ನಮ್ಮ ರೈತರೇ ಎಣ್ಣೆಕಾಳು ಬೆಳೆದರೆ ಖಾದ್ಯತೈಲ ಕೊರತೆ ನಿವಾರಣೆ
ಮೈಸೂರು

ನಮ್ಮ ರೈತರೇ ಎಣ್ಣೆಕಾಳು ಬೆಳೆದರೆ ಖಾದ್ಯತೈಲ ಕೊರತೆ ನಿವಾರಣೆ

August 18, 2021

ಮೈಸೂರು,ಆ.17(ಆರ್‍ಕೆಬಿ)-ಭಾರತದಲ್ಲಿ ಆಹಾರದ ಕೊರತೆ ಇಲ್ಲ. ಆದರೆ ಖಾದ್ಯ ತೈಲದ ಕೊರತೆ ಎದು ರಾಗಿದೆ. ಶೇ.70ರಷ್ಟು ಮಲೇಷಿಯಾ ಇನ್ನಿತರೆ ದೇಶ ಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಾವು ಖಾದ್ಯ ತೈಲ ಖರೀದಿಗೆ ಹೆಚ್ಚು ಹಣ ವ್ಯಯ ಮಾಡು ತ್ತಿದ್ದೇವೆ. ಪಾಮ್ ಆಯಿಲ್ ಆರೋಗ್ಯಕರವಲ್ಲ. ಹಾಗಾಗಿ ಖಾದ್ಯ ತೈಲ ಕೊರತೆ ನೀಗಿಸಲು ನಮ್ಮ ರೈತರೇ ಎಣ್ಣೆ ಕಾಳುಗಳನ್ನು ಬೆಳೆಯಲು ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ನಂ.1 ಆಗ ಬೇಕು. ಆಹಾರ ರಫ್ತಿನಲ್ಲಿ ಮೇಲ್ಪಂಕ್ತಿಗೆ ಬರುವ ನಿಟ್ಟಿ ನಲ್ಲಿ 7 ವರ್ಷದಲ್ಲಿ ನಾವು 9ನೇ ಸ್ಥಾನದಲ್ಲಿದ್ದೇವೆ. ಜಿಡಿಪಿ ಯಲ್ಲಿ ಕೃಷಿಯ ಪಾಲು ಶೇ.14 ಇದ್ದದ್ದು 7 ವರ್ಷ ಗಳ ಅವಧಿಯಲ್ಲಿ ಅದು 20ಕ್ಕೆ ತಲುಪಿದೆ. ಕೋವಿಡ್ ಸಂದರ್ಭದಲ್ಲಿಯೂ ಸಾಗಾಣಿಕೆ ವ್ಯವಸ್ಥೆ ಕಷ್ಟವಾಗಿ ದ್ದರೂ ದಾಖಲೆ ರೀತಿಯಲ್ಲಿ ರೈತರ ಪರಿಶ್ರಮದಿಂದ 305 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಯಾಗಿದೆ. 326 ಮೆಟ್ರಿಕ್ ಟನ್ ಹಣ್ಣು ಹಂಪಲು ಬೆಳೆದಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಅತೀ ಸಣ್ಣ ರೈತರನ್ನು ಒಟ್ಟುಗೂಡಿಸಿ ಕೃಷಿ ಮಾಡುವ ಬಗ್ಗೆ ಪ್ರಧಾನಿ ಆಶಯ ಹೊಂದಿದ್ದಾರೆ ಎಂದರು.
ಫಸಲ್ ಭೀಮಾ ಯೋಜನೆಯನ್ನು ಪ್ರಧಾನಿ ಸರಳೀ ಕರಣಗೊಳಿಸಿದ್ದಾರೆ. ರೈತರು ಆ್ಯಪ್ ಮೂಲಕ ತಾವೇ ತಮ್ಮ ಬೆಳೆಯ ಸರ್ವೆ ನಡೆಸಿ ಫೋಟೋ ತೆಗೆದು ಹಾಕು ವುದು. ಬೆಳೆ ನಾಶವಾದ 2 ತಿಂಗಳ ಒಳಗೆ ರೈತರು ಮಾಹಿತಿ ರವಾನಿಸಿದರೆ ಅದಕ್ಕೆ ಸೂಕ್ತ ವಿಮಾ ಸೌಲಭ್ಯವಿದೆ. ಈ ಆ್ಯಪ್ ಸೌಲಭ್ಯ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಖಾರಿಫ್ ಸೀಸನ್ ರೈತ ಬೆಳೆ ಸಮೀಕ್ಷಾ ಆ್ಯಪ್. ಈ ಯೋಜನೆ ದೇಶದಾದ್ಯಂತ ವಿಸ್ತರಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕೃಷಿಗೆ ಪ್ರಧಾನಿ ಮೋದಿ ಆದ್ಯತೆ: ಕೃಷಿ ಸಚಿವಾಲ ಯದ ಬಗ್ಗೆ ಅಧ್ಯಯನ ಮಾಡಲು ನನಗೆ ಕನಿಷ್ಠ 3 ತಿಂಗಳಾದರೂ ಬೇಕು. ಕೃಷಿ ಮತ್ತು ರೈತರ ಕಲ್ಯಾಣ ಬರೀ ಭಾಷಣದಿಂದ ಆಗುವುದಿಲ್ಲ. ಆದರೆ ಮೋದಿ ಪ್ರಧಾನಿಯಾದ ನಂತರ ರೈತರ ಕಲ್ಯಾಣಕ್ಕಾಗಿ ನೀಡಿದ ಹಣ ಎಷ್ಟು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. 2013-14ರ ಕೃಷಿ ಬಜೆಟ್ ತೆಗೆದುಕೊಂಡರೆ, ಯುಪಿಎ ಚುನಾವಣೆಗೆ ಹೋಗುವ ಮುನ್ನ 21,000 ಕೋಟಿ ರೂ. ಮಾತ್ರ. ಆದರೆ ಮೋದಿ ಸರ್ಕಾರ 2021-22 ರಲ್ಲಿ ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗೆ ಕೊಟ್ಟಿದ್ದು, 1,23,000 ಕೋಟಿ ರೂ., ಕೃಷಿಯ ಇತರೆ ವೆಚ್ಚಗಳಿಗೆ 8,500 ಕೋಟಿ ನೀಡಿದ್ದಾರೆ. 2012-14ರ ಬಜೆಟ್‍ಗೆ ಹೋಲಿಸಿದರೆ ಶೇ.460ರಷ್ಟು ಹೆಚ್ಚು.

ದೆಹಲಿಯಲ್ಲಿ ಹೋರಾಟ ರೈತರದ್ದಲ್ಲ.. ದಲ್ಲಾಳಿಗಳದ್ದು..: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಬಗ್ಗೆ ಪ್ರಸ್ತಾಪಿಸಿದ ಅವರು, ಅಲ್ಲಿ ಪ್ರತಿಭಟನೆ ನಡೆಸು ತ್ತಿರುವವರು ಪಂಜಾಬ್, ಹರಿಯಾಣದವರು. ಅವರು ರೈತರಲ್ಲ. ಎಪಿಎಂಸಿ ದಲ್ಲಾಳಿಗಳು. 11 ಬಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರೂ ಅವರು ಹೋರಾಟ ಕೈಬಿಡಲು ಸಿದ್ಧರಿಲ್ಲ.

ಪಂಜಾಬ್ ಎಪಿಎಂಸಿ ದೊಡ್ಡ ಲಾಬಿ. ಎಪಿಎಂಸಿಯ ಮಧ್ಯವರ್ತಿಗಳು ರೈತರಿಗೆ ಮೋಸ ಮಾಡುತ್ತಿರು ವವರು ಅಲ್ಲಿ ಧರಣಿ ಕುಳಿತಿದ್ದಾರೆ. ರೈತರನ್ನು ಒಪ್ಪಿಸಿ, ನಿದ್ದೆಯಿಂದ ಎಚ್ಚರಿಸಬಹುದು. ಆದರೆ ನಿದ್ದೆ ಮಾಡು ವವರಂತೆ ನಟಿಸುವವರನ್ನು ನಂಬಲಾಗುವುದಿಲ್ಲ. ಧÀರಣಿ ನಡಸುತ್ತಿರುವವರು ಮಧ್ಯವರ್ತಿಗಳ ಪರ ವಾಗಿಯೇ ಹೊರತು, ರೈತರ ಹಿತದೃಷ್ಟಿಯಿಂದ ಅಲ್ಲ. ಎಪಿಎಂಸಿಗೆ ಬರುವ ಲಾಭ, ಕಮಿಷನ್ ಹೋಗು ತ್ತದೆಂಬ ಕಾರಣಕ್ಕಾಗಿ ಧರಣಿ ನಡೆಸುತ್ತಿದ್ದಾರಷ್ಟೆ. ಎಪಿ ಎಂಸಿ ಕಾಯ್ದೆಯಿಂದ ರೈತರು ತಮಗಿಷ್ಟವಾದ ಕಡೆ ತಾನು ಬೆಳೆದ ಬೆಳೆ ಮಾರಾಟ ಮಾಡಲು ಅವಕಾಶ ವಾಗಿದೆ. ಆದರೂ ಪ್ರತಿಭಟನಾನಿರತ ಮಧ್ಯವರ್ತಿ ಗಳೊಂದಿಗೂ ಮಾತುಕತೆ ನಡೆಸಿ, ಅವರನ್ನು ಒಪ್ಪಿಸುವ ಪ್ರಯತ್ನ ಮುಂದುವರಿಸುತ್ತೇವೆ. ಆದರೆ ರೈತರಿಗೆ ಯಾವುದೇ ತೊಂದರೆ ಆಗುವುದನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಏಕೆಂದರೆ ಮಧ್ಯವರ್ತಿಗಳನ್ನು ಬೆಂಬಲಿಸುವ ಬೇರೆ ಬೇರೆ ಶಕ್ತಿಗಳಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್‍ಸಿಂಹ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಮುನಿರಾಜೇಗೌಡ, ಮೈ.ವಿ. ರವಿಶಂಕರ್, ಎಂ.ಮೋಹನ್ ಉಪಸ್ಥಿತರಿದ್ದರು.

Translate »