ಪೊಲೀಸ್ ಇಲಾಖೆಗೆ `ಸ್ಥಳೀಯ’ವಾಗಿ ಸರ್ಜರಿ: ಎಸ್‌ಟಿಎಸ್
ಮೈಸೂರು

ಪೊಲೀಸ್ ಇಲಾಖೆಗೆ `ಸ್ಥಳೀಯ’ವಾಗಿ ಸರ್ಜರಿ: ಎಸ್‌ಟಿಎಸ್

August 27, 2021

ಮೈಸೂರು, ಆ.೨೬(ವೈಡಿಎಸ್)- ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಸಂಜೆ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ವಿದ್ದರೆ ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಲಲಿತ್‌ಮಹಲ್ ಹೋಟೆಲ್‌ನ ಶತಮಾನೋತ್ಸವ ಹಿನ್ನೆಲೆ ಹೋಟೆಲ್‌ನಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಘಟನೆ ನಡೆಯಲು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಸಾರ್ವಜನಿಕರು ತೀರ್ಮಾನಿಸಿದ್ದರೆ ಅದಕ್ಕೆ ಸರ್ಕಾರವೂ ಸ್ಪಂದಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿಯಾ ದರೂ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ, ಈ ರೀತಿ ಪೊಲೀಸ್ ಇಲಾಖೆ ವೈಫಲ್ಯವನ್ನು ತೋರಿಸಿಕೊಳ್ಳಬಾರದು. ಇದರಿಂದ ಇಲಾಖೆಯ ಆತ್ಮಸ್ಥೆÊರ್ಯ ಕುಸಿಯಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಘಟನೆಯ ಸಂಬಂಧ ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಪ್ರಕರಣದ ತನಿಖೆಯ ಮೇಲುಸ್ತುವಾರಿಗಾಗಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ನೇಮಿಸಿದ್ದು, ಅವರೂ ನಿನ್ನೆಯಿಂ ದಲೇ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಗೃಹ ಸಚಿವರು ಮೈಸೂರಿಗೆ ಆಗಮಿಸಿ ಪೊಲೀಸ್ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದು ಕೊಳ್ಳಲಿ ದ್ದಾರೆ ಎಂದು ಹೇಳಿದರು. ಇಂಥ ಘಟನೆ ನಡೆಯ ಬಾರ ದಿತ್ತು. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಮುನ್ನೆ ಚ್ಚರಿಕೆ ವಹಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ರಕ್ಷಣೆ ನೀಡಬೇಕೆಂದು ಸೂಚಿಸಿರುವುದಾಗಿ ಸಚಿವರು ತಿಳಿಸಿದರು.

 

Translate »