ಕೊಡಗಲ್ಲಿ ಮಹಾಮಳೆಗೆ ಮೊದಲ ಬಲಿ ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಸಾವು
ಮೈಸೂರು

ಕೊಡಗಲ್ಲಿ ಮಹಾಮಳೆಗೆ ಮೊದಲ ಬಲಿ ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಸಾವು

July 17, 2022

ಮಳೆ ತಗ್ಗಿದರೂ ಜನರ ದುಗುಡ ತಪ್ಪಿಲ್ಲ

೧೦ ಅಡಿ ಆಳಕ್ಕೆ ಕುಸಿದ ಕಾಫಿ ತೋಟ

ಅಪಾಯ ಸ್ಥಿತಿಯಲ್ಲಿ ಮನೆ

ಕೊಚ್ಚಿ ಹೋದ ಸೇತುವೆ ಮಣ್ಣು

 ದ್ವೀಪದಂತಾದ ಗ್ರಾಮ

ಮಡಿಕೇರಿ,ಜು.೧೬-ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿ ದ್ದರೂ, ಇದರಿಂದ ಭಾರೀ ಹಾನಿಯಾಗಿದೆ. ಜೊತೆಗೆ ಒಂದು ಜೀವ ಬಲಿಯಾಗಿದೆ.

ಸ್ನಾನದ ಮನೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಸುಳುಗಳಲೆ ಗ್ರಾಮದ ವೃದ್ಧೆ ವಸಂತಮ್ಮ (೭೦) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನ ಪ್ಪಿದ್ದಾರೆ. ಶಾಂತಳ್ಳಿ ಹೋಬಳಿ ದುಂಡಳ್ಳಿ ಗ್ರಾಪಂ ವ್ಯಾಪ್ತಿಯ ಸುಳುಗಳಲೆ ಗ್ರಾಮ ದಲ್ಲಿ ಜು.೫ರಂದು ಸುರಿದ ಭಾರೀ ಮಳೆ ಯಿಂದಾಗಿ ವಸಂತಮ್ಮ ಅವರ ಸ್ನಾನ ಗೃಹದ ಗೋಡೆ ಕುಸಿದು ಬಿದ್ದಿತ್ತು. ವಸಂತಮ್ಮ ಅವರ ತಲೆ, ಎದೆ, ಕಣ ್ಣಗೆ ಗಂಭೀರ ಗಾಯ ಗಳಾಗಿತ್ತು. ತಕ್ಷಣ ಅವರನ್ನು ಶನಿವಾರ ಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿತು. ೧೦ ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ವಸಂತಮ್ಮ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದಲ್ಲಿ ಬೋಪಯ್ಯ ಎಂಬುವರ ಮನೆ ಸಮೀಪದಲ್ಲೇ ಅಂದಾಜು ಅರ್ಧ ಎಕರೆ ಕಾಫಿ ತೋಟ ಕಂದಕದಲ್ಲಿ ೧೦ ಅಡಿಗಳ ಆಳ ಕುಸಿದಿದೆ. ಈಗ ಬೋಪಯ್ಯ ಅವರ ಮನೆ ಅಪಾಯ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ಹೋಬಳಿಯ ೨ನೇ ಮೊಣ್ಣಂಗೇರಿ ಗ್ರಾಮದಲ್ಲಿರುವ ರಾಮನಕುಳ್ಳಿ ಸೇತುವೆ ನಿರ್ಮಾಣ ಹಂತದಲ್ಲಿದ್ದು, ಸೇತುವೆಯ ಎರಡೂ ಬದಿಯ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಅಲ್ಲಿನ ನಿವಾಸಿಗಳ ಸಂಚಾರಕ್ಕಾಗಿ ಸ್ಥಳದಲ್ಲಿ ಮರದ ತಾತ್ಕಾ ಲಿಕ ಸೇತುವೆ ಅಳವಡಿಸಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿ ನೆಲೆ ಸಿರುವ ೨೦ ಕುಟುಂಬಗಳಿಗೆ ೧೫ ದಿನಕ್ಕಾ ಗುವಷ್ಟು ಪಡಿತರ ವಿತರಿಸಲಾಗಿದೆ.

ದ್ವೀಪದಂತಾದ ಗ್ರಾಮ: ಚೇರಂಬಾಣೆ ಸಮೀಪದ ದೋಣ ಕಡವು ಎಂಬ ಪ್ರದೇಶ ದಲ್ಲಿ ಕಾವೇರಿ ನದಿ ಪ್ರವಾಹ ಉಕ್ಕೇರಿದ್ದು, ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಕಳೆದ ೧ ವಾರದಿಂದ ಈ ಗ್ರಾಮ ದ್ವೀಪ ದಂತಾಗಿದ್ದು, ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ. ಸ್ಥಳದಲ್ಲಿ ಜಿಲ್ಲಾಡಳಿತ ದೋಣ ವ್ಯವಸ್ಥೆ ಮಾಡಿದ್ದು, ಗ್ರಾಮಸ್ಥರ ಸಂಚಾರಕ್ಕೆ ದೋಣ ಯೇ ಆಸರೆಯಾಗಿದೆ. ಶನಿವಾರ ಘಟನಾ ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೋಣ ಯಲ್ಲೇ ದೋಣ ಕಡವು ಗ್ರಾಮಕ್ಕೆ ತೆರಳಿದ ಶಾಸಕರು ಅಲ್ಲಿನ ಗ್ರಾಮಸ್ಥರಿಗೆ ಪಡಿತರ ಕಿಟ್ ಮತ್ತು ದೋಣ ಯ ನಾವಿಕರಿಗೆ ೧೦ ಲೈಫ್ ಸೇವ್ ಜಾಕೆಟ್‌ಗಳನ್ನು ವಿತರಿಸಿದರು. ದೋಣ ಯಲ್ಲಿ ಗ್ರಾಮಸ್ಥರನ್ನು ಕರೆದೊಯ್ಯುವ ಸಂದರ್ಭ ಕಡ್ಡಾಯವಾಗಿ ಪ್ರತಿ ಪ್ರಯಾಣ ಕ ರಿಗೂ ಲೈಫ್‌ಸೇವ್
ಜಾಕೆಟ್ ನೀಡುವಂತೆ ಶಾಸಕ ಬೋಪಯ್ಯ ನಾವಿಕರಿಗೆ ಸೂಚಿಸಿದರು. ಮಳೆಯ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಚೆಸ್ಕಾಂ, ಜಿಲ್ಲಾದ್ಯಂತ ಸಮಾರೋಪಾದಿಯಲ್ಲಿ ದುರಸ್ಥಿ ಕಾರ್ಯ ನಡೆಸುತ್ತಿದೆ. ಹೀಗಿದ್ದರೂ ಗ್ರಾಮೀಣ ಭಾಗಗಳಿಗೆ ಇನ್ನೂ ವಿದ್ಯುತ್ ಪೂರೈಕೆ ಸಾಧ್ಯವಾಗಿಲ್ಲ. ಗಾಳಿ ಮಳೆಯಿಂದ ಬೇಟೋಳಿಯಲ್ಲಿ ಹೈಟೆನ್ಶ್ನ್ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಚೆಸ್ಕಾಂ ಕೋರಿಕೆಯ ಮೇರೆಗೆ ಎನ್‌ಡಿಆರ್‌ಎಫ್ ರಕ್ಷಣಾ ತಂಡ ಸ್ಥಳಕ್ಕೆ ತೆರಳಿ ವಿದ್ಯುತ್ ಲೈನ್ ದುರಸ್ಥಿಪಡಿಸುವಲ್ಲಿ ಯಶಸ್ವಿಯಾಗಿದೆ. ಹಾಲುಗುಂದ ಗ್ರಾಮದಲ್ಲಿ ಕಾವೇರಿ ನದಿ ಪ್ರವಾಹ ಕಂಡು ಬಂದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭಾರೀ ಗಾಳೀ ಮಳೆಗೆ ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳಿಗೆ ಹಾನಿಯಾಗಿದ್ದು, ಸುರಿಯುತ್ತಿರುವ ಮಳೆಯ ಮತ್ತು ಪ್ರವಾಹ ಸ್ಥಳದಲ್ಲಿ ಚೆಸ್ಕಾಂ ಸಿಬ್ಬಂದಿ ದುರಸ್ಥಿ ಕಾರ್ಯ ನಡೆಸುತ್ತಿದ್ದಾರೆ.

ಮನೆ ಹಾನಿ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೧ನೇ ವಾರ್ಡ್ ನಿವಾಸಿ ಮಲ್ಲಿಗೆ ಎಂಬುವರ ಮನೆ ಕುಸಿದು ಬಿದ್ದಿದ್ದು, ಹಾನಿ ಸಂಭವಿಸಿದೆ. ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ಮಳೆಯಿಂದಾಗಿ ಕುಶಾಲನಗರ ಬೆಂಡೆಬೆಟ್ಟ ಹಾಡಿಯ ಕುರುಬರ ಜಯ ಎಂಬುವರ ಮನೆಯ ಒಂದು ಭಾಗ ಕುಸಿದು ಬಿದ್ದು, ಹಾನಿಯಾಗಿದೆ. ಕರಡಿಗೋಡು ಕಾವೇರಿ ನದಿ ಪ್ರವಾಹ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದರು. ನೆಲ್ಯಹುದಿಕೇರಿ ಯಲ್ಲೂ ಒಂದು ಮನೆ ಕುಸಿದು ಬಿದ್ದು, ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಜಾನುವಾರು ಸಾವು: ದಕ್ಷಿಣ ಕೊಡಗಿನ ನಾಲ್ಕೇರಿ ನಿವಾಸಿ ಮಂಡೆಟಿರ ಪ್ರಭು ಎಂಬುವರಿಗೆ ಸೇರಿದ ಹಸುವೊಂದು ಉಕ್ಕಿ ಹರಿಯುತ್ತಿರುವ ಕಿರು ತೊರೆಗೆ ಬಿದ್ದು ಸಾವನ್ನಪ್ಪಿದೆ. ಶ್ರೀಮಂಗಲ ಹೋಬಳಿ ಕೆ.ಬಾಡಗ ಗ್ರಾಮ ನಿವಾಸಿ ಜಾಯ್ ಅಯ್ಯಪ್ಪ ಅವರಿಗೆ ಸೇರಿದ ಹಸು ಶೀತ ವಾತಾವರಣದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

Translate »