ಮೈಸೂರು, ಆ.17(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗಿದ್ದು, ಮಂಗಳವಾರ 88 ಮಂದಿಗೆ ಸೋಂಕು ತಗುಲಿದೆ. ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ 131 ಮಂದಿ ಗುಣಮುಖರಾಗಿದ್ದು, ಈವರೆಗೆ 1,71,340 ಮಂದಿ ಗುಣ ಕಂಡಿದ್ದಾರೆ. ಈವರೆಗೆ 1,74,767 ಮಂದಿಗೆ ಸೋಂಕು ತಗುಲಿದೆ. ಈವರೆಗೆ 2,340 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿನ್ನೂ 1,087 ಸಕ್ರಿಯ ಪ್ರಕರಣಗಳಿವೆ.
ರಾಜ್ಯ: ಬಳ್ಳಾರಿ 5, ಬೆಳಗಾವಿ 27, ಬೆಂಗಳೂರು ಗ್ರಾಮಾಂ ತರ 30, ಬೆಂಗಳೂರು ನಗರ 340, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 59, ಚಿತ್ರದುರ್ಗ 7, ದಕ್ಷಿಣ ಕನ್ನಡ 288, ದಾವಣಗೆರೆ 14, ಧಾರವಾಡ 5, ಹಾಸನ 66, ಹಾವೇರಿ 1, ಕಲಬುರಗಿ 4, ಕೊಡಗು 37, ಕೋಲಾರ 17, ಕೊಪ್ಪಳ 1, ಮಂಡ್ಯ 18, ಮೈಸೂರು 88, ರಾಮನಗರ 3, ಶಿವಮೊಗ್ಗ 51, ತುಮಕೂರು 52, ಉಡುಪಿ 122, ಉತ್ತರ ಕನ್ನಡ 48, ವಿಜಯ ಪುರ 2, ಯಾದಗಿರಿ 3 ಸೇರಿ ರಾಜ್ಯದಲ್ಲಿ ಮಂಗಳವಾರ 1,298 ಪಾಸಿಟಿವ್ ಪ್ರಕರಣ ಪತ್ತೆ ಯಾಗಿವೆ. ಆದರೆ, ಬಾಗಲಕೋಟೆ, ಬೀದರ್, ರಾಯಚೂರು ಜಿಲ್ಲೆಯಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ. ಇದ ರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,31, 827ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾದ 1,833 ಮಂದಿ ಸೇರಿ ಈವರೆಗೆ 28,73,281 ಸೋಂಕಿತರು ಗುಣ ಕಂಡಿದ್ದಾರೆ.
ರಾಜ್ಯದಲ್ಲಿ ಮಂಗಳವಾರ 32 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 37,039ಕ್ಕೆ ಏರಿದೆ. 21,481 ಸಕ್ರಿಯ ಪ್ರಕರಣಗಳಿವೆ.