ಸಣ್ಣ ರೈತರಿಗೆ ಸಾಲ, ವಲಸೆ ಕಾರ್ಮಿಕರಿಗೆ ಸುರಕ್ಷತೆ, ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ
ಮೈಸೂರು

ಸಣ್ಣ ರೈತರಿಗೆ ಸಾಲ, ವಲಸೆ ಕಾರ್ಮಿಕರಿಗೆ ಸುರಕ್ಷತೆ, ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ

May 15, 2020

ನವದೆಹಲಿ, ಮೇ 14- ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, 9 ಪ್ರಮುಖ ನಿರ್ಧಾರ ಗಳನ್ನು ಘೋಷಿಸಲಾಗುವುದು. ಅದರಲ್ಲಿ 3 ವಲಸೆ ಕಾರ್ಮಿಕರಿಗೆ, 1 ಮುದ್ರಾ ಯೋಜನೆ ಯೊಂದಿಗೆ ಶಿಶು ಸಾಲ ಮತ್ತೊಂದು ರಸ್ತೆ ಬದಿ ವ್ಯಾಪಾರಿಗಳಿಗೆ ಮಗದೊಂದು ಬುಡಕಟ್ಟು ಜನಾಂಗದವರಿಗೆ, ಇನ್ನೊಂದು ಮಧ್ಯಮ ವರ್ಗದವರಿಗೆ ಹಾಗೂ 2 ನಿರ್ಧಾರ ಗಳು ಸಣ್ಣ ರೈತರನ್ನೊಳಗೊಂಡಿದೆ ಎಂದು ಪ್ರಾರಂಭದಲ್ಲಿ ಹೇಳಿದರು.

ಗ್ರಾಮೀಣ ಭಾಗದ ಜನತೆಗೆ ಬಂಪರ್ ಕೊಡುಗೆ ನೀಡಿದ ಅವರು, ಗ್ರಾಮೀಣಾಭಿ ವೃದ್ಧಿಗೆ 4200 ಕೋಟಿ ರೂ., ಕೃಷಿ ಉತ್ಪಾ ದನೆ ಹೆಚ್ಚಳಕ್ಕೆ 6700 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದರು. ವಲಸೆ ಕಾರ್ಮಿಕ ರಿಗಾಗಿ ನರೇಗಾ ಅಡಿ ಉದ್ಯೋಗ ಸೇರಿ ದಂತೆ 11 ಸಾವಿರ ಕೋಟಿ ರೂ. ವಿಶೇಷ ಆರ್ಥಿಕ ನೆರವು ಘೋಷಿಸಿದ ಅವರು, ಉದ್ಯೋಗ ಖಾತರಿ ಕೂಲಿಯನ್ನು 182 ರೂ.ಗಳಿಂದ 202ಕ್ಕೆ ಹೆಚ್ಚಿಸಿದರು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಇಲ್ಲದವರಿಗೆ ಹಾಗೂ ವಲಸೆ ಕಾರ್ಮಿಕ ರಿಗೆ ಪ್ರತೀ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ ಅಥವಾ ಗೋಧಿ, 1 ಕೆ.ಜಿ. ಬೇಳೆಕಾಳನ್ನು 2 ತಿಂಗಳ ಕಾಲ ಉಚಿತವಾಗಿ ಪೂರೈಸ ಲಿದ್ದು, ಇದರಿಂದ 8 ಕೋಟಿ ವಲಸಿಗರಿಗೆ ಅನುಕೂಲವಾಗಲಿದೆ. ಅದಕ್ಕೆ 3500 ಕೋಟಿ ರೂ. ಮೀಸಲಿರಿಸಿರುವುದಾಗಿ ಅವರು ಹೇಳಿ ದರು. ವಲಸೆ ಕಾರ್ಮಿಕರನ್ನು ಗಮನ ದಲ್ಲಿಟ್ಟುಕೊಂಡು ಯಾವುದೇ ರಾಜ್ಯದವರು ಎಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲವಾಗುವಂತೆ `ಒನ್ ನೇಷನ್-ಒನ್ ರೇಷನ್’ ಪದ್ಧತಿ ಜಾರಿಗೊಳಿಸಲಾಗು ತ್ತಿದ್ದು, ದೇಶಾದ್ಯಂತ ಒಂದೇ ಪಡಿತರ ಚೀಟಿ ವ್ಯವಸ್ಥೆಯನ್ನು 2021ರ ಮಾರ್ಚ್ ಒಳಗಾಗಿ ಸಂಪೂರ್ಣವಾಗಿ ಜಾರಿಗೊಳಿಸಲಾಗುವುದು ಎಂದರು. ವಲಸಿಗರಿಗೆ ನಗರಗಳಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಕೈಗೆಟಕುವ ಬಾಡಿಗೆ ದರದಲ್ಲಿ ನೀಡಲಾಗುವುದು. ವಲಸಿಗರಿಗೆ ವಸತಿ ಸೌಲಭ್ಯ ಒದಗಿಸುವ ಕೈಗಾರಿಕೆಗಳಿಗೆ ಅಗತ್ಯ ನೆರವು ನೀಡಲಾಗುವುದು. ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ ಒಬ್ಬರಿಗೆ 10 ಸಾವಿರ ರೂ. ವಿಶೇಷ ಸಾಲ ನೀಡಲಾಗುವುದು. ಅದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದ್ದು, ಇದರಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದರು. ಮಧ್ಯಮ ವರ್ಗದವರಿಗೂ ಕೊಡುಗೆ ನೀಡಿದ ಅವರು, 6 ರಿಂದ 18 ಲಕ್ಷ ರೂ. ವಾರ್ಷಿಕ ಆದಾಯ ಇರುವವರನ್ನು ಮಧ್ಯಮ ವರ್ಗದವರು ಎಂದು ಪರಿಗಣಿಸಿದ್ದು, 2021ರ ಮಾರ್ಚ್‍ವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಇದರಿಂದ 2.5 ಲಕ್ಷ ಮಂದಿ ಅನುಕೂಲ ಪಡೆಯಲಿದ್ದಾರೆ ಎಂದರು.

ಸಣ್ಣ ರೈತರಿಗೆ ನಬಾರ್ಡ್ ಮೂಲಕ 30 ಸಾವಿರ ಕೋಟಿ ರೂ. ಹೆಚ್ಚುವರಿ ಹಣಕಾಸು ನೆರವನ್ನು ಘೋಷಿಸಿದ ಅವರು, ಕಿಸಾನ್ ಕಾರ್ಡ್‍ಗಳ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ.ಗಳ ರಿಯಾಯಿತಿ ಸಾಲ ನೀಡಲಾಗುವುದು. ಪಿಎಂ ಕಿಸಾನ್ ಕಾರ್ಡ್‍ಗಳಿಗೆ ಮೀನುಗಾರರು ಮತ್ತು ಹೈನುಗಾರಿಕೆ ನಡೆಸುವವರನ್ನು ಸೇರಿಸಲಾಗುವುದು ಎಂದು ಹೇಳಿದರು. ವೇತನ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ದೇಶದ ಎಲ್ಲಾ ಕಾರ್ಮಿಕರಿಗೂ ಕನಿಷ್ಠ ಸಮಾನ ವೇತನ ಜಾರಿ ಮಾಡ ಲಾಗುವುದು. 10ಕ್ಕಿಂತ ಹೆಚ್ಚು ನೌಕರರಿದ್ದರೆ ಅವರಿಗೆ ಇಎಸ್‍ಐ ಸೌಲಭ್ಯ ಕಡ್ಡಾಯ ಗೊಳಿಸಲಾಗುವುದು. ನೌಕರರ ಗ್ರಾಚ್ಯುಯಿಟಿ ಅವಧಿಯನ್ನು 5 ವರ್ಷದಿಂದ 1 ವರ್ಷಕ್ಕೆ ಇಳಿಸಲಾಗುವುದು. ಎಲ್ಲಾ ಉದ್ಯೋಗಗಳಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ದೊರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಲಾಕ್‍ಡೌನ್ ಸಮಯದಲ್ಲಿ 12 ಸಾವಿರ ಸ್ವ-ಸಹಾಯ ಗುಂಪುಗಳು 3 ಕೋಟಿಗೂ ಹೆಚ್ಚು ಮಾಸ್ಕ್ ಹಾಗೂ 1.2 ಲಕ್ಷ ಲೀಟರ್ ಸ್ಯಾನಿಟೈಸರ್‍ಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದ ಅವರು, ಗ್ರಾಮೀಣ ಭಾಗದ ಬಡವರಿಗಾಗಿ 7200 ಹೊಸ ಸ್ವ-ಸಹಾಯ ಗುಂಪುಗಳನ್ನು ಕಳೆದ 2 ತಿಂಗಳಲ್ಲಿ ರಚಿಸಲಾಗಿದೆ ಎಂದರು.

`ಒನ್ ನೇಷನ್-ಒನ್ ರೇಷನ್’  ಅನಿಶ್ಚಿತತೆಯ ವಲಸೆ ಕಾರ್ಮಿಕರಿಗೆ ಉಚಿತ ರೇಷನ್

ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ತಲುಪಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಅವರಿಗೆ 5 ಕೆ.ಜಿ. ಅಕ್ಕಿ ಅಥವಾ ಗೋಧಿ, 1 ಕೆ.ಜಿ. ಬೇಳೆಕಾಳು ಸೇರಿದಂತೆ 2 ತಿಂಗಳಿಗೆ ಉಚಿತವಾಗಿ ರೇಷನ್ ನೀಡಲಾಗುತ್ತಿದ್ದು, ಅದ ರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗ ಲಿದೆ. ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲರಿಗೂ ಅನುಕೂಲವಾಗುವಂತೆ `ಒನ್ ನೇಷನ್-ಒನ್ ರೇಷನ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಗು ವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. `ಒನ್ ನೇಷನ್-ಒನ್ ರೇಷನ್’ ಪಡಿತರ ಚೀಟಿ ವ್ಯವಸ್ಥೆಯಿಂದ ಇಡೀ ದೇಶಾದ್ಯಂತ ಯಾವ ರಾಜ್ಯದವರು ಬೇರೆ ಯಾವ ರಾಜ್ಯದಲ್ಲಿ ಬೇಕಾದರೂ ಪಡಿತರ ಪಡೆಯಬಹುದು. ಈ ವ್ಯವಸ್ಥೆಯನ್ನು 2021ರ ಮಾರ್ಚ್ ಒಳಗಾಗಿ ದೇಶಾದ್ಯಂತ ಸಂಪೂರ್ಣವಾಗಿ ಜಾರಿ ಗೊಳಿಸಲಾಗುವುದು ಎಂದು ಹೇಳಿದರು. ವಲಸೆ ಕಾರ್ಮಿಕರಿಗೆ ದಿನದ 3 ವೇಳೆ ಆಹಾರ ಒದಗಿಸಲು ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುವುದು. ಈ ಸಂಬಂಧ ನೆರವು ಶಿಬಿರಗಳನ್ನು ಆಯೋಜಿಸಲಾಗುವುದು. ಅವರ ಊಟದ ವ್ಯವಸ್ಥೆಗೆ 11 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರು ಈಗ ಇರುವಲ್ಲಿಯೇ ಹೊಸದಾಗಿ ನೋಂದಣಿ ಮಾಡಿಕೊಂಡು ಯೋಜನೆಯ ಉಪಯೋಗ ಪಡೆಯಬಹುದು. ಅವರಿಗೆ ಅಲ್ಲಲ್ಲಿಯೇ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವಲಸೆ ಕಾರ್ಮಿಕರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಬುಡಕಟ್ಟು ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಹೇಳಿದರು.

Translate »