ಉದ್ಘಾಟನೆಗೆ ಮುನ್ನವೇ ಮೈಸೂರಿನ `ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಡಿಮ್ಯಾಂಡ್
ಮೈಸೂರು

ಉದ್ಘಾಟನೆಗೆ ಮುನ್ನವೇ ಮೈಸೂರಿನ `ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಡಿಮ್ಯಾಂಡ್

July 17, 2022

ಮೈಸೂರು, ಜು.೧೬-ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ‘ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ಗೆ ಭಾರೀ ಬೇಡಿಕೆ ಬಂದಿದ್ದು, ಈಗಾ ಗಲೇ ಇಲ್ಲಿ ಕಾರ್ಯಾರಂಭ ಮಾಡಲು ಸುಮಾರು ೧೫ ಕಂಪನಿಗಳು ಮುಂದೆ ಬಂದಿವೆ ಎಂದು ಹೇಳಲಾಗಿದೆ.

ಈವರೆಗೆ ಮಂದಗತಿಯಿAದ ಸಾಗುತ್ತಿದ್ದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಕಟ್ಟಡ ಕಾಮಗಾರಿ ಇದೀಗ ಚುರುಕು ಗೊಂಡಿದ್ದು, ದಸರಾ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್‌ಟಿಪಿಐ (ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ. ಮೈಸೂರಿ ನಲ್ಲಿ ೨೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆವರಣವು ೨.೩೬ ಎಕರೆ ವಿಸ್ತಾರವಾಗಿದ್ದು, ಕಟ್ಟಡವು ೪೦ ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಪಾರ್ಕ್ನಲ್ಲಿ ನೆಲಮಹಡಿ ಸೇರಿ ದಂತೆ ಮೂರು ಅಂತಸ್ತಿನ ಕಟ್ಟಡ, ೨೦೦ ವರ್ಕ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತ್ಯೇಕವಾಗಿ ಸಭಾಂಗಣ, ಮೀಟಿಂಗ್ ಹಾಲ್, ಕಾನ್ಫರೆನ್ಸ್ ಹಾಲ್, ಚರ್ಚಾ ಕೊಠಡಿ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸುವ ಮೂಲಕ ಸಾಫ್ಟ್ವೇರ್ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸ ಲಾಗುತ್ತಿದೆ. ರಾಜಧಾನಿ ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದೆ. ದಶಪಥ ರಸ್ತೆ ಕಾಮಗಾರಿ ಮುಗಿದರೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗವಾಗುತ್ತದೆ. ೩ ಗಂಟೆ ಪ್ರಯಾಣ ಕೇವಲ ಒಂದೂವರೆ ಗಂಟೆಗೆ ಇಳಿಯಲಿದೆ. ಅಲ್ಲದೆ, ಸಾಫ್ಟ್ವೇರ್ ರಫ್ತಿನಲ್ಲೂ ಮೈಸೂರು ಮುಂಚೂಣ ಯಲ್ಲಿದೆ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯಾಗುತ್ತಿದೆ. ಇದರ ಜತೆಗೆ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾದರೆ ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಹೊಸ ಹೊಸ ಸ್ಟಾರ್ಟ್ ಅಪ್‌ಗಳು ಆರಂಭವಾಗುತ್ತವೆ. ಇದು ನವೋದ್ಯಮಿಗಳ ಉತ್ತೇಜನಕ್ಕೆ ವಿಫುಲ ಅವಕಾಶ ನೀಡಲಿದೆ.

ಬೆಂಗಳೂರು, ಭುವನೇಶ್ವರ, ಪುಣೆಯಲ್ಲಿ ಈಗಾಗಲೇ ಎಸ್‌ಟಿಪಿಐ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ೧೯೯೧ರಲ್ಲಿ ಸಾಫ್ಟ್ವೇರ್ ರಫ್ತನ್ನು ಉತ್ತೇಜಿಸಲು ಕೇಂದ್ರ ಸರಕಾರ ಸಾಫ್ಟ್ವೇರ್ ಪಾರ್ಕ್ ಆಫ್ ಇಂಡಿಯಾ ಸ್ಥಾಪನೆ ಮಾಡಿದೆ. ಇದುವರೆಗೆ ದೇಶದಲ್ಲಿ ೬೨ ಕೇಂದ್ರಗಳಿದ್ದು, ೧೯೯೮ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೈಸೂರಿನಲ್ಲಿ ಕೇಂದ್ರ ಸ್ಥಾಪಿಸಿದ್ದರು. ಈ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ನಿಂದ ನವ ಉದ್ಯಮ ಆರಂಭಿಸುವ ಕನಸು ಹೊತ್ತವರಿಗೆ ಅನುಕೂಲವಾಗಲಿದೆ.

Translate »