ನಾವು ಕೇಳಿದ್ದು ಸ್ವಲ್ಪ… ಆದರೆ, ಕೇಂದ್ರ ನೀಡಿದ್ದೇ ಹೆಚ್ಚು
ಮೈಸೂರು

ನಾವು ಕೇಳಿದ್ದು ಸ್ವಲ್ಪ… ಆದರೆ, ಕೇಂದ್ರ ನೀಡಿದ್ದೇ ಹೆಚ್ಚು

August 17, 2021

ಮೈಸೂರು, ಆ.16(ಆರ್‍ಕೆಬಿ)- ನಾವು ಕೇಳಿದ್ದು ಸ್ವಲ್ಪ, ಆದರೆ ಕೇಂದ್ರ ಸರ್ಕಾರ ನಮಗೆ ನೀಡಿದ್ದೇ ಹೆಚ್ಚು ಎಂದು ಕರ್ನಾ ಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹ ಕಾರಿ ಸಂಘದÀ ಅಧ್ಯಕ್ಷ ಬಿ.ಹೆಚ್‍ಕೃಷ್ಣಾರೆಡ್ಡಿ ಸಹಕಾರಿಗಳ ಸಂಘಗಳ ಪರವಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು.
ಮೈಸೂರಿನ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಆಯೋಜಿ ಸಿದ್ದ ಮೈಸೂರು, ಮಂಡ್ಯ, ಚಾಮರಾಜ ನಗರ ಮತ್ತು ಕೊಡಗು ಜಿಲ್ಲೆಗಳ ಸೌಹಾರ್ದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ಶೇ.25ರಷ್ಟು ಪ್ರತಿನಿಧಿಸುವವರಿಗೆ ಆದ್ಯತೆ ಇರಲಿಲ್ಲ. ಈಗ ಸಚಿವಾಲಯವನ್ನೇ ಕೇಂದ್ರ ಸರ್ಕಾರ ಆರಂಭಿಸಿದೆ. ಇದು ಒಳ್ಳೆಯ ಬೆಳವಣಿಗೆ. ಇದುವರೆಗೂ ನಾವು ನಮ್ಮ ಸಮಸ್ಯೆಗಳ ಬಗ್ಗೆ ಕೃಷಿ ಮತ್ತು ಹಣಕಾಸು ಸಚಿವರನ್ನೇ ಅವಲಂಬಿಸ ಬೇಕಿತ್ತು ಎಂದರು.
ಹಸಿರು ಹಾಗೂ ಹಾಲಿನ ಕ್ರಾಂತಿಯಲ್ಲಿ ಅತ್ಯಂತ ದೊಡ್ಡ ಕೊಡುಗೆ ನೀಡಿರುವ ಸಹ ಕಾರ ಕ್ಷೇತ್ರದ ಸದಸ್ಯರಿಲ್ಲದ ಗ್ರಾಮವೇ ಇಲ್ಲ. ರಾಜ್ಯದಲ್ಲಿ 8.5 ಲಕ್ಷ ಸಹಕಾರಿ ಸಂಘಗಳಿವೆ. 30.5 ಕೋಟಿ ಸದಸ್ಯ ರಿದ್ದಾರೆ. ಇಂತಹ ಸಹಕಾರಿಗಳು ತಮ್ಮ ಯಾವುದೇ ಬೃಹತ್ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪರ ದಾಡುತ್ತಿದ್ದೆವು. ಇದೀಗ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೇ ಪ್ರತ್ಯೇಕ ಸಚಿವಾಲಯ ತೆರೆಯುವ ಮೂಲಕ ನಮ್ಮ ಬಹು ದೊಡ್ಡ ಸಮಸ್ಯೆಯನ್ನು ಕೇಂದ್ರ ಸರ್ಕಾರ ಪರಿ ಹರಿಸುವ ಕೆಲಸ ಮಾಡಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್‍ಷಾ ಅವರನ್ನು ಸಹಕಾರಿಗಳ ಪರವಾಗಿ ಅಭಿನಂದಿಸು ವುದಾಗಿ ತಿಳಿಸಿದರು.

ಸಹಕಾರಿ ಬ್ಯಾಂಕ್ ವಿಫಲವಾದರೆ 90 ದಿನಗಳಲ್ಲಿ 5 ಲಕ್ಷ ರೂ.ವಿಮೆ ಸಿಗಬೇಕು ಎನ್ನುವ ತಿದ್ದುಪಡಿ ಕಾಯ್ದೆ ಜಾರಿ ಗೊಳಿಸಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ ಬಿರಾದಾರ, ನಿರ್ದೇಶಕರಾದ ಎಸ್.ಕೆ.ಮಂಜನಾಥ್, ವೃತ್ತಿಪರ ನಿರ್ದೇಶಕ ಬಿ.ಸದಾಶಿವಶೆಟ್ಟಿ, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂ ಟದ ಅಧ್ಯಕ್ಷ ಎಸ್.ಆರ್.ನಾರಾಯಣ ರಾವ್, ಮಾಜಿ ನಿರ್ದೇಶಕ ಸೋಮೇಶ್, ಜಿಲ್ಲಾ ಸಂಯೋಜಕ ಆರ್.ಎಸ್.ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »