ಗೆ 9ರಿಂದ ಸಂಜೆ 7ವರೆಗೆ ಗ್ರಾಹಕರಿಗೆ ಮದ್ಯ ಪೂರೈಸ ಲಿವೆ. ಆದರೆ ಮಾಲ್ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ರುವ ವೈನ್ ಶಾಪ್‍ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಅವುಗಳನ್ನು ಎಂದಿನಂತೆ ಬಂದ್ ಮಾಡಲಾಗುತ್ತದೆ.

ಕಟ್ಟುನಿಟ್ಟಿನ ಕ್ರಮ: ಅಬಕಾರಿ ಡಿಸಿ ಕೆ.ಎಸ್.ಮುರುಳಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲೆಯಲ್ಲಿರುವ 182 ವೈನ್‍ಸ್ಟೋರ್ ಹಾಗೂ 35 ಎಂಎಸ್‍ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರು ಮದ್ಯವನ್ನು ಪಾರ್ಸೆಲ್ ತೆಗೆದು ಕೊಂಡು ಹೋಗಬಹುದು. ಆದರೆ ಬಾರ್ ಮತ್ತು ರೆಸ್ಟೋ ರೆಂಟ್‍ಗಳಿಗೆ ನಿರ್ಬಂಧ ಮುಂದುವರೆಯಲಿದೆ. ಐವರು ಮಾತ್ರ ಮಳಿಗೆ ಮುಂದೆ ನಿಂತುಕೊಂಡು ಖರೀದಿಸಬಹುದು. ಉಳಿದ ಗ್ರಾಹಕರು ದೂರದಲ್ಲಿಯೇ ನಿಲ್ಲಬೇಕಾಗುತ್ತದೆ. ಪ್ರತಿಯೊಬ್ಬ ಗ್ರಾಹಕರ ನಡುವೆ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳ ಬೇಕು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಅಥವಾ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಪ್ರತಿ ವೈನ್‍ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸಬೇಕು. ಇಲಾಖೆ ಸೂಚಿಸಿದ ನಿಯಮ ವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದರು.

ಅಕ್ರಮ ಮದ್ಯ ಮಾರಾಟ, ನಕಲಿ ಮದ್ಯ ಮಾರಾಟ ತಡೆ ಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 13 ಫ್ಲೈಯಿಂಗ್ ಸ್ಕ್ವಾಡ್ ರಚಿಸ ಲಾಗಿದ್ದು, ಮೂರು ಪಾಳಿಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಅಲ್ಲದೆ ಈ ಹಿಂದೆ ಅಕ್ರಮ ಮದ್ಯ ಹಾಗೂ ನಕಲಿ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದವರನ್ನು ಡ್ರಿಲ್ ಮಾಡಲಾಗಿದೆ. ಅಂತಹವರ ಮೇಲೆ ಹದ್ದಿನ ಕಣ್ಣಿಟ್ಟು ಗಮನಿಸಲಾಗುತ್ತಿದೆ. ಅಕ್ರಮ ಹಾಗೂ ನಕಲಿ ಮದ್ಯ ಮಾರಾಟ ಕಂಡು ಬಂದರೆ ಕಂಟ್ರೋಲ್ ರೂಂ ಸಂ. 0821-2541863 ಮಾಹಿತಿ ನೀಡುವಂತೆ ಕೋರಿದರು.

ಸ್ಟಾಕ್ ಪರಿಶೀಲನೆ: ಸೋಮವಾರದಿಂದ ಮದ್ಯ ಮಾರಾಟ ಆರಂಭವಾಗುವ ನಿಟ್ಟಿನಲ್ಲಿ ಭಾನುವಾರ ಜಿಲ್ಲೆಯಲ್ಲಿ ಎಲ್ಲಾ ವೈನ್‍ಸ್ಟೋರ್, ಎಂಎಸ್‍ಐಎಲ್ ಮಳಿಗೆಗಳಿಗೆ ಅಬಕಾರಿ ಸಿಬ್ಬಂದಿ ತೆರಳಿ ಸ್ಟಾಕ್ ಪರಿಶೀಲಿಸಿದರು. ಮಾ.23ರಂದು ಇಲಾಖೆ ಅಧಿಕಾರಿಗಳೇ ಮಳಿಗೆಗಳಿಗೆ ಸೀಲ್ ಮಾಡಿದ್ದನ್ನು, ಇಂದು ಸಿಬ್ಬಂದಿಗಳ ಸಮ್ಮುಖದಲ್ಲಿ ತೆರಸಿದರು. ಬಳಿಕ ಮಳಿಗೆಯಲ್ಲಿ ಯಾವ ಯಾವ ಬ್ರಾಂಡ್‍ನ ಎಷ್ಟೆಷ್ಟು ಮದ್ಯ ಇದೆ ಎನ್ನುವುದನ್ನು ನಮೂದು ಮಾಡಿಕೊಂಡರು. ಲಾಕ್‍ಡೌನ್‍ಗು ಮುನ್ನ ಎಷ್ಟು ದಾಸ್ತಾನು ಇದೆ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಸ್ಟಾಕ್‍ನಲ್ಲಿ ವ್ಯತ್ಯಾಸ ಕಂಡು ಬಂದರೆ, ನಿಯಮ ಉಲ್ಲಂಘಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಸ್ಥಳೀಯರಿಂದ ವಿರೋಧ: ಮೈಸೂರಿನ ಸಿದ್ದಪ್ಪ ವೃತ್ತದ ಬಳಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೆಲವು ವೈನ್‍ಶಾಪ್‍ಗಳಿಗೆ ಅಬಕಾರಿ ಸಿಬ್ಬಂದಿ ಸ್ಟಾಕ್ ಪರಿಶೀಲನೆಗಾಗಿ ಇಂದು ತೆರಳಿದ್ದಾಗ, ಸ್ಥಳೀಯರು ಯಾವುದೇ ಕಾರಣಕ್ಕೂ ವೈನ್‍ಶಾಪ್ ತೆರೆಯದಂತೆ ಆಗ್ರಹಿಸಿ ಪ್ರತಿಭಟಿಸಲು ಮುಂದಾದರು. ಲಾಕ್‍ಡೌನ್ ನಿಯಮವಿದ್ದರೂ ಹೆಚ್ಚು ಜನ ಸೇರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೆ.ಆರ್ ಹಾಗೂ ಲಕ್ಷ್ಮೀಪುರಂ ಠಾಣೆ ಪೊಲೀಸರು ಆಗಮಿಸಿ, ಗುಂಪು ಚದುರಿಸಿದರು. ಈ ವೇಳೆ ಸ್ಥಳೀಯರು ಜನನಿಬಿಡ ಪ್ರದೇಶದಲ್ಲಿ ಬಾರ್, ವೈನ್‍ಸ್ಟೋರ್‍ಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಕಳೆದ 42 ದಿನಗಳಿಂದ ಬಂದ್ ಮಾಡಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಸುತ್ತಲೂ ಮನೆಗಳಿವೆ. ಹೆಣ್ಣು ಮಕ್ಕಳು, ಮಹಿಳೆಯರಿಗೆ ಕುಡುಕರಿಂದ ತೊಂದರೆಯಾಗುತ್ತಿದೆ. ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಪುನರಾರಂಭಿಸದಂತೆ ಆಗ್ರಹಿಸಿದರು.

Translate »