ದಸರಾ ಗಜಪಡೆಯ ೨೦ ಸದಸ್ಯರ ಪಟ್ಟಿ ರೆಡಿ
ಮೈಸೂರು

ದಸರಾ ಗಜಪಡೆಯ ೨೦ ಸದಸ್ಯರ ಪಟ್ಟಿ ರೆಡಿ

July 17, 2022

ಉನ್ನತ ಸಮಿತಿ ಸಭೆಯಲ್ಲಿ ಅಂತಿಮ ಪಟ್ಟಿ ನಿರ್ಧಾರ
ಮೈಸೂರು, ಜು.೧೬(ಎಂಟಿವೈ)-ನಾಡಹಬ್ಬ ದಸರಾ ವಿಶೇಷ ಅತಿಥಿಗಳಾದ ಗಜಪಡೆಗೆ ಸದಸ್ಯರ ಆಯ್ಕೆಗೆ ಸಂದರ್ಶನ ಪೂರ್ಣಗೊಂಡಿದೆ. ಅರಣ್ಯಾಧಿಕಾರಿಗಳ ತಂಡ ನಾಲ್ಕು ಕ್ಯಾಂಪ್‌ಗಳ ೩೦ ಆನೆಗಳ ಸಂದರ್ಶಿಸಿ, ೨೦ ಆನೆಗಳ ಪಟ್ಟಿ ಸಿದ್ಧಪಡಿಸಿದೆ.

ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆನೆಗಳ ಶಿಬಿರಗಳಾದ ಮತ್ತಿ ಗೂಡು, ಆನೆಕಾಡು, ದುಬಾರೆ ಹಾಗೂ ಬಂಡೀಪುರ ಅರಣ್ಯದ ರಾಮಾಪುರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆನೆಗಳನ್ನು ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಸಂದರ್ಶಿ ಸಿತ್ತು. ಅಂತಿಮವಾಗಿ ೭ ಹೆಣ್ಣಾನೆ ಸೇರಿ ದಂತೆ ೨೦ ಆನೆಗಳ ಪಟ್ಟಿ ಸಿದ್ಧಪಡಿಸಿದ್ದು, ಈ ಪಟ್ಟಿಯನ್ನು ನಾಳೆ ಬೆಂಗಳೂರಿಗೆ ರವಾ ನಿಸಲಾಗುತ್ತಿದೆ. ಜು.೧೯ರಂದು ದಸರಾ ಉನ್ನತ ಸಮಿತಿ ಸಭೆ ನಡೆಯಲಿದ್ದು, ಅದ ರಲ್ಲಿ ೧೪ ಅಥವಾ ೧೫ ಆನೆಗಳ ಒಳಗೊಂಡ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ
ಅರಣ್ಯಾಧಿಕಾರಿಗಳ ತಂಡ ಆನೆಗಳ ಆರೋಗ್ಯ ತಪಾಸಣಾ ಪ್ರಕ್ರಿಯೆ ಯನ್ನು ಪೂರ್ಣ ಗೊಳಿಸಿದೆ. ಅವುಗಳ ಆರೋಗ್ಯ ಸ್ಥಿತಿ, ಮದದ ಮುನ್ನೆಚ್ಚರಿಕೆ, ದೇಹದ ಸದೃಢತೆ ಇತ್ಯಾದಿ ಅಂಶವನ್ನು ಪರಿಗಣ ಸಲಾಗಿದೆ. ಅಲ್ಲದೆ ಹೆಣ್ಣಾನೆಗಳ ದೇಹ ಸ್ಥಿತಿ ಬಗ್ಗೆಯೂ ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ‘ಮೈಸೂರು ಮಿತ್ರ’ ನೊಂದಿಗೆ ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ, ಇಂದು ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪಶುವೈದ್ಯರೊಂದಿಗೆ ಪರಿಶೀಲಿಸಲಾಗಿದೆ. ನಾಲ್ಕು ಆನೆ ಶಿಬಿರಗಳು ಒಟ್ಟು ೩೦ ಆನೆಗಳಲ್ಲಿ ೨೦ ಆನೆಗಳ ಪಟ್ಟಿ ಮಾಡಲಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಸಾಲಾನೆ, ನಿಶಾನೆ ಆನೆ, ಪಟ್ಟದ ಆನೆ ಹಾಗೂ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಪರಿಗಣ ಸಿ ಈ ಬಾರಿ ೧೪ ಅಥವಾ ೧೫ ಆನೆಗಳನ್ನು ಕರೆತರಲು ಉದ್ದೇಶಿಸಲಾಗಿದೆ. ಎರಡು ಹಂತದಲ್ಲಿ ಆನೆಗಳನ್ನು ಕರೆತರಲಾಗುತ್ತದೆ. ಉನ್ನತ ಸಮಿತಿ ಸಭೆ ನಡೆದ ನಂತರ ಆಯ್ಕೆ ಮಾಡಿರುವ ಆನೆಗಳಿರುವ ಕ್ಯಾಂಪ್‌ಗಳ ಅಧಿಕಾರಿಗ ಳೊಂದಿಗೆ ಸಭೆ ನಡೆಸಲಾಗುತ್ತದೆ. ಪ್ರಸ್ತುತ ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾ ಚರಣೆಗೆ ಸಾಕಾನೆ ಬಳಸಿಕೊಳ್ಳಬೇಕಾಗಿರುವುದರಿಂದ ಎಲ್ಲಾ ಅಂಶಗಳನ್ನು ಒಳಗೊಂಡAತೆ ಆನೆಗಳ ಆಯ್ಕೆ ಪರಿಗಣ ಸಲಾಗಿದೆ. ಈ ಸಂದರ್ಭದಲ್ಲಿ ಆರ್‌ಎಫ್ ಸಂತೋಷ್ ಹೂಗಾರ್, ಸಂಬAಧಪಟ್ಟ ಕ್ಯಾಂಪ್ ಗಳ ಪಶುವೈದ್ಯರು, ಆರ್‌ಎಫ್‌ಓ ಹಾಗೂ ಇನ್ನಿತರರು ಇದ್ದರು.

Translate »